ಸಮಯವಿದ್ದಾಗ ಓದುವುದಕ್ಕಿಂತ ಸಮಯ ಮಾಡಿಕೊಂಡು ಓದುವುದು ಉತ್ತಮ ಯಾರು ಪುಸ್ತಕಗಳನ್ನು ಪ್ರೀತಿಸುತ್ತಾರೋ ಅವರು ಏಕಾಂಗಿತನವನ್ನು ಯಾವತ್ತೂ ಅನುಭವಿಸಲಾರರು. ಜೀವನದಲ್ಲಿ ಉತ್ತಮ ಸ್ನೇಹಿತ ಅಂತ ಇರುವುದಾದರೆ ಅವುಗಳು ಪುಸ್ತಕಗಳೇ ಸರಿ. ಪುಸ್ತಕ ಓದುವಿಕೆ ಸಂತೋಷ, ಮಾನಸಿಕ ನೆಮ್ಮದಿ, ಜ್ಞಾನ, ವೃಧ್ದಿಸುವ ಶಬ್ದಭಂಡಾರ, ಭಾಷಾ ಕೌಶಲ್ಯ ಎಲ್ಲವನ್ನೂ ಕೊಡುತ್ತದೆ . ಪ್ರತಿಯಾಗಿ ನಮ್ಮ ಸಮಯವನ್ನು ಮಾತ್ರ ಬಯಸುತ್ತದೆ.
1995 ರಲ್ಲಿ ಯುನೆಸ್ಕೋ ಮೊದಲ ಬಾರಿಗೆ ವಿಶ್ವ ಪುಸ್ತಕ ದಿನಾಚರಣೆಯ ಘೋಷಣೆ ಮಾಡಿತು. ಓದುವಿಕೆ, ಪ್ರಕಾಶನ ಮತ್ತು ಕೃತಿಸ್ವಾಮ್ಯ ಗಳ ಬಗ್ಗೆ ಅರಿವು ಮತ್ತು ಪ್ರಚಾರ ಇದರ ಉದ್ದೇಶ.
ಬನ್ನಿ ಪುಸ್ತಕ ಓದೋಣ. “ಪ್ರತಿಯೊಬ್ಬ ವ್ಯಕ್ತಿಯೂ ಒಂದು ಪುಸ್ತಕ, ಪ್ರತಿವರ್ಷ ವೂ ಒಂದು ಅಧ್ಯಾಯ”
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel