ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನುದಾನ ಲಭ್ಯತೆಯ ಆಧಾರದ ಮೇಲೆ ಅರ್ಹ ಮಹಿಳಾ ರೈತರಿಗೆ ಉಚಿತ ನಾಟಿ ಕೋಳಿ ಮರಿಗಳನ್ನು ವಿತರಣೆ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಮಹಿಳಾ ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಅನೇಕ ಸಹಾಯಧನ ಆಧಾರಿತ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು ಇದರಲ್ಲಿ ನಾಟಿ ಕೋಳಿ ಮರಿಗಳನ್ನು ನೀಡುವ ಯೋಜನೆಯು ಒಂದಾಗಿದೆ. ಈ ಯೋಜನೆಗೆ ಪ್ರಸ್ತುತ ಅರ್ಜಿಯನ್ನು ಸಹ ಆಹ್ವಾನಿಸಲಾಗಿದೆ. ಅರ್ಜಿಗೆ ಬೇಕಾಗಿರುವ ದಾಖಲೆಗಳು ಹಾಗೂ ಸಲ್ಲಿಸುವ ವಿಧಾನ:
• ಆಧಾರ್ ಕಾರ್ಡ್
• ಫೋಟೋ
• ಬ್ಯಾಂಕ್ ಪಾಸ್ ಬುಕ್
• ಜಮೀನಿನ ಪಹಣಿ
• ಮೊಬೈಲ್ ನಂಬರ್
ಅರ್ಜಿ ಸಲ್ಲಿಕೆ ವಿಧಾನ: ಆಸಕ್ತ ಮಹಿಳಾ ರೈತರು ಅಗತ್ಯ ದಾಖಲೆಗಳ್ನು ಸಿದ್ಧಪಡಿಸಿಕೊಂಡು ನಿಮ್ಮ ತಾಲೂಕಿನ ಪಶುಪಾಲಾನಾ ಇಲಾಖೆಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು. ಆನ್‍ಲೈನ್ ವ್ಯವಸ್ಥೆ ಶುರುವಾಗಿಲ್ಲ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement


