ಇಂದು ವಿಶ್ವ ಏಡ್ಸ್ ಜಾಗೃತಿ ದಿನ. ಹಾವೇರಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಜಾಗೃತಿ ಕೈಗೊಳ್ಳುತ್ತಿರುವ ಪರಿಣಾಮ ಪ್ರಕರಣ ಇಳಿಮುಖವಾಗುತ್ತಿವೆ. 2002 ರಿಂದ 2024 ರ ಅಕ್ಟೋಬರ್‌ವರೆಗೆ 810661 ಸಾಮಾನ್ಯ ಜನರನ್ನು ಎಚ್‌ಐವಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 9454 ಮಂದಿಯಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿದೆ. ಜೊತೆಗೆ ಜಿಲ್ಲೆಯ 601016 ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 681 ಗರ್ಭಿಣಿಯರಲ್ಲಿ ಸೋಂಕು ಕಂಡುಬಂದಿದೆ. ಎಚ್‌ಐವಿ ಸೋಂಕಿತರು ಈ ಹಿಂದೆ ಚಿಕಿತ್ಸೆ ಪಡೆಯಲು ಬೆಂಗಳೂರು ಇಲ್ಲವೇ, ಇತರೆ ನಗರಗಳಿಗೆ ತೆರಳಬೇಕಿತ್ತು. ಈಗ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿಯೇ ಎಆರ್‌ಟಿ ಕೇಂದ್ರ ಆರಂಭವಾಗಿದೆ ಎಂದು ಜಿಲ್ಲಾ ಏಡ್ಸ್ ಮತ್ತು ಕ್ಷಯರೋಗ ನಿಯಂತ್ರಣಾಧಿಕಾರಿ ಡಾಕ್ಟರ್ ನಿಲೇಶ್ ಮಾಹಿತಿ ನೀಡಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

