ಮನಸ್ವಿನಿ ಯೋಜನೆಯ ಮೂಲಕ ಪ್ರತಿ ತಿಂಗಳು ಮಹಿಳೆಯರಿಗೆ ಸಿಗಲಿದೆ ರೂ.800 ಪಿಂಚಣಿ

December 19, 2025
7:44 AM

ವಿಧವೆಯರು, ಗಂಡನಿಂದ ದೂರವಾಗಿರುವವರು ಅಥವಾ ಮದುವೆಯಾಗದೆ ಒಬ್ಬಂಟಿಯಾಗಿ ಜೀವಿಸುತ್ತಿರುವ ಮಹಿಳೆರಿಗೆ ಆರ್ಥಿಕ ಭದ್ರತೆ ನೀಡುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಮನಸ್ವಿನೀ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಮೂಲಕ ಪ್ರತಿ ತಿಂಗಳು ರೂ 800 ಪಿಂಚಣಿ ಸಿಗುತ್ತದೆ. ಮಾತ್ರವಲ್ಲ ವೃದ್ಧಾಪ್ಯ ವೇತನದ ಮಾದರಿಯಲ್ಲೇ ನೇರವಾಗಿ ಫಲಾನುಭವಿಯ ಖಾತೆಗೆ ಜಮೆ ಆಗುತ್ತದೆ.  ಈ ಯೋಜನೆಯ ನಿಯಮದ ಪ್ರಕಾರ ಈಗಾಗಲೇ ವಿಧವಾ ವೇತನ, ಅಂಗವಿಕಲ ವೇತನ ಅಥವಾ ಸಂಧ್ಯ ಸುರಕ್ಷ ಪಡೆಯುತ್ತಿರುವವರು ಹಾಗೂ ಮರುಮದುವೆ ಆದವರಿಗೆ ಈ ಪಿಂಚಣಿಯು ಸಿಗುವುದಿಲ್ಲ.
ಬೇಕಾಗುವ ದಾಖಲೆ:
• ಬಿಪಿಎಲ್ ರೇಷನ್ ಕಾರ್ಡ್
• ಆಧಾರ್ ಕಾರ್ಡ್
• ಬ್ಯಾಂಕ್ ಪಾಸ್ ಬುಕ್
• ಚುನಾವಣಾ ಗುರುತಿನ ಚೀಟಿ
• ಅವಿವಾಹಿತರಾಗಿದ್ದರೆ-ಮರುಮದುವೆ ಆಗಿಲ್ಲ ಎಂಬ ಪ್ರಮಾಣ ಪತ್ರ
• ವಿಚ್ಛೇದಾರರಿಗೆ- ಗಂಡನಿಂದ ದೂರವಾಗಿರುವ ಪ್ರಮಾಣ ಪತ್ರ
• ಪಾಸ್ಪೋರ್ಟ್ ಅಳತೆಯ ಪೋಟೋ
ಅರ್ಜಿ ಸಲ್ಲಿಸುವ ವಿಧಾನ:
ನಿಮ್ಮ ಹತ್ತಿರದ ನಾಡಕಚೇರಿ ಅಥವಾ ಅಟಲ್ ಜೀ ಜನಸ್ನೇಹಿ ಕೇಂದ್ರ ಕ್ಕೇ ಭೇಟಿ ನೀಡಬೇಕು. ಅಲ್ಲಿ ಫಾರಂ ಪಡೆದು ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದು. ಯಾವುದೇ ಆನ್ ಲೈನ್ ವ್ಯವಸ್ಥೆ ಬಂದಿಲ್ಲ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ
ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ
April 1, 2026
6:13 AM
by: ಮಿರರ್‌ ಡೆಸ್ಕ್
ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ
April 1, 2026
6:07 AM
by: ಮಿರರ್‌ ಡೆಸ್ಕ್
ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್
April 1, 2026
5:56 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror