81 ವರ್ಷ ಎಂದರೆ ಸಹಸ್ರ ಚಂದ್ರ ದರ್ಶನದ ಸಂಧಿ ಕಾಲ. ಹವ್ಯಕ ಮಹಾಸಭೆ ಈ ಪರ್ವಕಾಲಕ್ಕೆ ಹೆಜ್ಜೆಹಾಕುತ್ತಾ ಇದ್ದು, ಈ ಸಂದರ್ಭದಲ್ಲಿ ಮಹಾಸಭೆ ಐತಿಹಾಸಿಕ ತೃತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಆಯೋಜಿಸುತ್ತಿದೆ. ಇದು ಜಾತಿಯ ಸಮ್ಮೇಳನವಾಗಿರದೇ, ಹವ್ಯಕ ಸಮುದಾಯದ ವೈಶಿಷ್ಟ್ಯವನ್ನು ಜಗತ್ತಿಗೆ ತೆರೆದಿಡುವ ಕಾರ್ಯವಾಗಿದೆ ಎಂದು ಡಾ.ಗಿರಿಧರ ಕಜೆ ಹೇಳಿದರು.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆದ ಅಖಿಲ ಹವ್ಯಕ ಮಹಾಸಭೆಯ 81ನೇ ವರ್ಷದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಡಾ.ಕಜೆಯವರು, ಸಮಾವೇಶಗಳು ನಡೆಯುವುದು ಸಮಾಜ ಸಂಘಟನೆಗಾಗಿಯೇ ಆಗಿದ್ದು, ಶ್ರೀರಾಮಚಂದ್ರಾಪುರಮಠ, ಶ್ರೀಸ್ವರ್ಣವಲ್ಲಿ ಮಠ ಹಾಗೂ ಶ್ರೀಮನ್ನೆಲಮಾವಿನಮಠಗಳ ಯತಿಗಳು ಒಂದೇ ವೇದಿಕೆಯಲ್ಲಿ ಸೇರುವ ಮೂಲಕ ಸಮಾಜದ ಸಂಘಟನೆಗೆ ಬಲತುಂಬ ಬೇಕು ಎಂಬುದು ಮಹಾಸಭೆಯ ಆಶಯವಾಗಿದೆ ಎಂದರು.
ಸಮಾಜದ ಜನಸಂಖ್ಯೆ ಕುಸಿಯುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು, ಜನಸಂಖ್ಯೆ ಕುಸಿದಂತೆ ನಮ್ಮ ಸಂಸ್ಕೃತಿ ಕುಂದುತ್ತಾ ಹೋಗುತ್ತದೆ. ಜನಸಂಖ್ಯೆ ಕಡಿಮೆಯಾದಂತೆ ನಮ್ಮ ಸಂಸ್ಕಾರಗಳು ಇಲ್ಲವಾಗುವಂತಹ ಸಾಧ್ಯತೆ ಇದೆ. ಈ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದು ಕರೆನೀಡಿದರು.
ಡಿಸೆಂಬರ್ 27, 28 ಹಾಗೂ 29 ರಂದು ಎಲ್ಲಾ ಹವ್ಯಕರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಇದು ಎಲ್ಲಾ ಹವ್ಯಕರಿಗೆ ಬಹಿರಂಗ ಆಮಂತ್ರಣವಾಗಿದ್ದು, ಈ ಕಾರ್ಯಕ್ರಮ ಕೇವಲ ಹವ್ಯಕರಿಗೆ ಮಾತ್ರ ಸೀಮಿತವಾಗಿರದೇ, ಎಲ್ಲಾ ಸಮುದಾಯದವರಿಗೂ ಪಾಲ್ಗೊಳ್ಳಲು ಮುಕ್ತ ಅವಕಾಸವಿರಲಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ ಸಭೆಯನ್ನು ನಡೆಸಿ; ಸದಸ್ಯರ ಪ್ರಶ್ನೆಗಳಿಗೆ ಸಮಜಾಯಿಷಿ ನೀಡಿ, ಮಹಾಸಭೆಯ ಕಾರ್ಯಗಳಿಗೆ ಪದಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ನೀಡುತ್ತಿರುವ ಬೆಂಬಲಕ್ಕೆ ಅಭಿನಂದನೆ ಸಲ್ಲಿಸಿದರು.
ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ ಆಯವ್ಯಯ ಮಂಡಿಸಿ, ಖರ್ಚುವೆಚ್ಚಗಳ ಮಾಹಿತಿ ನೀಡಿದರು. ಮಹಾಸಭೆಯಲ್ಲಿ ಆರ್ಥಿಕ ಶಿಸ್ತಿಗಾಗಿ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿದರು. ಉಪಾಧ್ಯಕ್ಷ ಆರ್ ಎಂ ಹೆಗಡೆ ಬಾಳೆಸರ, ಶ್ರೀಧರ ಭಟ್ಟ ಕೆಕ್ಕಾರು, ಕಾರ್ಯದರ್ಶಿ ಪ್ರಶಾಂತ್ ಭಟ್ಟ ಮಲವಳ್ಳಿ, ಆದಿತ್ಯ ಕಲಗಾರು ಹಾಗೂ ಸಾಗರ, ಮಂಗಳೂರು, ಬೆಂಗಳೂರು, ಉತ್ತರ ಕನ್ನಡ, ಕಾಸರಗೋಡು ಸೇರಿದಂತೆ ಬೇರೆಬೇರೆ ಪ್ರಾಂತಗಳ ನಿರ್ದೇಶಕರು – ಸದಸ್ಯರು ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿದ್ದರು.
ಡಾ.ಕಜೆ 10ನೆಯ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆ: ಡಾ.ಗಿರಿಧರ ಕಜೆಯವರು ಮಹಾಸಭೆಯ ಅಧ್ಯಕ್ಷರಾಗಿ 10 ನೆಯ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆಯಾದರು.
ನಿರ್ದೇಶಕರ ಸಭೆಯಲ್ಲಿ ನೂತನವಾಗಿ ಸರ್ವಾನುಮತದಿಂದ ಆಯ್ಕೆಯಾದ ಆಡಳಿತ ಮಂಡಳಿ ಹೀಗಿದೆ
ಡಾ. ಗಿರಿಧರ ಕಜೆ – ಅಧ್ಯಕ್ಷರು, ಆರ್ ಎಂ ಹೆಗಡೆ ಬಾಳೆಸರ – ಉಪಾಧ್ಯಕ್ಷರು, ಶ್ರೀಧರ ಜೆ ಭಟ್ಟ ಕೆಕ್ಕಾರು – ಉಪಾಧ್ಯಕ್ಷರು, ಸಿಎ. ವೇಣುವಿಘ್ನೇಶ ಸಂಪ – ಪ್ರಧಾನ ಕಾರ್ಯದರ್ಶಿ, ಪ್ರಶಾಂತ ಕುಮಾರ ಜಿ ಭಟ್ಟ ಮಲವಳ್ಳಿ – ಕಾರ್ಯದರ್ಶಿ, ಆದಿತ್ಯ ಹೆಗಡೆ ಕಲಗಾರು – ಕಾರ್ಯದರ್ಶಿ, ಕೃಷ್ಣಮೂರ್ತಿ ಎಸ್ ಭಟ್ ಯಲಹಂಕ – ಕೋಶಾಧಿಕಾರಿ, ಮಾಧ್ಯಮ ಸಂಪರ್ಕ : ಸಂದೇಶ ತಲಕಾಲಕೊಪ್ಪ ಆಯ್ಕೆಯಾದರು.
ಅಡಿಕೆ ನಿಷೇಧದ ತೂಗುಗತ್ತಿಯ ಮೇಲೆಯೇ ಉದ್ಯಮವನ್ನು ಮುನ್ನಡೆಸಬೇಕಾಗುತ್ತದೆ.ಇನ್ನಾದರೂ ಕಠಿಣ ಪರಿಶ್ರಮದೊಂದಿಗೆ ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಅಡಿಕೆ ಹಾಳೆತಟ್ಟೆ ಅಮೇರಿಕಾದಲ್ಲಿ ನಿಷೇಧ ಹೇರಲಾಗುತ್ತಿದೆ. ಹೀಗಾಗಿ ಭಾರತದಿಂದ ಸದ್ಯ ಅಮೇರಿಕಾಕ್ಕೆ ಹಾಳೆತಟ್ಟೆ…
ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…
ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…
ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…