ಕೆಲಸ ಯಾವುದಾದರೇನು ? ಛಲವೊಂದಿದ್ದರೆ ಯಾವುದೂ ಸಾಧಿಸಬಹುದು ಎನ್ನುವ ಮಾತು ಆಗಾಗ ಕಣ್ಣೆದುರು ಕಾಣುತ್ತದೆ. ಸಾಧನೆಗಳೇ ಯಶಸ್ಸಿನ ಹಿಂದಿರುವ ದಾರಿಗಳು. ಈಗ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಸ ವಿಲೇವಾರಿ ಮಾಡುವ ವಾಹನದಲ್ಲಿ ಮಹಿಳಾ ಚಾಲಕಿಯೊಬ್ಬರು ಅದೇ ಸಾಲಿನಲ್ಲಿದ್ದಾರೆ.
ಸುಬ್ರಹ್ಮಣ್ಯ ಓಂ ಶ್ರೀ ಸಂಜೀವಿನಿ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ ಇದರ ಸುಬ್ರಹ್ಮಣ್ಯ ಗ್ರಾಮದಲ್ಲಿ ಕಸವೇವಾರಿ ಕೆಲಸ ಕಾರ್ಯ ನಡೆಯುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಪೇಟೆ, ಅಸುಪಾಸಿನ ಮನೆಗಳಲ್ಲಿ, ಒಟ್ಟು ಸುಬ್ರಹ್ಮಣ್ಯ ಗ್ರಾಮದಲ್ಲಿ ಸಂಗ್ರಹವಾಗುವ ಎಲ್ಲಾ ರೀತಿಯ ತ್ಯಾಜ ವಸ್ತುಗಳನ್ನು ಸಂಗ್ರಹ ಮಾಡಿ ಕಸ ವಿಲೇವಾರಿ ವಾಹನದ ಮೂಲಕ ಇಂಜಾಡಿಯಲ್ಲಿರುವ ಘಟಕಕ್ಕೆ ಸಾಗಿಸಲಾಗುತ್ತದೆ. ಈ ವಾಹನದ ಚಾಲಕಿಯಾಗಿ ಕೀರ್ತಿ ದೇವರಗದ್ದೆ ಕೆಲಸ ಮಾಡುತ್ತಿದ್ದಾರೆ.
ತುಂಬಾ ಸಂತೋಷದಿಂದಲೇ ಈ ವೃತ್ತಿಯನ್ನು ಮಾಡುತ್ತಿರುವ ಕೀರ್ತಿಯವರು, ಸುಮಾರು ಒಂದುವರೆ ವರ್ಷದಿಂದ ಚಾಲಕಿಯಾಗಿ ಎಲ್ಲ ತರಬೇತಿಯನ್ನು ಪಡೆದಿರುತ್ತೇನೆ. ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದೇನೆ ಸದ್ಯ ಸಂಸಾರದೊಂದಿಗೆ ದೇವರ ಗದ್ದೆಯಲ್ಲಿ ವಾಸಿಸುತ್ತಿದ್ದೇನೆ. ಸುಬ್ರಹ್ಮಣ್ಯ ಓಂ ಶ್ರೀ ಸಂಜೀವಿನಿ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟ ಕಸವಿಲ್ಲವೇರಿ ವಾಹನದ ಚಾಲಾಕಿಯಾಗಿ ದುಡಿಯುತ್ತಿದ್ದೇನೆ ಎಂದು ನಗುಮುಖದಿಂದ ಉತ್ತರಿಸುತ್ತಾರೆ. ಓರ್ವ ಮಹಿಳೆ ಚಾಲಕಿಯಾಗಿ ಉದ್ಯೋಗ ಮಾಡುತ್ತಿರುವುದು ಸುಬ್ರಹ್ಮಣ್ಯ ಗ್ರಾಮದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈಗಿನಂತೆ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿದ್ದು, ಜುಲೈ 16ರಿಂದ…
ಮುಂದಿನ ಏಳು ದಿನಗಳ ಕಾಲ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಕೆಲವು ಕಡೆ ಭಾರೀ…
ಇತಿಹಾಸದಲ್ಲಿ ಮೊದಲ ಬಾರಿಗೆ ಕೇರಳ ಕೊಬ್ಬರಿ ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ.ತೆಂಗಿನಕಾಯಿ ಉತ್ಪಾದನೆಯಲ್ಲಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ದೇಶದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಹೆಚ್ಚು ಪರಿಸರ…
ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಧುನಿಕ ಮೂಲಭೂತ…