ಮಹಿಳೆಯರ ಆರೋಗ್ಯ | ಮುಂಜಾಗ್ರತೆ ಕ್ರಮಗಳು ಮತ್ತು ಮಹಿಳೆಯರಿಗೆ ಅಗತ್ಯ ವೈದ್ಯಕೀಯ ತಪಾಸಣೆಗಳು…..

March 12, 2024
2:20 PM

ಇಂದಿನ ಬಿಡುವಿಲ್ಲದ ಜೀವನದಲ್ಲಿ ಮಹಿಳೆಯರು(Women) ತಮ್ಮ ಆರೋಗ್ಯದ(Health) ಬಗ್ಗೆ ಹೆಚ್ಚು ಜಾಗೃತರಾಗುವುದು ಅನಿವಾರ್ಯವಾಗಿದೆ. ಇಂದು ಹೃದ್ರೋಗ(Heart attack), ಮಧುಮೇಹ(Diabetes), ಸ್ತನ ಕ್ಯಾನ್ಸರ್(Breast Cancer), ಗರ್ಭಾಶಯದ ಕ್ಯಾನ್ಸರ್(Cervical Cancer), ಮೂಳೆ ಅಸ್ವಸ್ಥತೆಗಳು, ರಕ್ತದೊತ್ತಡದಂತಹ(BP) ವಿವಿಧ ಗಂಭೀರ ಕಾಯಿಲೆಗಳು ಮಹಿಳೆಯರಲ್ಲಿ ಸಂಭವಿಸುತ್ತಿವೆ. ಇದರಿಂದಾಗಿ, ಅಕಾಲಿಕ ಮರಣ ಪ್ರಮಾಣ ಹೆಚ್ಚಾಗಿದೆ. ಸಮಯಕ್ಕೆ ಸರಿಯಾಗಿ ರೋಗನಿರ್ಣಯ ಮಾಡಿದರೆ ನಿಯಮಿತ ಆರೋಗ್ಯ ತಪಾಸಣೆಗಳು(Health Checkup) ಈ ‘ಮೂಕ ಹಂತಕ’ ಅಸ್ವಸ್ಥತೆಗಳನ್ನು ತಡೆಯಬಹುದು. ಆದ್ದರಿಂದ ಕೆಲವು ನಿಯಮಿತ ಪರೀಕ್ಷಣೆಗಳನ್ನು ಮಾಡಬೇಕಾದ ಅನಿವಾರ್ಯತೆ ಬಂದಿದೆ. ಅವು ಯಾವ ವೆಂದು ಎಂದು ತಿಳಿಯೋಣ.

ಸಾಮಾನ್ಯ ಆರೋಗ್ಯ ತಪಾಸಣೆ : ಒಂದು ಅಥವಾ ಎರಡು ವರ್ಷಗಳಿಗೊಮ್ಮೆ ಮಹಿಳೆಯರು ನಿಯಮಿತವಾಗಿ ತಮ್ಮ ಆರೋಗ್ಯ ಸಂಬಂಧಿತ ಸಾಮಾನ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕು. ರಕ್ತ ಹೀನತೆ ಮಹಿಳೆಯರಲ್ಲಿ ಕಂಡುಬರುವ ಒಂದು ಸಾಮಾನ್ಯ ಸಮಸ್ಯೆ. ಭವಿಷ್ಯದ ರೋಗಗಳ ಸಮಯೋಚಿತ ರೋಗನಿರ್ಣಯಕ್ಕೆ ಇದು ಸಹಾಯ ಮಾಡುತ್ತದೆ. ಇದಲ್ಲದೆ, ಮೂರು ಅಥವಾ ನಾಲ್ಕು ವರ್ಷಗಳಿಗೊಮ್ಮೆ ಥೈರಾಯ್ಡ್ ಪರೀಕ್ಷೆ (TSH, T3, T4 ಥೈರಾಯ್ಡ್ ಪರೀಕ್ಷೆ) ಥೈರಾಯ್ಡ್ ಗ್ರಂಥಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಂದ ರಕ್ಷಿಸಬಹುದು.

ಮೂಳೆಗಳ ಪರೀಕ್ಷೆ : ಮೂಳೆ ಸಾಂದ್ರತೆ ಪರೀಕ್ಷೆ: ನಾವು ವಯಸ್ಸಾದಂತೆ, ನಮ್ಮ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಆಸ್ಟಿಯೊಪೊರೋಸಿಸ್ 40 ವರ್ಷ ವಯಸ್ಸಿನ ನಂತರ ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಯೋಗ್ಯ ಸಮಯದಲ್ಲಿ ಇದನ್ನು ಅರಿತುಕೊಳ್ಳಲು ಮೂಳೆ ತಪಾಸಣೆ ಮಾಡುವುದು ಅವಶ್ಯಕ. ಮಹಿಳೆಯರು ತಮ್ಮ BMD (ಬೋನ್ ಮಿನರಲ್ ಡೆನ್ಸಿಟಿ) ಪರೀಕ್ಷೆಯನ್ನು 50 ವರ್ಷಕ್ಕಿಂತ ನಂತರ ಪರೀಕ್ಷಿಸಿಕೊಳ್ಳಬೇಕು.

ಮಧುಮೇಹ ತಪಾಸಣೆ : 30 ವರ್ಷ ವಯಸ್ಸಿನ ನಂತರ, ಮಧುಮೇಹವನ್ನು ತಡೆಗಟ್ಟಲು ವರ್ಷಕ್ಕೊಮ್ಮೆ ರಕ್ತದಲ್ಲಿನ ಗ್ಲೂಕೋಸ್ ಪರೀಕ್ಷೆಯನ್ನು ಮಾಡಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಮಧುಮೇಹ ಮತ್ತು ಅದರ ಅಡ್ಡಪರಿಣಾಮಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಹೃದಯ ತಪಾಸಣೆ : 45 ವರ್ಷ ವಯಸ್ಸಿನ ನಂತರ, ಮಹಿಳೆಯರು ವರ್ಷಕ್ಕೊಮ್ಮೆ ರಕ್ತದೊತ್ತಡ ತಪಾಸಣೆ ಮತ್ತು ಇಸಿಜಿ ಪರೀಕ್ಷೆಯನ್ನು ಮಾಡಬೇಕು. ಇದರಿಂದ ವಿವಿಧ ಹೃದಯ ಸಂಬಂಧಿತ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು. ಇದಲ್ಲದೆ, 35 ವರ್ಷ ವಯಸ್ಸಿನ ನಂತರ, ಐದು ವರ್ಷಗಳಿಗೊಮ್ಮೆ ಕೊಲೆಸ್ಟ್ರಾಲ್ ಸ್ಕ್ರೀನಿಂಗ್ ಪರೀಕ್ಷೆಯನ್ನು ಮಾಡಿ.

Advertisement

ಸಂತಾನೋತ್ಪತ್ತಿ ಆರೋಗ್ಯ : 21-65 ವರ್ಷ ವಯಸ್ಸಿನ ನಂತರ ಪ್ರತಿ ಮಹಿಳೆ ಸಂತಾನೋತ್ಪತ್ತಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಕನಿಷ್ಠ 3 ವರ್ಷಗಳಿಗೊಮ್ಮೆ ಪ್ಯಾಪ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಗರ್ಭಕಂಠದ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್ ಅನ್ನು ಪ್ಯಾಪ್ ಸ್ಮೀಯರ್ ಪರೀಕ್ಷೆಯಿಂದ ಮೊದಲೇ ಕಂಡುಹಿಡಿಯಬಹುದು.

ಇದಲ್ಲದೆ, ಬಂಜೆತನದ ಸಮಸ್ಯೆಯನ್ನು ತಪ್ಪಿಸಲು, 18 ರಿಂದ 40 ವರ್ಷ ವಯಸ್ಸಿನ ಮಹಿಳೆಯರು ನಿಯಮಿತವಾಗಿ PCOS ಆರೋಗ್ಯ ತಪಾಸಣೆ (ಸ್ಕ್ಯಾನಿಂಗ್) ಮಾಡಬೇಕು. ಪಿಸಿಓಎಸ್ ಇಂದು ಬಂಜೆತನದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವಿಶೇಷವಾಗಿ ಮುಟ್ಟಿನ ಸಮಸ್ಯೆ ಇದ್ದಲ್ಲಿ ಸ್ಕ್ಯಾನಿಂಗ್ ಮಾಡಿಸಬೇಕು.

ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಸಿಂಗಾರ ಒಣಗುತ್ತಿದೆಯೇ..? ನಿಮ್ಮ ತೋಟದ ಶತ್ರು ನೀವು ಬಳಸುವ ಬೇವಿನ ಎಣ್ಣೆಯೇ ಇರಬಹುದು…!
January 10, 2026
7:24 AM
by: ದ ರೂರಲ್ ಮಿರರ್.ಕಾಂ
ಕಳಪೆ ಅಡಿಕೆ ಪತ್ತೆ | 15.5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ
January 10, 2026
7:08 AM
by: ದ ರೂರಲ್ ಮಿರರ್.ಕಾಂ
ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ
January 9, 2026
10:26 PM
by: ದ ರೂರಲ್ ಮಿರರ್.ಕಾಂ
ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ
January 9, 2026
10:16 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror