ಮಾಹಿತಿ ಎಲ್ಲಿಂದ, ಯಾವ ಮೂಲದಿಂದ ಹಂಚುತ್ತಿದ್ದೇವೆ ಎಂದು ತಿಳಿಯುವುದು ಮುಖ್ಯ. ಅಕ್ಷರದೋಷಗಳ ತಿದ್ದುಪಡಿ ಮಾಡುವುದು, ಸರಳಭಾಷೆಯಲ್ಲಿ ತಿಳಿಯದ ವಿಷಯವನ್ನು ಜನ ಸಾಮಾನ್ಯರಿಗೆ ತಲುಪಿಸವುದಕ್ಕೆ ವಿಕಿಪೀಡಿಯ ಎಂಬ ಆಧುನಿಕ ತಂತ್ರಜ್ಞಾನದ ಮೂಲಕ ಸಾಧ್ಯ ಎಂದು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಪ್ರಾಧ್ಯಪಕಿ ದುರ್ಗಾ ಪ್ರಸನ್ನ ಹೇಳಿದರು.
ವಿವೇಕಾನಂದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಐ ಕ್ಯೂ ಎ ಸಿ ಇದರ ಆಶ್ರಯದಲ್ಲಿ ನಡೆದ ವಿಕಿಪೀಡಿಯ ಕಾರ್ಯಗಾರದ ಮುಖ್ಯ ಅತಿಥಿಯಾಗಿ ಮಾತನಾಡಿದ ಇವರು, ವಿಕಿಪೀಡಿಯ ಜ್ಞಾನ ಪಡೆಯುದರ ಜೊತೆಗೆ ಜ್ಞಾನವನ್ನು ಹಂಚುವ ಕಾರ್ಯ ಮಾಡುತ್ತಿದೆ. ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಿರುದರಿಂದ ಪ್ರತಿಯೊಬ್ಬರಿಗೂ ಅರ್ಥಮಾಡಿಕೊಳ್ಳಬಹುದಾದ ಸುಲಭ ಮಾರ್ಗ ಇದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಹಾಗೂ ನಿರ್ದೇಶಕ ಡಾ. ಶ್ರೀಧರ್ ಎಚ್. ಜಿ ಮಾತನಾಡಿ, ಹಿಂದಿನ ಕಾಲದಲ್ಲಿ ಇದರ ಬಳಕೆ ಇರಲಿಲ್ಲ ಹೀಗಾಗಿ ಸಾಕಷ್ಟು ಸವಾಲು ಎದುರಿಸಬೇಕಾಯಿತು. ಆದರೆ ಎಲ್ಲಿ ತಂತ್ರಜ್ಞಾನದ ಯುಗ ಆರಂಭವಾಯಿತೋ ಬೆರಳ ತುದಿಯಲ್ಲಿಯೇ ಮಾಹಿತಿಗಳನ್ನು ಕಲೆ ಹಾಕಲು ಸರಳ ಮಾರ್ಗ ಸಿಕ್ಕಂತಾಗಿದೆ. ಮಾಹಿತಿಗಳು ಎಷ್ಟು ನಿಜ, ಎಷ್ಟು ಸುಳ್ಳು ಎನ್ನುವುದನ್ನು ಪರಿಶೀಲಿಸಿ ನೋಡಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ ಬಿ ಶುಭ ಕೋರಿದರು.
ಕಾರ್ಯಕ್ರಮವನ್ನು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕ ಅಕ್ಷಯ್ ಕುಮಾರ್ ರೈ ಸ್ವಾಗತಿಸಿ, ಉಪನ್ಯಾಸಕ ಸುತನ್ ಕೇವಳ ವಂದಿಸಿದರು. ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ ಹರಿಪ್ರಸಾದ್ ನಿರೂಪಿಸಿದರು.
ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್ Z ಗಾಗಿ…
ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…
ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರು…
ಚಳಿಗಾಲದಲ್ಲಿ ಆಹಾರ ಪದ್ಥತಿಯಲ್ಲೂ ಬದಲಾವಣೆ ಮಾಡಿಕೊಂಡರೆ ಉತ್ತಮ. ಅದರಲ್ಲಿ ಎಳ್ಳು ಸೇವನೆಯೂ ಒಂದು.…
ರಾಜ್ಯ ಸರ್ಕಾರ, ರಾಜಧಾನಿ ಬೆಂಗಳೂರಿನ ನಂತರ ಇದೀಗ ರಾಜ್ಯಾದ್ಯಂತ ಆಸ್ತಿ ಮಾಲೀಕರಿಗೆ ಸಿಹಿ…