ಕೃಷಿಯ ನಿಜವಾದ ಶಕ್ತಿ ಮಹಿಳೆಯರು : ಭಾರತದಲ್ಲಿ ಮೌನ ಕ್ರಾಂತಿ ಶುರುವಾಗಿದೆ..!

March 8, 2026
8:41 PM
ಭಾರತದ ಕೃಷಿಯಲ್ಲಿ ಮಹಿಳೆಯರ ಪಾತ್ರ ದಿನೇದಿನೇ ಹೆಚ್ಚುತ್ತಿದೆ. ಸಂಪನ್ಮೂಲ ಹಾಗೂ ನಾಯಕತ್ವ ಅವಕಾಶ ದೊರೆತರೆ ಮಹಿಳೆಯರು ಕೃಷಿ ವ್ಯವಸ್ಥೆಯ ಪ್ರಮುಖ ನಾಯಕರು ಆಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಕೃಷಿ ಎಂದರೆ ಕೇವಲ ಆರ್ಥಿಕ ಚಟುವಟಿಕೆ ಅಲ್ಲ, ಅದು ಮಾನವ ನಾಗರಿಕತೆಯ ಮೂಲಾಧಾರ. ಈ ಕೃಷಿ ಕಥೆ ಮಹಿಳೆಯರ ಪಾತ್ರವಿಲ್ಲದೆ ಸಂಪೂರ್ಣವಾಗುವುದೇ ಇಲ್ಲ. ಇತಿಹಾಸದಲ್ಲಿಯೇ ಮಹಿಳೆಯರು ಆಹಾರ ಉತ್ಪಾದನೆ, ಸಂಸ್ಕರಣೆ ಹಾಗೂ ಬೀಜ ಸಂರಕ್ಷಣೆ ಮೊದಲಾದ ಅನೇಕ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಬಗ್ಗೆ ಇಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ.

Advertisement

ಹಿಂದಿನ ಕಾಲದಲ್ಲಿ ಕಾಡಿನ ಸಸ್ಯಗಳನ್ನು ಗುರುತಿಸುವುದು, ಆಹಾರ ಸಂಗ್ರಹಿಸುವುದು ಹಾಗೂ ಬೀಜಗಳನ್ನು ಉಳಿಸುವುದು ಮಹಿಳೆಯರ ಜವಾಬ್ದಾರಿಯಾಗಿತ್ತು. ಇದೇ ಕ್ರಮ ಕೃಷಿ ಪದ್ಧತಿಗಳ ಬೆಳವಣಿಗೆಗೆ ಹಾಗೂ ಬೆಳೆಗಳ ಗೃಹೀಕರಣಕ್ಕೆ ಕಾರಣವಾಯಿತು.

ಇಂದಿಗೂ ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದು. ಭಾರತದ ಕೃಷಿ ಉದ್ಯೋಗದಲ್ಲಿ 40% ಕ್ಕಿಂತ ಹೆಚ್ಚು ಮಹಿಳೆಯರು ಇದ್ದಾರೆ. ಗ್ರಾಮೀಣ ಮಹಿಳೆಯರಲ್ಲಿ ಸುಮಾರು ಎರಡುಮೂರರಷ್ಟು ಮಂದಿ ಕೃಷಿಯ ಮೇಲೆ ಅವಲಂಬಿತರಿದ್ದಾರೆ.  ಬಿತ್ತನೆ, ನೆಡುವಿಕೆ, ಕಳೆ ತೆಗೆಯುವುದು, ಕೊಯ್ಲು, ಸಂಗ್ರಹಣೆ ಮುಂತಾದ ಕೆಲಸಗಳಲ್ಲಿ ಮಹಿಳೆಯರು ಪ್ರಮುಖವಾಗಿ ತೊಡಗಿಸಿಕೊಂಡಿದ್ದಾರೆ. ಆದರೂ ಇವರ ಕೆಲಸದ ಬಹುಪಾಲು ಅಧಿಕೃತ ಆರ್ಥಿಕ ವ್ಯವಸ್ಥೆಯಲ್ಲಿ ಗುರುತಿಸದೇ ಇರುವುದೇ ದೊಡ್ಡ ಸಮಸ್ಯೆ ಎಂದು ತಜ್ಞರು ಹೇಳುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಕೇವಲ ಕಾರ್ಮಿಕರಾಗಿ ಮಾತ್ರವಲ್ಲದೆ Farmer Producer Organisations (FPO),  Self Help Groups (SHG), ಅಗ್ರಿ ಉದ್ಯಮಗಳ ಮೂಲಕ ನಾಯಕತ್ವದ ಸ್ಥಾನಗಳನ್ನು ಹಿಡಿಯಲು ಪ್ರಾರಂಭಿಸಿದ್ದಾರೆ.  ಮಹಿಳೆಯರಿಗೆ ಭೂಮಿ, ಹಣಕಾಸು, ತರಬೇತಿ ಹಾಗೂ ಮಾರುಕಟ್ಟೆ ಸಂಪರ್ಕ ದೊರೆತರೆ ಕೃಷಿ ಕ್ಷೇತ್ರ ಹೆಚ್ಚು ಸಮಗ್ರ ಮತ್ತು ಸ್ಥಿರವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾದರೂ ಇನ್ನೂ ಹಲವಾರು ಸವಾಲುಗಳಿವೆ.  ಕಡಿಮೆ ವೇತನ, ನಿರ್ಧಾರಗಳಲ್ಲಿ ಸೀಮಿತ ಪಾತ್ರ, ಸಾಲ ಮತ್ತು ತಂತ್ರಜ್ಞಾನಕ್ಕೆ ಕಡಿಮೆ ಪ್ರವೇಶಗಳು ಇವೆ. ಈ ಅಡೆತಡೆಗಳನ್ನು ನಿವಾರಿಸಿದರೆ ಕೃಷಿಯಲ್ಲಿ ಮಹಿಳೆಯರು ಪರಿವರ್ತನೆಯ ಪ್ರಮುಖ ನಾಯಕರು ಆಗಬಹುದು ಎಂದು ತಜ್ಞರು ಸೂಚಿಸುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಕೃಷಿಯ ಭವಿಷ್ಯದಲ್ಲಿ ಮಹಿಳೆಯರ ಮಹತ್ವ :  ಕೃಷಿ, ಆಹಾರ ಭದ್ರತೆ ಹಾಗೂ ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ಎದುರಿಸಲು ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾಗಿದೆ.  ಮಹಿಳೆಯರಿಗೆ ಸಮಾನ ಅವಕಾಶ, ತರಬೇತಿ ಮತ್ತು ಸಂಪನ್ಮೂಲ ದೊರೆತರೆ ಕೃಷಿ ವ್ಯವಸ್ಥೆ ಹೆಚ್ಚು ಸಮರ್ಥ, ಸಮಾನ ಮತ್ತು ಸ್ಥಿರವಾಗಬಹುದು ಎಂಬುದು ತಜ್ಞರ ಅಭಿಪ್ರಾಯ ಪಡುತ್ತಾರೆ ಎಂದು ಇಕನಾಮಿಕ್‌ ಟೈಮ್ಸ್‌ ವರದಿ ಹೇಳಿದೆ.

Women have long played a crucial yet often under-recognized role in Indian agriculture—from seed preservation and food production to managing household food systems. Today, women constitute over 40% of the agricultural workforce in India. Strengthening their access to resources, land rights, finance, and leadership roles can transform them from participants into systemic leaders in agriculture.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಾವೇರಿ ತೀರ ಅಪಾಯ ಎಚ್ಚರಿಕೆ: ಬಲಮುರಿ-ಎಡಮುರಿ ಪ್ರವಾಸಕ್ಕೆ ತಾತ್ಕಾಲಿಕ ನಿಷೇಧ
April 20, 2026
8:08 AM
by: ಮಿರರ್‌ ಡೆಸ್ಕ್
ರಾಜ್ಯದ ಒಂದೆರಡು ಸ್ಥಳಗಳಲ್ಲಿ ಮಳೆ – ಐದು ದಿನ ಬಿಸಿ ಹವೆಯ ಮುನ್ಸೂಚನೆ -ದೇಶದಾದ್ಯಂತ ತಾಪಮಾನ ಏರಿಕೆ
April 20, 2026
7:51 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ ಸಿಡಿಲು ಮಿಂಚಿನ ಆರ್ಭಟ – 14 ವರ್ಷಗಳಲ್ಲಿ 1,026 ಸಾವು | ‘ದಾಮಿನಿ’ ಆ್ಯಪ್ ಬಳಸಿ ಮುನ್ನೆಚ್ಚರಿಕೆ ತೆಗೆದುಕೊಳ್ಳಿ
April 19, 2026
11:26 PM
by: ದ ರೂರಲ್ ಮಿರರ್.ಕಾಂ
ರಕ್ಷಾ ಸ್ವರ್ಣಪ್ರಾಶನ | ಮಕ್ಕಳ ರೋಗ ನಿರೋಧಕ ಶಕ್ತಿಗೆ ವಿಶೇಷ ಔಷಧಿ
April 19, 2026
10:56 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror