ಸಮಯವಿದ್ದಾಗ ಓದುವುದಕ್ಕಿಂತ ಸಮಯ ಮಾಡಿಕೊಂಡು ಓದುವುದು ಉತ್ತಮ ಯಾರು ಪುಸ್ತಕಗಳನ್ನು ಪ್ರೀತಿಸುತ್ತಾರೋ ಅವರು ಏಕಾಂಗಿತನವನ್ನು ಯಾವತ್ತೂ ಅನುಭವಿಸಲಾರರು. ಜೀವನದಲ್ಲಿ ಉತ್ತಮ ಸ್ನೇಹಿತ ಅಂತ ಇರುವುದಾದರೆ ಅವುಗಳು ಪುಸ್ತಕಗಳೇ ಸರಿ. ಪುಸ್ತಕ ಓದುವಿಕೆ ಸಂತೋಷ, ಮಾನಸಿಕ ನೆಮ್ಮದಿ, ಜ್ಞಾನ, ವೃಧ್ದಿಸುವ ಶಬ್ದಭಂಡಾರ, ಭಾಷಾ ಕೌಶಲ್ಯ ಎಲ್ಲವನ್ನೂ ಕೊಡುತ್ತದೆ . ಪ್ರತಿಯಾಗಿ ನಮ್ಮ ಸಮಯವನ್ನು ಮಾತ್ರ ಬಯಸುತ್ತದೆ.
ಓದು ಅವರವರ ಭಾವಕ್ಕೆ , ಆಯ್ಕೆಯ ಮೇಲೆ ಅವಲಂಬಿತ. ಇಲ್ಲಿ ನಮ್ಮ ಆರಿಸುವ ಜಾಣ್ಮೆ ಮುಖ್ಯವಾಗಿರುತ್ತವೆ. ಎಷ್ಟೋ ಒಳ್ಳೆಯ ಪುಸ್ತಕ ಗಳು ಓದುಗರನ್ನು ತಲುಪದೇ ಇರಬಹುದು. ಗಡಿಬಿಡಿಯಲ್ಲಿ ನಾವು ಯಾವತ್ತೂ ಗ್ರಂಥಾಲಯ ಅಥವಾ ಪುಸ್ತಕಗಳ ಅಂಗಡಿಗೆ ಹೋಗಬಾರದು. ಬಹಳಷ್ಟು ಸಮಯ ನಮಗೆ ಇದ್ದಾಗ ತಾಳ್ಮೆಯಿಂದ ಆಯ್ಕೆ ಮಾಡಬಹುದು. ಓದುಗ ವರ್ಗ ಇಂದು ವಿಸ್ತಾರವಾಗಿದೆ, ಆಯ್ಕೆಯೂ ಕೂಡ. ಎಲ್ಲಾ ವಿಭಾಗಗಳಲ್ಲೂ ಸಾಕಷ್ಟು ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಮನರಂಜನೆ, ಜ್ಞಾನವರ್ಧನೆಗಾಗಿ, ಆರೋಗ್ಯ ಸಂಬಂದಿ, ವೈಜ್ಞಾನಿಕ, ತಂತ್ರಜ್ಞಾನ, ಮಕ್ಕಳ ಪುಸ್ತಕಗಳು ಅಲ್ಲದೆ ಇನ್ನೂ ಬೇಕಾದಷ್ಟು ರೀತಿಯ ಪುಸ್ತಕ ಗಳು ಪ್ರಕಟವಾಗುತ್ತಿವೆ. ಓದುಗ ವರ್ಗವೂ ಬೆಳೆಯುತ್ತಿರುವುದು ಸಂತಸದ ಸಂಗತಿ.ಬನ್ನಿ ಪುಸ್ತಕ ಓದೋಣ. “ಪ್ರತಿಯೊಬ್ಬ ವ್ಯಕ್ತಿಯೂ ಒಂದು ಪುಸ್ತಕ, ಪ್ರತಿವರ್ಷ ವೂ ಒಂದು ಅಧ್ಯಾಯ”
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…