ಪಂಜದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕ ಮಹಿಳೆಯರಿಗೆ ಸನ್ಮಾನ | ಸಮಾಜಕ್ಕೆ ಪಾಸಿಟಿವ್‌ ಮಹಿಳೆಯರನ್ನು ಪರಿಚಯಿಸಿದ ಮಹಿಳಾ ತಂಡಗಳು |

March 17, 2022
6:28 PM

ಮಹಿಳೆಯರ ಸಮಾನತೆ ವಿಚಾರ ನೋಡಿದಾಗ ಮೊದಲಿಗಿಂತ ಬಹಳಷ್ಟು ಬದಲಾವಣೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಉತ್ತಮ ರೀತಿಯ ಸೇವೆ ನೀಡುತ್ತಿದ್ದು , ಅಪಾರ ಕೊಡುಗೆಗಳು ಸಮಾಜಕ್ಕೆ ನೀಡುತ್ತಿದ್ದಾರೆ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ದೇರಾಜೆ ಹೇಳಿದರು.

Advertisement
Advertisement

ಅವರು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಸಭಾಭವನದಲ್ಲಿ ನಡೆದ ‘ವಿಶ್ವ ಮಹಿಳಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿದರು.  ಭಾರತ ಸರಕಾರ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ ಮಂಗಳೂರು, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು, ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಸುಳ್ಯ, ವನಿತಾ ಸಮಾಜ ಪಂಜ, ಗ್ರಾಮ ಪಂಚಾಯತ್ ಪಂಜ ಇವುಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಪಂಜ ವನಿತಾ ಸಮಾಜದ ಅಧ್ಯಕ್ಷೆ  ಪುಷ್ಪಾ ಡಿ.ಪ್ರಸಾದ್ ಕಾನತ್ತೂರ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ  ರಶ್ಮಿ ಅಶೋಕ್ ಮಾತನಾಡಿ ” ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆ ಪೂಜ್ಯನೀಯ ಸ್ಥಾನವಿದೆ. ತನ್ನ ಮಕ್ಕಳನ್ನು ಸಂಸ್ಕಾರದ ಶಿಕ್ಷಣದೊಂದಿಗೆ ಉತ್ತಮ ಸಮಾಜ ನಿರ್ಮಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದು.”ಎಂದು ಅವರು ಹೇಳಿದರು

ಮುಖ್ಯ ಅತಿಥಿಗಳಾಗಿ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಚಂಚಲ ತೇಜೋಮಯ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಅಧ್ಯಕ್ಷೆ  ತ್ರಿವೇಣಿ ದಾಮ್ಲ ಮಾತನಾಡಿದರು. ವನಿತಾ ಸಮಾಜದ ಕಾರ್ಯದರ್ಶಿ ಭಾಗೀರಥಿ ಕರಿಕ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಳ್ಯ ತಾ. ಮಹಿಳಾ ಮಂಡಲಗಳ ಒಕ್ಕೂಟದ ಉಪಾಧ್ಯಕ್ಷೆ  ಮಧುಮತಿ ಬೊಳ್ಳೂರು ವಂದಿಸಿದರು.

ಸಾಧಕ ಮಹಿಳೆಯರಿಗೆ ಸನ್ಮಾನ ಸಮಾರಂಭ: ವನಿತಾ ಸಮಾಜಕ್ಕೆ ಧ್ವಜಸ್ತಂಭ ದಾನಿಗಳಾದ ವಿಶ್ರಾಂತಿ ಪ್ರಾಧ್ಯಾಪಕಿ  ಲೀಲಾವತಿ, ವಿಶ್ರಾಂತ ಪ್ರಾಂಶುಪಾಲ ಬಾಲಕೃಷ್ಣ ಗೌಡ ನೇರಳ,ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸುತ್ತಿರುವ ಚಾಂದಿನಿ ಪುರುಷೋತ್ತಮ, ವನಿತಾ ಸಮಾಜದ ಅಧ್ಯಕ್ಷೆ  ಪುಷ್ಪಾ ಡಿ.ದೇವಿಪ್ರಸಾದ್ ಕಾನತ್ತೂರ್ ರವರನ್ನು ಸನ್ಮಾನಿಸಲಾಯಿತು. ಚಿತ್ರಕಲಾ ಬೊಳ್ಳಾಜೆ,  ಚಂದ್ರಾಕ್ಷಿ ಜೆ ರೈ ಸನ್ಮಾನಿತರ ಪರಿಚಯಿಸಿದರು.

Advertisement

ಕಾರ್ಯಕ್ರಮದಲ್ಲಿ ವನಿತಾ ಸಮಾಜದ ಎಲ್ಲಾ ಸದಸ್ಯರು ಆಶಾಯ ಗೀತೆ ಹಾಡಿದರು. ವನಿತಾ ಸಮಾಜದ ಗೌರವಾಧ್ಯಕ್ಷೆ  ಹೇಮಲತಾ ಜನಾರ್ಧನ ಸ್ವಾಗತಿಸಿದರು. ಸುಮಾ ಕುದ್ವ,  ಲತಾ ಮುಡೂರು,  ಸ್ಪರ್ಣಶ್ರೀ ಅತಿಥಿಗಳನ್ನು ಪರಿಚಯಿಸಿದರು. ರತ್ನಾವತಿ ಬೊಳ್ಳಾಜೆ ಮತ್ತು ಪವಿತ್ರ ರಾಜೇಶ್ ಕುದ್ವ ಮಲ್ಲೆಟಿ ನಿರೂಪಿಸಿದರು.

ಪಾಸಿಟಿವ್‌ ಬದುಕು - ಬದುಕಿಗೆ ನಾಳೆ ಇದೆ

ಮಹಿಳಾ ದಿನಾಚರಣೆಯ ಸಂದರ್ಭ ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸುತ್ತಿರುವ ಚಾಂದಿನಿ ಪುರುಷೋತ್ತಮ ಅವರನ್ನು ಗೌರವಿಸಲಾಯಿತು. ಧನಾತ್ಮಕ ಬದುಕಿನ ಮೂಲಕ ಸಮಾಜದ ಅನೇಕರಿಗೆ ಮಾದರಿಯಾಗಿದ್ದಾರೆ. ಎಳವೆಯಿಂದಲೇ ಆರೋಗ್ಯದ ಸಮಸ್ಯೆ ಕಾಡುತ್ತಿದ್ದರೂ ಸಮರ್ಥವಾಗಿ ಎದುರಿಸಿ ಪಾಸಿಟಿವ್‌ ಬದುಕು ಅಗತ್ಯ ಎಂದು ಮಹಿಳೆಯಾಗಿ ಸಾಧಿಸಿ ತೋರಿಸಿದ್ದರು. ಚಾಂದಿನಿ ಅವರ ಪಾಸಿಟಿವ್‌ ಬದುಕಿನ  ಪ್ರೇರಣೆಯನ್ನು ರೂರಲ್‌ ಮಿರರ್‌ ಇವರನ್ನು ಸಮಾಜಕ್ಕೆ ಪರಿಚಯಿಸಿತ್ತು.

Advertisement

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಗುರು ಮತ್ತು ಬುಧ ದಶಾಂಕ ಯೋಗ | ಉದ್ಯೋಗದ ಮೇಲೆ ಜಾಕ್ಪಾಟ್ ದೊರೆಯಲಿದೆ
May 24, 2025
5:42 AM
by: ದ ರೂರಲ್ ಮಿರರ್.ಕಾಂ
ರೈತರಿಗೆ ಆಶಾದಾಯಕ ಕೃಷಿಭಾಗ್ಯ ಯೋಜನೆ
May 23, 2025
10:32 PM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆ | ದತ್ತಾಂಶ ತಾಳೆ ಹೊಂದಿಸಲು  ಮೇ 31 ಕೊನೆಯ ದಿನ
May 23, 2025
10:27 PM
by: The Rural Mirror ಸುದ್ದಿಜಾಲ
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ | ಕೊಡಗು ಜಿಲ್ಲೆಯ ಬಹುತೇಕ ಕಡೆ ಮಳೆ |
May 23, 2025
10:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group