#WorldCulturalFestival | ನೃತ್ಯ, ಸಂಗೀತ, ಧ್ಯಾನ ಮತ್ತು ಸಂಸ್ಕೃತಿಯೊಡನೆ ಮಾನವತ್ವದ ವೈವಿಧ್ಯತೆ | ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ತೆರೆ | ವೈವಿಧ್ಯತೆ ಮೆರೆದ 180 ದೇಶಗಳ ಜನ |

October 3, 2023
3:10 PM
ಕಳೆದ ಮೂರು ದಿನಗಳಲ್ಲಿ ಒಂದು ಮಿಲಿಯನ್‍ಗಿಂತಲೂ ಹೆಚ್ಚು ಜನರು 180 ದೇಶಗಳಿಂದ ಬಂದು ವಾಷಿಂಗ್ಟನ್ ಡಿಸಿಯ#Washington DC ನ್ಯಾಷನಲ್ ಮಾಲ್‍ನಲ್ಲಿ ಸೇರಿ ಭ್ರಾತೃತ್ವದ, ಸ್ವಕೀಯತೆಯ ಭಾವದ ಏಕೈಕ ಸಂದೇಶವನ್ನು ಜಗತ್ತಿಗೆ ಕಳುಹಿಸಿ ನೃತ್ಯ, ಸಂಗೀತ, ಧ್ಯಾನ ಮತ್ತು ಸಂಸ್ಕೃತಿಯೊಡನೆ ಮಾನವತ್ವದ ವೈವಿಧ್ಯತೆಯನ್ನು ಆಚರಿಸಿದರು.

ವಾಷಿಂಗ್ಟನ್‌ ನಲ್ಲಿ ಸತತ ಮೂರು ದಿನಗಳ ಕಾಲ ಇಡೀ ವಿಶ್ವವನ್ನೇ ತನ್ನತ್ತ ಸೆಳೆದಿದ್ದ ವಿಶ್ವ ಸಾಂಸ್ಕೃತಿಕ ಉತ್ಸವವು   ದಕ್ಷಿಣ ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದ್ವೀಪಗಳ ವೈಭವಯುತವಾದ ಪ್ರದರ್ಶನಗಳೊಡನೆ ಭವ್ಯವಾಗಿ ಮುಕ್ತಾಯಗೊಂಡಿತು. ಇದರೊಡನೆ ಸರ್ವಧರ್ಮ ನಾಯಕರು ತಮ್ಮದೇ ಆದ ಶೈಲಿಯಲ್ಲಿ ವೇದಿಕೆಯ ಮೇಲೆ ಬಂದು ವಿಶ್ವ ಶಾಂತಿಗಾಗಿ, ದ್ವೇಷ ಮತ್ತು ಧರ್ಮಾಂಧತೆಯ ಮೇಲೆ ಎಲ್ಲರೂ ಏಳಲೆಂದು ಪ್ರಾರ್ಥಿಸಿದರು.

Advertisement

ಕಳೆದ ಮೂರು ದಿನಗಳಲ್ಲಿ ಒಂದು ಮಿಲಿಯನ್‍ಗಿಂತಲೂ ಹೆಚ್ಚು ಜನರು 180 ದೇಶಗಳಿಂದ ಬಂದು ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಮಾಲ್‍ನಲ್ಲಿ ಸೇರಿ ಭ್ರಾತೃತ್ವದ, ಸ್ವಕೀಯತೆಯ ಭಾವದ ಏಕೈಕ ಸಂದೇಶವನ್ನು ಜಗತ್ತಿಗೆ ಕಳುಹಿಸಿ ನೃತ್ಯ, ಸಂಗೀತ, ಧ್ಯಾನ ಮತ್ತು ಸಂಸ್ಕೃತಿಯೊಡನೆ ಮಾನವತ್ವದ ವೈವಿಧ್ಯತೆಯನ್ನು ಆಚರಿಸಿದರು. ಉತ್ಸವವು ಮಾನವ ಸಂಬಂಧಗಳ, ಐಕತೆಯ, ಮಾನವ ಚೇತನದ ಉತ್ಥಾಪನೆಯ ಭಾವದಿಂದ ಪೂರ್ಣವಾಗಿ ತುಂಬಿತ್ತು. ಉತ್ಸವದ ಅತೀ ಅವಿಸ್ಮರಣೀಯವಾದ ಕ್ಷಣಗಳೆಂದರೆ ಉಕ್ರೇನ್ ತಂಡದಿಂದ ಹೃದಯಸ್ಪರ್ಶಿಯಾದ ಪ್ರದರ್ಶನದ ನಂತರ ಗುರುದೇವರ ನೇತೃತ್ವದಲ್ಲಿ ಉಕ್ರೇನ್‍ಗಾಗಿ ನಡೆದ ಹೃದಯಾಂತರಾಳದ ಪ್ರಾರ್ಥನೆಯಾಗಿತ್ತು. ಇನ್ನೊಂದು ಅವಿಸ್ಮರಣೀಯವಾದ ವಿಷಯವೆಂದರೆ, ಗುರುದೇವರೊಡನೆ ಲಿಂಕನ್ ಸ್ಮಾರಕದೆದುರು ಯೋಗದ, ಯೋಗದ ಜ್ಞಾನದ ಹರಿತ. ಬಾಬ್ ಮಾರ್ಲೆಯ ಮೊಮ್ಮಗನಾದ ಸ್ಕಿಪ್ ಮಾರ್ಲೆ ಖ್ಯಾತ ಒನ್ ಲವ್ ಹಾಡಿದಾಗ ಎಲ್ಲರೂ ಬಾವುಟಗಳೊಡನೆ ತೂಗಿದರು. ಗೋ-ಗೋ ಬ್ಯಾಂಡ್ ನ ಕಂಪನಯುತವಾದ ಪ್ರದರ್ಶನಕ್ಕೆ ಗಣ್ಯರು ಹಾಗೂ ಪ್ರೇಕ್ಷಕರು ಸಂತೋಷದಿಂದ, ಸಂಭ್ರಮದಿಂದ, ಅವರ ಲಯದೊಡನೆ ನರ್ತಿಸಿದರು. ಮತ್ತೊಂದು ಐತಿಹಾಸಿಕ ಕ್ಷಣವೆಂದರೆ ವಿವಿಧ ಧರ್ಮಗಳ ನಾಯಕರು ವಿಶ್ವ ಶಾಂತಿಗಾಗಿ ಪ್ರಾರ್ಥಿಸಿ, ನೆರೆದಿದ್ದ ಎಲ್ಲರ ಹೃದಯಗಳನ್ನು ಗೆದ್ದರು.

ಕೊಲಂಬಿಯಾದ ಸಂಸದರಾದ ಜುಆನ್ ಕಾರ್ಲೋಸ್ ಟೆರೆಸ್ ರವರು, ಗುರುದೇವರ ಈ ಜಗತ್ತಿನ ಒಂದು ದೇಶ ನಿಮಗೆ ಪೂರ್ಣ ಕೃತಜ್ಞತೆಯಿಂದ ಇದೆ. ಅದೇ ನನ್ನ ದೇಶ. ಬಗೋಟಾಗೆ ಬಂದು ನಮ್ಮ ಅಧ್ಯಕ್ಷರನ್ನು ಭೇಟಿ ಮಾಡಲು ನಿರ್ಧರಿಸಿ, ಹವಾನಾಗೆ ತೆರಳಿದಿರಿ. ಅಲ್ಲಿ ಎಫ್ ಎ ಆರ್ಸಿಯ ದಂಗೆಕೋರರೊಡನೆ ಮಾತುಕತೆ ನಡೆಸಿ, ಅವರು ಅಹಿಂಸೆಯ ಮಾರ್ಗದಲ್ಲಿ ನಡೆಯುವಂತೆ ಅವರನ್ನು ಒಪ್ಪಿಸಿದಿರಿ ಎಂದಾಗ ಚಪ್ಪಾಳೆಯು ಭೋರ್ಗರೆಯಿತು. ಈ ಉತ್ಸವದಲ್ಲಿ 17,000 ಕಲಾವಿದರು ಭಾಗವಹಿಸಿದರು.

ಜಗತ್ತಿನ ವಿವಿಧ ಪರಂಪರೆಗಳನ್ನು, ಸಂಸ್ಕøತಿಗಳನ್ನು ಪ್ರದರ್ಶಿಸಿದ 57 ಪ್ರದರ್ಶನಗಳು ನಡೆದವು. ಜಗತ್ತಿನ ವಾಣಿಜ್ಯ, ರಾಜಕೀಯ, ಧಾರ್ಮಿಕ ನಾಯಕರು ಉತ್ಸವದಲ್ಲಿ ಸೇರಿ, ಹೆಚ್ಚು ಸಹಕರಿಸುವ, ಪರಸ್ಪರ ಅವಲಂಬಿತವಾದ ಜಾಗತಿಕ ಸಮುದಾಯಕ್ಕಾಗಿ ಕರೆ ನೀಡಿದರು. ಆಧ್ಯಾತ್ಮಿಕ ಗುರುಗಳಾದ ಗುರುದೇವ್ ಶ್ರೀ ಶ್ರೀ ರವಿಶಂಕರವರು ಉತ್ಸವದಲ್ಲಿ ಮಾತನಾಡಿ, ನಮ್ಮೆಲ್ಲರಲ್ಲೂ ಒಳ್ಳೆಯತನ ಅಡಗಿದೆ. ಅದು ಮೇಲೆದ್ದು ಬರಬೇಕಾಗಿದೆ. ನಾವೆಲ್ಲರೂ ಒಂದೇ ವಿಶ್ವದ ಕುಟುಂಬದವರು ಎಂದು ಅರಿತಾಗ ಇದು ಸಾಧ್ಯವಾಗುತ್ತದೆ ಎಂದರು.

ಭಾರತದ ಸಾಂಸ್ಕೃತಿಕ ವೈಭವವನ್ನು ಉತ್ಸವದಲ್ಲಿ ಪ್ರದರ್ಶಿಸಲಾಯಿತು. ‘ಪಂಚಭೂತಂ’ ಭಾರತದ ಐದು ಪಾರಂಪರಿಕ ಶಾಸ್ತ್ರೀಯ ನೃತ್ಯಗಳಾದ ಭರತನಾಟ್ಯ, ಕಥಕ್, ಒಡಿಸ್ಸಿ, ಕೂಚುಪುಡಿ ಮತ್ತು ಮೋಹಿನಿಆಟ್ಟಂನ ಸಮ್ಮೇಳನವಾಗಿತ್ತು ಮತ್ತು ಇವರಿಗೆ 250 ಸಿತಾರ್ ವಾದಕರು, ವೀಣವಾದಕರು, ತಬಲ, ಮೃದಂಗಂ, ಕೊಳಲು, ಘಟಂ ಹಾಗೂ ಪಿಟೀಲುವಾದಕರು ಸಂಗೀತವನ್ನು ನೀಡಿದರು.

– ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಹೊಸತನ | ವಜ್ರಗಳ LGD ಟೆಸ್ಟಿಂಗ್ ಮಿಷನ್
April 15, 2025
3:15 PM
by: The Rural Mirror ಸುದ್ದಿಜಾಲ
ಹವಾಮಾನ ಬದಲಾವಣೆಯ ಪರಿಣಾಮ | ಬಾಂಗ್ಲಾದಲ್ಲಿ ಹೆಚ್ಚಾಗಲಿರುವ ಚಂಡಮಾರುತ |
April 15, 2025
2:16 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-04-2025 | ಕೆಲವು ಕಡೆ ತುಂತುರು ಮಳೆ | ಎ.19 ರಿಂದ ಕೆಲವು ಕಡೆ ಉತ್ತಮ ಮಳೆ ಸಾಧ್ಯತೆ |
April 15, 2025
11:54 AM
by: ಸಾಯಿಶೇಖರ್ ಕರಿಕಳ
ಬುಧನ ಚಲನೆ | 3 ರಾಶಿಗೆ ಸಂಪತ್ತಿನ ಮಳೆ, ಯಶಸ್ಸು
April 15, 2025
7:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group