ಕುಕ್ಕೆ ಸುಬ್ರಹ್ಮಣ್ಯವನ್ನೂ…… ಪವಿತ್ರ ಕುಮಾರಧಾರ ನದಿಯನ್ನೂ ಮಲಿನ ಮಾಡ್ತೀರಾ….?

March 9, 2025
10:21 PM
ಪವಿತ್ರ ಕುಮಾರಧಾರಾ ನದಿಯನ್ನೂ ಮಲಿನ ಮಾಡಲು ಹೊರಟಿದೆಯಾ ಭಕ್ತ ಸಮೂಹ..? ಅದಕ್ಕೆ ಕೆಲವು ಜ್ಯೋತಿಷಿಗಳೂ ಬೆಂಬಲ ನೀಡುತ್ತಿದ್ದಾರಾ..? ಈಚೆಗಷ್ಟೇ ಕುಂಭಮೇಳದಲ್ಲಿ ನದಿ ಸ್ವಚ್ಛತೆಯ ಬಗ್ಗೆ ಚರ್ಚೆಯಾಗಿತ್ತು. ಹಾಗಿದ್ದರೂ ಭಕ್ತರಿಗೆ ಇನ್ನೂ ಎಚ್ಚರವಾಗಿಲ್ಲವೇ..? ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾನುವಾರ ಹಳೆಯ ಬಟ್ಟೆಗಳನ್ನು ತುಂಬಿದ ಚೀಲಗಳನ್ನು ಕುಮಾರಧಾರಾ ನದಿಗೆ ಎಸೆದ ಬಳಿಕ, ಆಟೋ ಚಾಲಕರು ಆತನ ಪೋಟೋ ತೆಗೆಯುವಾಗ ಫೋಟೋಗೆ ಪೋಸ್ ಕೂಡಾ ನೀಡಿದ್ದಾರೆ..!.

ಪುಣ್ಯಕ್ಷೇತ್ರದ ಸ್ವಚ್ಛತೆಗೆ ಎಲ್ಲಾ ಭಕ್ತಾದಿಗಳ ಕೊಡುಗೆ ಅಗತ್ಯ ಇದೆ. ಕ್ಷೇತ್ರದಲ್ಲಿ ಸ್ವಚ್ಛತೆಯತ್ತ ಭಕ್ತಾದಿಗಳು ಆದ್ಯತೆ ನೀಡಲೇಬೇಕಿದೆ.   ಈಚೆಗೆ ಕುಂಭ ಮೇಳದಲ್ಲಿ ಸ್ವಚ್ಛತೆಯ ಬಗ್ಗೆಯೂ ಚರ್ಚೆಯಾಗಿತ್ತು. ಈ ಹಿನ್ನೆಲೆಯನ್ನೂ ಗಮನಿಸಿದರೆ ದೇಶದ ಎಲ್ಲಾ ಪುಣ್ಯ ಕ್ಷೇತ್ರದಲ್ಲೂ ಸ್ವಚ್ಛತೆಯತ್ತ ಗಮನಹರಿಸಬೇಕು… ಇದೀಗ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಇಲ್ಲಿನ ನಮ್ಮಸುಬ್ರಹ್ಮಣ್ಯ ತಂಡವು ವಿಷಾದಕರವಾದ ಸಂಗತಿಯೊಂದನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದೆ.………ಮುಂದೆ ಓದಿ……..

ಭಾನುವಾರ ಮಧ್ಯಾಹ್ನ ಕುಕ್ಕೆ ಸುಬ್ರಹ್ಮಣ್ಯದ ಆಟೋ ಚಾಲಕರೊಬ್ಬರು ಕುಮಾರಧಾರ ಸೇತುವೆ ಬಳಿ ಹೋಗುವಾಗ, ಸೇತುವೆ ಮೇಲೆ  ವಾಹನ ನಿಲ್ಲಿಸಿ ನದಿಗೆ ತ್ಯಾಜ್ಯ ಎಸೆಯುವ ವ್ಯಕ್ತಿಯನ್ನು ಕಂಡು, ಅವರನ್ನು ತಡೆಯುವ ಪ್ರಯತ್ನ ಮಾಡುತ್ತಾರೆ. ಯಾರೋ ಜ್ಯೋತಿಷಿ ತಮ್ಮ ಹಳೆಯ ಬಟ್ಟೆ-ಬರೆಗಳನ್ನು ನದಿಗೆ ಎಸೆಯುವಂತೆ ಹೇಳಿದ್ದಾರೆ ಎಂದು ಉತ್ತರಿಸುತ್ತಾರೆ. ಹಳೆಯ ಬಟ್ಟೆಗಳನ್ನು ತುಂಬಿದ ಮೂರು ಚೀಲಗಳನ್ನು ನದಿಗೆ ಎಸೆದ ಬಳಿಕ, ಆಟೋ ಚಾಲಕರು ಆತನ ಪೋಟೋ ತೆಗೆಯುವಾಗ ಉತ್ತಮ ಕೆಲಸ ಮಾಡಿದಂತೆ ಫೋಟೋಗೆ ಪೋಸ್ ಕೂಡಾ ನೀಡಿದ್ದಾರೆ…!

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಸಿ, ಅದೇ ದೇವರ ನದಿಗೆ ಬಟ್ಟೆ ಎಸೆದು ಮಲಿನಗೊಳಿಸಿದರೆ, ಪೂಜೆಯ ಫಲ ಪಡೆಯುವುದಕ್ಕಿಂತ ಪಾಪ ಕಟ್ಟಿಕೊಳ್ಳಬೇಕಾಗುತ್ತದೆ.  ಹೀಗೆಂದು ನಮ್ಮ ಸುಬ್ರಹ್ಮಣ್ಯ ಪೇಸ್‌ಬುಕ್‌ ಪೇಜಿನಲ್ಲಿ ಪೋಸ್ಟ್‌ ಮಾಡಲಾಗಿದೆ.

ನಮ್ಮ ಸುಬ್ರಹ್ಮಣ್ಯ ತಂಡವು ಕಳೆದ ಅನೇಕ ಸಮಯಗಳಿಂದ ಸುಬ್ರಹ್ಮಣ್ಯದ ಸ್ವಚ್ಛತೆಯ ಬಗ್ಗೆ ಗಮನಹರಿಸುತ್ತಿದೆ. ಎರಡು ವರ್ಷಗಳ ಹಿಂದೆ ಪ್ರತೀ ಭಾನುವಾರ ಸ್ವಚ್ಛತಾ ಕೆಲಸ ನಡೆಸುವ ಮೂಲಕ ಜಾಗೃತಿ ಮೂಡಿಸಿತ್ತು. ಅದಾದ ಬಳಿಕ ಕಸ ಎಸೆಯದಂತೆ ಭಕ್ತಾದಿಗಳಿಗೆ ಮನವಿ ಮಾಡುತ್ತಿದೆ.  ಕುಮಾರಧಾರಾ ನದಿಯಲ್ಲೂ ಬಟ್ಟೆಗಳ ರಾಶಿ ಪ್ರತೀ ತಿಂಗಳು ಲಭ್ಯವಾಗುತ್ತಿದೆ.

 

Advertisement

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭಾರತದ 44% ನಗರಗಳು ದೀರ್ಘಕಾಲದ ವಾಯು ಮಾಲಿನ್ಯ ಸಂಕಟದಲ್ಲಿ| CREA ಉಪಗ್ರಹ ಅಧ್ಯಯನದ ಶಾಕಿಂಗ್ ಬಹಿರಂಗ
January 10, 2026
10:19 PM
by: ರೂರಲ್‌ ಮಿರರ್ ಸುದ್ದಿಜಾಲ
ಸುಳ್ಯ ಅಡಿಕೆ ಕೃಷಿಗೆ ಎಲೆಚುಕ್ಕಿ ಸಂಕಷ್ಟ | ಬೆಳೆಸಾಲ ಮನ್ನಾ ಮಾಡಲು ಆಗ್ರಹ – ಸಮೀಕ್ಷೆಗೆ ಸಹಕರಿಸುವಂತೆ ಕೃಷಿಕರಿಗೆ ಮನವಿ
January 10, 2026
8:26 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಸಿಂಗಾರ ಒಣಗುತ್ತಿದೆಯೇ..? ನಿಮ್ಮ ತೋಟದ ಶತ್ರು ನೀವು ಬಳಸುವ ಬೇವಿನ ಎಣ್ಣೆಯೇ ಇರಬಹುದು…!
January 10, 2026
7:24 AM
by: ದ ರೂರಲ್ ಮಿರರ್.ಕಾಂ
ಕಳಪೆ ಅಡಿಕೆ ಪತ್ತೆ | 15.5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ
January 10, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror