ಮೊದಲ ಗಾಳಿ ಮಳೆ ತಂದ ಅವಾಂತರ | ಮನೆಗೆ ಬಿದ್ದ ಮರ | 500 ಕ್ಕೂ ಹೆಚ್ಚು ಅಡಿಕೆ ಮರ ನಾಶ | ತುಂಡು ತುಂಡಾದ ವಿದ್ಯುತ್‌ ಕಂಬಗಳು |

April 15, 2021
7:05 AM

ಎಲ್ಲೆಡೆ ಮೊದಲ ಮಳೆ ಖುಷಿ ತಂದರೆ ಕೆಲವು ಕಡೆಗಳಲ್ಲಿ  ಭಾರೀ ಗಾಳಿ ಹಾಗೂ ಮಳೆ ಅವಾಂತರ ಸೃಷ್ಟಿಸಿದೆ.

ಸುಳ್ಯ ತಾಲೂಕಿನ ಪಂಜದ ಆಸುಪಾಸಿನಲ್ಲಿ ಬುಧವಾರ ಸಂಜೆ ಭಾರೀ ಗಾಳಿ ಹಾಗೂ ಮಳೆ ಸುರಿದಿದೆ.  ಗಾಳಿಯ ಕಾರಣದಿಂದ ಪಂಜದ ಆಸುಪಾಸಿನಲ್ಲಿ ಅಪಾರ ಹಾನಿಯಾಗಿದೆ.

ಪಂಜ ಬಳಿಯ ಕಂರ್ಬಿ ಗಣೇಶ್‌ ಅವರ ತೋಟದಲ್ಲಿ ಸುಮಾರು 500 ಕ್ಕೂ ಹೆಚ್ಚು ಅಡಿಕೆ ಮರಗಳು,100 ಕ್ಕೂ ಹೆಚ್ಚು ರಬ್ಬರ್‌ ಮರಗಳು  ಧರೆಗೆ ಉರುಳಿದೆ. ಈ ಆಸುಪಾಸಿನ ಸುಮಾರು 20 ಕ್ಕೂ ಅಧಿಕ ವಿದ್ಯುತ್‌ ಕಂಬಗಳು ತುಂಡಾಗಿದ್ದು ವಿದ್ಯುತ್‌ ಪರಿವರ್ತಕಗಳು ಧರೆಗೆ ಉರುಳಿದೆ.

ಗಾಳಿ ಮಳೆಗೆ  ಐನೆಕಿದು ಗ್ರಾಮದ ವಿಜಯ್ ಕೋಟೆ ಬೈಲ್ ಅವರ ಮನೆಗೆ ಮರ ಬಿದ್ದಿದೆ.  ಮನೆ ಹಾಗೂ ಮನೆಯ ಎದುರುಗಡೆ ನಿಲ್ಲಿಸಿದ ಬೈಕ್ ಹಾನಿಗೊಳಗಾಗಿದೆ. ಮರ ಬಿದ್ದ ಸಂದರ್ಭದಲ್ಲಿ ಮನೆಯಲ್ಲಿದ್ದವರು ಸಣ್ಣಪುಟ್ಟ ಗಾಯಗೊಂಡು ಅದೃಷ್ಟವಶಾತ್ ಪಾರಾಗಿದ್ದಾರೆ.

ಘಟನೆ ಸ್ಥಳಕ್ಕೆ  ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಗಿರೀಶ್ ಪೈಲಾಜೆ, ಅಜಿತ್ ಕಲ್ಲೇರಿ, ಯಶವಂತ್ ಕೊಪ್ಪಳಗದ್ದೆ, ಅಶ್ವಥ್ ಕಲ್ಲೇರಿ, ಸುಹಾಸ್ ಕೋಟೆ ಬೈಲ್,   ವಿಪತ್ತು ನಿರ್ವಹಣಾ ತಂಡದ  ಬಾಲಸುಬ್ರಹ್ಮಣ್ಯ, ಲಕ್ಷಣ ಮೊದಲಾದವರು ಆಗಮಿಸಿ ಮರ ತೆರವು ಮಾಡಲು ಸಹಕರಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ
August 30, 2026
10:38 PM
by: ದ ರೂರಲ್ ಮಿರರ್.ಕಾಂ
ಮಳೆ ಕೊರತೆ ನೀಗಿಸಲು ಕರ್ನಾಟಕದಲ್ಲಿ ಮೋಡ ಬಿತ್ತನೆ
August 30, 2026
10:18 PM
by: ದ ರೂರಲ್ ಮಿರರ್.ಕಾಂ
ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ
August 30, 2026
10:09 PM
by: ದ ರೂರಲ್ ಮಿರರ್.ಕಾಂ
ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?
August 30, 2026
11:59 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror