ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ದೆಹಲಿಯ ಭಗವಾನ್ ಮಹಾವೀರ್ ವನಸ್ಥಲಿ ಉದ್ಯಾನದಲ್ಲಿ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದರು.
“ತಾಯಿಯ ಹೆಸರಲ್ಲಿ- ಒಂದು ಸಸಿ” ಅಭಿಯಾನದಡಿ ಪ್ರಧಾನಿ ಅವರು, ಆಲದ ಸಸಿ ನೆಟ್ಟು ನೀರೆರೆದರು.ಈ ವೇಳೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ವೇಳೆ ದೆಹಲಿ,ರಾಜಸ್ತಾನ, ಹರಿಯಾಣ ಮತ್ತು ಗುಜರಾತ್ ರಾಜ್ಯಗಳ ಒಟ್ಟು 29 ಜಿಲ್ಲೆಗಳ ವ್ಯಾಪ್ತಿಯ ಅರಾವಳಿ ಗಿರಿಶ್ರೇಣಿಯಲ್ಲಿ, ಸಸ್ಯ ಸಂಪತ್ತು ವೃದ್ಧಿಸುವ, ಅರಾವಳಿ ಹಸಿರು ಗೋಡೆ ಯೋಜನೆಗೆ ಪ್ರಧಾನಿ ಚಾಲನೆ ನೀಡಿದರು. ಸುಮಾರು 700 ಕಿಲೋ ಮೀಟರ್ ವ್ಯಾಪ್ತಿಯಲ್ಲಿ, ಅರಣ್ಯೀಕರಣ, ಜಲಮೂಲಗಳ ವೃದ್ಧಿ ಹಾಗೂ ಜೀವ ವೈವಿಧ್ಯ ವೃದ್ಧಿಪಡಿಸುವ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸುವ ಮಹತ್ವದ ಯೋಜನೆ ಇದಾಗಿದೆ. ಇದೇ ವೇಳೆ ಪ್ರಧಾನಿ , ದೆಹಲಿ ಸರ್ಕಾರದ ಸುಸ್ಥಿರ ಸಾರಿಗೆ ಉಪಕ್ರಮದಡಿ 200 ಎಲೆಕ್ಟ್ರಿಕ್ ಬಸ್ ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel