ಕಲಿತ ವಿದ್ಯೆಯಿಂದ ಬದುಕು ಕಟ್ಟಿದ ಮಹಿಳೆ | ಕಷ್ಟವನ್ನು ಮೆಟ್ಟಿ ನಿಂತು ಬದುಕು ಕಟ್ಟಿದ ಮಹಿಳೆಯ ಕತೆ.. |

October 6, 2023
3:24 PM
ಇಬ್ಬರು ಮಕ್ಕಳ ತಾಯಿ ಹರಿಣಾಕ್ಷಿ ಅವರು ಆಯುರ್ವದೇ ಥೆರಪಿಸ್ಟ್‌ ಆಗಿ ತರಬೇತಿ ಪಡೆದವರು. ಅನಿವಾರ್ಯವಾಗಿ ಮನೆ ಸ್ಥಳಾಂತರ ಮಾಡಿದ ಬಳಿಕ ಬದುಕು ಕಟ್ಟಿಕೊಳ್ಳಲು ತೆಂಗಿನಕಾಯಿ ಸುಲಿಯುವ ಕಾಯಕದಲ್ಲಿ ತೊಡಗಿದರು.ಅವರ ಬದುಕಿನ ಸಾಹಸ ಮಾದರಿಯಾದ್ದು.

ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನರು ಬದುಕಿನಲ್ಲಿ ಗೆದ್ದಿದ್ದಾರೆ. ಓದಿದ ವಿದ್ಯೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಕಲಿತ ವಿದ್ಯೆ ಉಪಯೋಗಕ್ಕೆ ಬಂದಿದೆ. ಇಂತಹ ಸಾಲಿನಲ್ಲಿ ಮಹಿಳೆಯೊಬ್ಬರು ಇದ್ದಾರೆ.ಆಯುರ್ವೇದ ಚಿಕಿತ್ಸಕನಾಗಿ ತರಬೇತಿ ಪಡೆದಿದ್ದ ಈ ಮಹಿಳೆ, ಬದುಕು ಕಟ್ಟುವ ಸಮಯದಲ್ಲಿ ಆಯ್ಕೆ ಮಾಡಿದ್ದು ತೆಂಗಿನ ಕಾಯಿ(Coconut) ಸುಲಿಯುವ ಕಾಯಕ. ಈಗ ಅರ್ಧ ದಿನದಲ್ಲಿ ಒಂದು ಸಾವಿರ ತೆಂಗಿನ ಕಾಯಿ ಸುಲಿಯಬಲ್ಲರು. ಇಬ್ಬರು ಮಕ್ಕಳ ಸಹಿತ ಕುಟುಂಬವನ್ನು ಸಾಕುತ್ತಿದ್ದಾರೆ.

Advertisement
Advertisement
Advertisement

ಮೂಲತಃ ಮಡಿಕೇರಿಯವರಾದ 40 ವರ್ಷದ ಹರಿಣಾಕ್ಷಿ, ಪ್ರಸ್ತುತ ಕಾಸರಗೋಡಿನ ವಾಣಿನಗರದಲ್ಲಿ ವಾಸಿಸುತ್ತಿದ್ದಾರೆ. ಮದುವೆಯಾದ ನಂತರ ವೈಯಕ್ತಿಕ ಕಾರಣಗಳಿಂದ ಮಕ್ಕಳೊಂದಿಗೆ ಕಾಸರಗೋಡು ವಾಣೀನಗರಕ್ಕೆ ಬಂದು ನೆಲೆಸಿದ್ದರು.  ಆರಂಭದಲ್ಲಿ ಮನೆಗಳಿಗೆ ತೋಟದ ಕೆಲಸಗಳಿಗೆ ಹೋಗುತ್ತಿದ್ದರು. ಅಲ್ಲಿ ತೆಂಗಿನ ಕಾಯಿ ಸುಲಿಯಲು ಕಲಿತಿದ್ದರು. ಇದೀಗ ತೆಂಗಿನ ಕಾಯಿ ಸುಲಿಯುವುದೇ ಕಾಯಕ ಮಾಡಿಕೊಂಡಿದ್ದಾರೆ.ಈಗ ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಗಡಿಭಾಗದ ಮನೆಗಳಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸದಲ್ಲಿ ತೊಡಗಿದ್ದಾರೆ. ಅವರು ಪ್ರತಿ ತೆಂಗಿನಕಾಯಿಗೆ 1 ರೂಪಾಯಿ ಗಳಿಸುತ್ತಾರೆ ಮತ್ತು ಅರ್ಧ ದಿನದಲ್ಲಿ ಸುಮಾರು 1,000 ತೆಂಗಿನಕಾಯಿಗಳನ್ನು ಸುಲಿಯಬಲ್ಲರು. ಪುತ್ರ ಹಾಗೂ ಪುತ್ರಿಯ ಜೊತೆ ವಾಸಿಸುತ್ತಿರುವ ಹರಿಣಾಕ್ಷಿ, ಆದಾಯಕ್ಕೆ ಪೂರಕವಾಗಿ ಹಸುವನ್ನು ಸಾಕುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಏಣಿಯನ್ನು ಬಳಸಿ ಅಡಿಕೆ ಕೊಯ್ಲು ಮತ್ತು ಮೆಣಸು ಕೊಯ್ಲು  ಕೆಲಸ ಕೂಡ ಮಾಡುತ್ತಾರೆ.

Advertisement
ತೆಂಗಿನಕಾಯಿ ಸುಲಿಯುವ ಸಾಧನದ ಜೊತೆ ಹರಿಣಾಕ್ಷಿ | PHOTO CREDIT : Shailaja Padre

ಕಾಸರಗೋಡಿಗೆ ಸ್ಥಳಾಂತರಗೊಂಡಾಗ ಈ ಕೆಲಸ ಪ್ರಾರಂಭಿಸಿದೆ. ಒಂಟಿಯಾಗಿ ಇಬ್ಬರು ಮಕ್ಕಳೊಂದಿಗೆ ಬದುಕಬೇಕಾಗಿ ಬಂದಾಗ, ನಾನು ಆದಾಯದ ಮಾರ್ಗವನ್ನು ಕಂಡುಹಿಡಿಯಬೇಕಾಗಿತ್ತು. ಇಡುಕ್ಕಿಯಲ್ಲಿ ಆಯುರ್ವೇದ ಚಿಕಿತ್ಸಕನಾಗಿ ತರಬೇತಿ ಪಡೆದಿದ್ದೇನೆ ಮತ್ತು ಈ ಹಿಂದೆ ಬೆಂಗಳೂರು ಮತ್ತು ಚೆನ್ನೈನಲ್ಲಿ ಕೆಲಸ ಮಾಡಿದ್ದೇನೆ” ಎಂದು ಹರಿಣಾಕ್ಷಿ ಅವರು ಹೇಳುತ್ತಾರೆ.

ಹರಿಣಾಕ್ಷಿ ಅವರು ಗ್ರಾಮೀಣ ಭಾಗದ ಹಲವು ಕಡೆ ತನ್ನದೇ ವಾಹನದ ಮೂಲಕ ತೆಂಗಿನ ಕಾಯಿ ಸುಲಿಯುವ ಕೆಲಸಕ್ಕೆ ಹೋಗುತ್ತಿದ್ದಾರೆ. ಕೆಲಸದಲ್ಲಿನ ಬದ್ಧತೆಯೇ ಅವರನ್ನು ಯಶಸ್ಸಿನ ಹಾದಿಯಲ್ಲಿ ಕರೆದೊಯ್ಯುತ್ತಿದೆ ಎಂದು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರು ಹೇಳುತ್ತಾರೆ.

Advertisement

 

ತೆಂಗಿನಕಾಯಿ ಸುಲಿಯುತ್ತಿರುವ ಹರಿಣಾಕ್ಷಿ | PHOTO CREDIT : Shailaja Padre

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror