ಮಹಿಳೆಯರ ಸಮಾನತೆ ವಿಚಾರ ನೋಡಿದಾಗ ಮೊದಲಿಗಿಂತ ಬಹಳಷ್ಟು ಬದಲಾವಣೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಉತ್ತಮ ರೀತಿಯ ಸೇವೆ ನೀಡುತ್ತಿದ್ದು , ಅಪಾರ ಕೊಡುಗೆಗಳು ಸಮಾಜಕ್ಕೆ ನೀಡುತ್ತಿದ್ದಾರೆ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ದೇರಾಜೆ ಹೇಳಿದರು.
ಅವರು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಸಭಾಭವನದಲ್ಲಿ ನಡೆದ ‘ವಿಶ್ವ ಮಹಿಳಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿದರು. ಭಾರತ ಸರಕಾರ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ ಮಂಗಳೂರು, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು, ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಸುಳ್ಯ, ವನಿತಾ ಸಮಾಜ ಪಂಜ, ಗ್ರಾಮ ಪಂಚಾಯತ್ ಪಂಜ ಇವುಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಪಂಜ ವನಿತಾ ಸಮಾಜದ ಅಧ್ಯಕ್ಷೆ ಪುಷ್ಪಾ ಡಿ.ಪ್ರಸಾದ್ ಕಾನತ್ತೂರ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶ್ಮಿ ಅಶೋಕ್ ಮಾತನಾಡಿ ” ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆ ಪೂಜ್ಯನೀಯ ಸ್ಥಾನವಿದೆ. ತನ್ನ ಮಕ್ಕಳನ್ನು ಸಂಸ್ಕಾರದ ಶಿಕ್ಷಣದೊಂದಿಗೆ ಉತ್ತಮ ಸಮಾಜ ನಿರ್ಮಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದು.”ಎಂದು ಅವರು ಹೇಳಿದರು
ಮುಖ್ಯ ಅತಿಥಿಗಳಾಗಿ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಚಂಚಲ ತೇಜೋಮಯ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಅಧ್ಯಕ್ಷೆ ತ್ರಿವೇಣಿ ದಾಮ್ಲ ಮಾತನಾಡಿದರು. ವನಿತಾ ಸಮಾಜದ ಕಾರ್ಯದರ್ಶಿ ಭಾಗೀರಥಿ ಕರಿಕ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಳ್ಯ ತಾ. ಮಹಿಳಾ ಮಂಡಲಗಳ ಒಕ್ಕೂಟದ ಉಪಾಧ್ಯಕ್ಷೆ ಮಧುಮತಿ ಬೊಳ್ಳೂರು ವಂದಿಸಿದರು.
ಸಾಧಕ ಮಹಿಳೆಯರಿಗೆ ಸನ್ಮಾನ ಸಮಾರಂಭ: ವನಿತಾ ಸಮಾಜಕ್ಕೆ ಧ್ವಜಸ್ತಂಭ ದಾನಿಗಳಾದ ವಿಶ್ರಾಂತಿ ಪ್ರಾಧ್ಯಾಪಕಿ ಲೀಲಾವತಿ, ವಿಶ್ರಾಂತ ಪ್ರಾಂಶುಪಾಲ ಬಾಲಕೃಷ್ಣ ಗೌಡ ನೇರಳ,ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸುತ್ತಿರುವ ಚಾಂದಿನಿ ಪುರುಷೋತ್ತಮ, ವನಿತಾ ಸಮಾಜದ ಅಧ್ಯಕ್ಷೆ ಪುಷ್ಪಾ ಡಿ.ದೇವಿಪ್ರಸಾದ್ ಕಾನತ್ತೂರ್ ರವರನ್ನು ಸನ್ಮಾನಿಸಲಾಯಿತು. ಚಿತ್ರಕಲಾ ಬೊಳ್ಳಾಜೆ, ಚಂದ್ರಾಕ್ಷಿ ಜೆ ರೈ ಸನ್ಮಾನಿತರ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ವನಿತಾ ಸಮಾಜದ ಎಲ್ಲಾ ಸದಸ್ಯರು ಆಶಾಯ ಗೀತೆ ಹಾಡಿದರು. ವನಿತಾ ಸಮಾಜದ ಗೌರವಾಧ್ಯಕ್ಷೆ ಹೇಮಲತಾ ಜನಾರ್ಧನ ಸ್ವಾಗತಿಸಿದರು. ಸುಮಾ ಕುದ್ವ, ಲತಾ ಮುಡೂರು, ಸ್ಪರ್ಣಶ್ರೀ ಅತಿಥಿಗಳನ್ನು ಪರಿಚಯಿಸಿದರು. ರತ್ನಾವತಿ ಬೊಳ್ಳಾಜೆ ಮತ್ತು ಪವಿತ್ರ ರಾಜೇಶ್ ಕುದ್ವ ಮಲ್ಲೆಟಿ ನಿರೂಪಿಸಿದರು.
ಮಹಿಳಾ ದಿನಾಚರಣೆಯ ಸಂದರ್ಭ ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸುತ್ತಿರುವ ಚಾಂದಿನಿ ಪುರುಷೋತ್ತಮ ಅವರನ್ನು ಗೌರವಿಸಲಾಯಿತು. ಧನಾತ್ಮಕ ಬದುಕಿನ ಮೂಲಕ ಸಮಾಜದ ಅನೇಕರಿಗೆ ಮಾದರಿಯಾಗಿದ್ದಾರೆ. ಎಳವೆಯಿಂದಲೇ ಆರೋಗ್ಯದ ಸಮಸ್ಯೆ ಕಾಡುತ್ತಿದ್ದರೂ ಸಮರ್ಥವಾಗಿ ಎದುರಿಸಿ ಪಾಸಿಟಿವ್ ಬದುಕು ಅಗತ್ಯ ಎಂದು ಮಹಿಳೆಯಾಗಿ ಸಾಧಿಸಿ ತೋರಿಸಿದ್ದರು. ಚಾಂದಿನಿ ಅವರ ಪಾಸಿಟಿವ್ ಬದುಕಿನ ಪ್ರೇರಣೆಯನ್ನು ರೂರಲ್ ಮಿರರ್ ಇವರನ್ನು ಸಮಾಜಕ್ಕೆ ಪರಿಚಯಿಸಿತ್ತು.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…