ಅರಿಶಿನ ಕೃಷಿಯಲ್ಲಿ ಯಶಸ್ಸು ಗಳಿಸಿದ ಮಹಿಳೆ – ಮಿಶ್ರ ಬೆಳೆಗೆ ಇವರು ಮಾದರಿ..!

January 7, 2026
6:53 AM

ಕೃಷಿಯನ್ನು ನಂಬಿ ಸೋತ ಉದಾಹರಣೆ ಕಡಿಮೆ. ಆದರೆ ಹವಾಮಾನ, ನೀರಾವರಿ ಹಾಗೂ ಅವೈಜ್ಞಾನಿಕ ಪದ್ಧತಿಗಳಿಂದ ಹಿನ್ನಡೆಯಾದ ಉದಾಹರಣೆ ಇದೆ. ಆದರೆ, ಕೃಷಿಯನ್ನು ತಪಸ್ಸಿನಂತೆ ಮಾಡಿದವರು ಎಂದೂ ಸೋರ ಉದಾಹರಣೆ ಇಲ್ಲ. ಇದಕ್ಕೆ ಉದಾಹರಣೆ, ಮಧ್ಯಪ್ರದೇಶದ ನರ್ಮದಾಪುರಂನ ಕಾಂಚನ್ ವರ್ಮಾ.

ಇವರು ಗೋಧಿ, ಮೆಕ್ಕೆಜೋಳ ಮತ್ತು ತರಕಾರಿಗಳನ್ನು ಬೆಳೆಯುವ ಜೊತೆಗೆ, 2020 ರಲ್ಲಿ ಅರಶಿನ ಕೃಷಿಯನ್ನು ಪ್ರಾರಂಭಿಸಿ ಸಾಂಪ್ರದಾಯಿಕ ಬೆಳೆಗಳಿಂದ ಒಂದು ಎಕರೆಗೆ 1.5 ಲಕ್ಷ ರೂ ಗಳಿಸುತ್ತಿದ್ದ ಇವರು ಅರಶಿನ ಕೃಷಿಯಿಂದ ತಮ್ಮ ಆದಾಯವನ್ನು 3 ಲಕ್ಷ ರೂ ಗಳಿಗೆ ದ್ವಿಗುಣಗೊಳಿಸಿದರು.
2020 ರಲ್ಲಿ ನಾನು ದೂರದರ್ಶನದಲ್ಲಿ ಅರಿಶಿನ ಕೃಷಿಯ ಪ್ರಯೋಜನಗಳ ಬಗ್ಗೆ ಕಾರ್ಯಕ್ರಮವನ್ನು ನೋಡಿದೆ. ತದನಂತರ, ಹೆಚ್ಚಿನ ಮಾಹಿತಿ ಪಡೆಯಲು ಕೃಷಿ ವಿಜ್ಞಾನ ಕೇಂದ್ರ ಗೆ ಭೇಟಿ ನೀಡಿ ಏಳು ದಿನಗಳ ತರಬೇತಿ ಕಾರ್ಯಕ್ರಮವನ್ನು ಪಡೆದೆ. ಇಲ್ಲಿ ನಾನು “ಸಾಂಗ್ಲಿ” ತಳಿಯ ಅರಿಶಿಣವನ್ನು ಆಯ್ಕೆ ಮಾಡಿಕೊಂಡರು, ಇದು ಹೆಚ್ಚಿನ ಕರ್ಕ್ಯುಮಿನ್ ಅಂಶವನ್ನು ಹೊಂದಿದೆ ಮತ್ತು ಔಷದೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಈ ತಳಿಯ ಆಳವಾದ ಕಿತ್ತಳೆ ಬಣ್ಣ ಮತ್ತು  ಸುವಾಸನೆಯನ್ನು ಹೊಂದಿದೆ, ಜೊತೆಗೆ ದೊಡ್ಡ ಗೆಡ್ಡೆಗಳನ್ನು ಉತ್ಪಾದಿಸುತ್ತದೆ ಇದರಿಂದ ನಾನು ಯಶಸ್ವಿಯಾಗಲು ಸಾಧ್ಯ ಎಂದರು.

ಮೊದಲ ವರ್ಷದಲ್ಲಿ ನಾನು ಒಂದು ಎಕರೆ ಭೂಮಿಯಲ್ಲಿ ಎಂಟು ಕ್ವಿಂಟಾಲ್ ಅರಿಶಿಣವನ್ನು ಬಿತ್ತಿ 100 ಕ್ವಿಂಟಾಲ್ ಇಳುವರಿ ಪಡೆದೆ.. 2023ರಲ್ಲಿ 400 ಕ್ವಿಂಟಾಲ್ ಅರಿಶಿಣವನ್ನು ಕಟಾವು ಮಾಡಿ 12 ಲಕ್ಷ ರೂ ಆದಾಯ ಗಳಿಸಿದೆ. ಈಗ ನಾನು 10 ಎಕರೆ ಭೂಮಿಗೆ ಅರಿಶಿಣ ಕೃಷಿಯನ್ನು ವಿಸ್ತರಿಸಿದ್ದೇನೆ ಹಾಗೂ ಈ ಋತುವಿನಲ್ಲಿ 30 ಲಕ್ಷ ರೂ ಆದಾಯ ನಿರೀಕ್ಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

(ಮೂಲ-ನ್ಯೂಸ್‌ ಫೀಡ್)

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಅಡಿಕೆ ಧಾರಣೆ ಏರಿಕೆ | ಒಮ್ಮೆಲೇ ಬೇಡಿಕೆ ಹೆಚ್ಚಳದಿಂದ ಮಾರುಕಟ್ಟೆಯಲ್ಲಿ ಅಸ್ಥಿರತೆ – ಭವಿಷ್ಯದಲ್ಲಿ ಗುಣಮಟ್ಟದ ಅಡಿಕೆಗೆ ಬೇಡಿಕೆ ನಿರೀಕ್ಷೆ
January 8, 2026
7:16 AM
by: ದ ರೂರಲ್ ಮಿರರ್.ಕಾಂ
ಚಿಕಿತ್ಸೆ ಮುಗಿದರೂ ಕ್ಯಾನ್ಸರ್ ಅಪಾಯ ಏಕೆ ಮುಗಿಯುವುದಿಲ್ಲ?
January 7, 2026
11:10 PM
by: ದ ರೂರಲ್ ಮಿರರ್.ಕಾಂ
‌ ಭೂಮಿಗೆ ಬಿದ್ದ ಪ್ಲಾಸ್ಟಿಕ್ ಕರಗುವಂತೆ ಮಾಡಬಹುದು…!, ಇದು ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರವೇ?
January 7, 2026
10:43 PM
by: ದ ರೂರಲ್ ಮಿರರ್.ಕಾಂ
2026 ರಲ್ಲಿ ಕೃಷಿ ಕ್ಷೇತ್ರ ಸ್ಥಿರತೆ , ಆದರೆ ಅಸಮಾನತೆ ಮುಂದುವರಿಕೆ
January 7, 2026
10:14 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror