ರಾತ್ರಿ ದೇಸೀ ತಳಿ ದನದ ಹಾಲು ಕುಡಿದರೆ ಶಾಂತ ಚಿತ್ತದಿಂದ ನಿದ್ರೆ ಮಾಡಲು ಅನುಕೂಲ | ಮಲೆನಾಡು ಗಿಡ್ಡ ಸಂರಕ್ಷಣೆ ಹಾಗೂ ಸಂವರ್ಧನಾ ಅಭಿಯಾನ ಕಾರ್ಯಕ್ರಮದಲ್ಲಿ ಡಾ.ಕೆ ಪಿ ರಮೇಶ್‌ |

May 25, 2024
8:10 PM
ಮಲೆನಾಡು ಗಿಡ್ಡ ಸಂರಕ್ಷಣೆ ಹಾಗೂ ಸಂವರ್ಧನಾ ಅಭಿಯಾನದ ಅಂಗವಾಗಿ ಮಲೆನಾಡು ಗಿಡ್ಡ ತಳಿಯ ಮಾಹಿತಿ ಕಾರ್ಯಾಗಾರ ನಡೆಯಿತು.

ಮಲೆನಾಡು ಗಿಡ್ಡ ಸಂರಕ್ಷಣೆ ಹಾಗೂ ಸಂವರ್ಧನಾ ಅಭಿಯಾನದ ಅಂಗವಾಗಿ ಮಲೆನಾಡು ಗಿಡ್ಡ ತಳಿಯ ಮಾಹಿತಿ ಕಾರ್ಯಾಗಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದಲ್ಲಿ ನಡೆಯಿತು.ಗೋತಳಿ ಉಳಿಸುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ಹಮ್ಮಿಕೊಂಡ  ಕಾರ್ಯಕ್ರಮ ಇದಾಗಿತ್ತು. ಸಾಕಷ್ಟು ಸಂಖ್ಯೆಯ ಆಸಕ್ತ ಹೈನುಗಾರರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಲೆನಾಡು ಗಿಡ್ಡ ಗೋತಳಿಯ ಬಗ್ಗೆ ಮಾಹಿತಿ ನೀಡಿದ ರಾಷ್ಟ್ರೀಯ ಹೈನುಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಡಾ. ಕೆ ಪಿ ರಮೇಶ್‌, ದೇಸೀ ಗೋತಳಿ ಹಲವು ವಿಶೇಷ ಗುಣಗಳನ್ನು ಹೊಂದಿದೆ. ಅದರಲ್ಲೂ ಮಲೆನಾಡು ಗಿಡ್ಡ ಗೋತಳಿ ಹೆಚ್ಚಿನ ಮಹತ್ವವನ್ನು ಹೊಂದಿದೆ. ದೇಸೀ ತಳಿಯ ದನದ ಹಾಲನ್ನು ರಾತ್ರಿ ವೇಳೆ ಅಂದರೆ ಮಲಗುವ ಮೊದಲು ಕುಡಿದರೆ ಶಾಂತ ಚಿತ್ತದಿಂದ ನಿದ್ರೆ ಮಾಡಲು ಅನುಕೂಲವಾಗುತ್ತದೆ. ಏಕೆಂದರೆ ಕ್ರಿಪ್ಟೋ ಫಯನಾನ್‌ ಎನ್ನುವ ಆಮಿನೋ ಆಸಿಡ್ ಇರುವುದರಿಂದ ಇದು ಸಾಧ್ಯವಾಗುತ್ತದೆ ಎಂದು ಹೇಳಿದರು.

ದೇಸೀ ಗೋವಿನ ತಳಿ ಹಾಗೂ ಇತರ ಗೋತಳಿಗಳನ್ನು ಗಮನಿಸಿದರೆ ಎರಡೂ ತಳಿಗಳಲ್ಲಿ ಹಾಲು ಇದೆ, ಹಾಲಿನ ಉತ್ಪನ್ನಗಳೂ ಲಭ್ಯವಿದೆ. ಆದರೆ ಔಷಧೀಯ ಗುಣಧರ್ಮಗಳಲ್ಲಿ ದೇಸೀ ತಳಿಯ ಹಸುವಿನಲ್ಲಿ ಹೆಚ್ಚಿದೆ. ಏಕೆಂದರೆ ಈ ಹಸುಗಳ ಮೈಕಟ್ಟು ಹಾಗೂ ದೇಹದ ರಚನೆ ಇಲ್ಲಿನ ಮಣ್ಣಿಗೆ, ವಾತಾವರಣಕ್ಕೆ ಹೊಂದಿಕೊಂಡಿರುತ್ತದೆ. ಈ ಗೋವುಗಳು ಬಿಸಿಲಿಗೆ ಮೈಯೊಡ್ಡಿ ಅವುಗಳೆ ಆಹಾರವನ್ನು ತಿಂದು ಬರುವಂತಾಗಬೇಕು. ಆಗ ಮಾತ್ರಾ ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿರುತ್ತದೆ ಎಂದರು. ಮುಂದಿನ ದಿನಗಳಲ್ಲಿ ಈ ತಳಿಯ ಉಳಿವು ಮಾತ್ರವಲ್ಲ ಪ್ರತೀ ಮನೆಯಲ್ಲೂ ದೇಸೀ ತಳಿಯ ದನ ಇರುವ ಹಾಗೆ ಆಗಬೇಕು ಎಂದರು.

ಇದೇ ವೇಳೆ ಮಲೆನಾಡು ಗೊಡ್ಡ ಹಸುವಿನ ಉತ್ಪನ್ನಗಳ ಔಷಧೀಯ ಗುಣಗಳ ಬಗ್ಗೆ ಈಶ್ವರ ನಂಜನಗೂಡು, ಗವ್ಯೋತ್ಪನ್ನ ತಯಾರಿಕೆ ಕುರಿತು ಶ್ರೀಗುರು ಗೋಸೇವಾ ಪರಿವಾರದ ಶ್ರೀಗುರು ಅವರು ಮಾಹಿತಿ ನೀಡಿದರು. (ಆಡಿಯೋ ಮಾಹಿತಿ ಇಲ್ಲಿದೆ..)

Advertisement

ಮುರುಳ್ಯದ ಅಕ್ಷಯ ಆಳ್ವ ಅವರ ಮನೆ ರೇಷ್ಮಾ ನಿಲಯದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಕಾರ್ಯಕ್ರಮದಲ್ಲಿ ಸಾವಯವ ಕೃಷಿಕ ಎಪಿ ಸದಾಶಿವ ಮರಿಕೆ, ಶಾಸಕಿ ಭಾಗೀರಥಿ ಮುರುಳ್ಯ, ಕೊಂಕೋಡಿ ಪದ್ಮನಾಭ, ಸಾಜ ರಾಧಾಕೃಷ್ಣ ಆಳ್ವ, ಅಶೋಕ್‌ ನೆಕ್ರಾಜೆ, ಸೀತಾರಾಮ ರೈ ಸವಣೂರು, ಪ್ರಸನ್ನ ಭಟ್‌ ಎಣ್ಮೂರು, ನಿರಂಜನ ಪೋಳ್ಯ, ಚಂದ್ರಶೇಖರ ತಾಳ್ತಜೆ ಮೊದಲಾದವರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಲು....

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗುಡ್ಡಗಾಡು ಪ್ರದೇಶಗಳ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಗೆ ದೊಡ್ಡ ಸವಾಲು | ಮಧ್ಯವರ್ತಿಗಳ ಅವಲಂಬನೆ ಕಡಿಮೆ ಮಾಡಲು ರೈತರ ಹೊಸ ಮಾರ್ಗ
January 11, 2026
8:58 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-01-2026| ಇಂದು ಕೆಲವೆಡೆ ಮಳೆ ನಿರೀಕ್ಷೆ | ಎಲ್ಲೆಲ್ಲಿ ಮಳೆ ಇರಬಹುದು..?
January 11, 2026
2:11 PM
by: ಸಾಯಿಶೇಖರ್ ಕರಿಕಳ
ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ
January 11, 2026
9:58 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ
January 11, 2026
8:30 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror