ಇಂದು ವಿಶ್ವ ಹೃದಯ ದಿನ (world Heart day). ಇತ್ತೀಚಿನ ದಿನಗಳಲ್ಲಿ ಸಾವಿಗೆ ದೊಡ್ಡ ಕಾರಣವಾಗಿರುವ ಹೃದಯ ರಕ್ತನಾಳದ ಕಾಯಿಲೆಗಳ ಬಗ್ಗೆ ಜನರಿಗೆ ತಿಳಿಸಲು ‘ವರ್ಲ್ಡ್ ಹಾರ್ಟ್ ಫೌಂಡೇಶನ್’ ಪ್ರತಿ ವರ್ಷ ಸೆಪ್ಟೆಂಬರ್ 29ರಂದು ನಡೆಸುವ ಅಂತರಾಷ್ಟ್ರೀಯ ಅಭಿಯಾನವೇ ವಿಶ್ವ ಹೃದಯ ದಿನ. ಹೃದಯಕ್ಕೆ ಸಂಬಂಧಸಿದ ಕಾಯಿಲೆಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಚಟುವಟಿಕೆಗಳು ಮತ್ತು ಜಾಗ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ
ಹೃದಯವು ಮಾನವ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ ಪ್ರತಿಯೊಬ್ಬರೂ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಅವಶ್ಯಕ. ಹೃದಯ ರಕ್ತನಾಳದ ಆರೋಗ್ಯ ಮತ್ತು ಕೆಲವು ಜೀವನ ಶೈಲಿಯ ಅಭ್ಯಾಸಗಳ ಬಗ್ಗೆ ಅರಿವಿನ ಕೊರತೆಯಿಂದಾಗಿ ಹೃದಯ ರಕ್ತನಾಳದ ಕಾಯಿಲೆಗಳು ವಿಶ್ವದಾದ್ಯಂತ ಮರಣಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಸುಮಾರು 1.7 ಕೋಟಿ ಜನರು ಹೃದಯದ ರಕ್ತನಾಳದ ಕಾಯಿಲೆಯಿಂದ ಸಾವಿಗೀಡಾಗುತ್ತಿದ್ದಾರೆ.
ಈ ವರ್ಷ ವಿಶ್ವ ಹೃದಯ ದಿನದ ಮುಖ್ಯ ಥೀಮ್ :– ಹೃದಯವನ್ನು ಬಳಸಿ ಹೃದಯವನ್ನು ತಿಳಿಯಿರಿ ಹೃದಯಕ್ಕಾಗಿ ಆಯುರ್ವೇದ ಇಂದಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿ ಸಂಭವಿಸುವ ಹೃದಯಾಘಾತ (Heart attack ), ಪಾರ್ಶ್ವವಾಯು,ಹೃದಯದ ರಕ್ತನಾಳಗಳ ಕಾಯಿಲೆಗಳು ಮೊದಲಾದ ಹ್ರದ್ರೋಗಗಳಿಗೆ ಕಾರಣವಾಗಿರುವ ಕೆಲವು ಅಪಾಯಕಾರಿ ಅಂಶಗಳು ಹೀಗಿದೆ, ಅತಿಯಾದ ರಕ್ತದೊತ್ತಡ, ಅತಿಯಾದ ಬೊಜ್ಜು, ಅನಿಯಂತ್ರಿತ ಮಧುಮೇಹ, ಅತಿ ಧೂಮಪಾನ, ಅತಿಯಾದ ಮದ್ಯಪಾನ , ಮಾನಸಿಕ ಒತ್ತಡ , ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿ ಇತ್ಯಾದಿ.
ಹೃದ್ರೋಗಕ್ಕೆ ಹಲವಾರು ಆಯುರ್ವೇದ ಚಿಕಿತ್ಸೆಗಳಿವೆ. ರೋಗ ನಿರ್ಣಯ ಮಾಡಿ ಅದರ ಕಾರಣಕ್ಕನುಸಾರವಾಗಿ ಹೃದ್ರೋಗದ ಪ್ರಕಾರವನ್ನು ಅರಿತು ಅದರ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ.
ಹೃದಯ ಬೆಂಬಲ ಚಿಕಿತ್ಸೆಗಳು: ಪಂಚಕರ್ಮ,ಯೋಗ, ಪ್ರಾಣಾಯಾಮ ಮತ್ತು ಧ್ಯಾನದಂತಹ ಆಯುರ್ವೇದ ಚಿಕಿತ್ಸೆಗಳು ನರಮಂಡಲದ ಮೇಲೆ ಪ್ರಭಾವವನ್ನು ಬೀರಿ, ಒತ್ತಡವನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡಲು ಪ್ರೇರೇಪಿಸುತ್ತವೆ -ಸಮತೋಲಿತ ಆಹಾರ ಹಣ್ಣು ತರಕಾರಿಗಳ ಸಮರ್ಪಕ ಸೇವನೆ ಹಾಗೂ ಅತಿಯಾದ ಕೊಬ್ಬು, ಜಂಕ್ ಫುಡ್ ಇವುಗಳ ನಿಷಿದ್ಧ. ಗಿಡಮೂಲಿಕೆ ಪರಿಹಾರ ಮತ್ತು ಆಯುರ್ವೇದ ಔಷಧಗಳು ಹೃದಯಕ್ಕೆ ಆಯುರ್ವೇದ ಔಷಧಿಗಳು ರೋಗಿಯ ಮೂಲ ಕಾರಣವನ್ನು ಗುರಿಯಾಗಿರಿಸಿಕೊಂಡು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಆಮಲಕಿ, ಹರಿದ್ರ, ಅರ್ಜುನ, ಅಶ್ವಗಂಧ ಮೊದಲಾದ ಪ್ರಮುಖ ಗಿಡಮೂಲಿಕೆಗಳು ಹೃದಯ ಕಾರ್ಯವನ್ನು ಸುಧಾರಿಸಲು ಸಹಾಯಕಾರಿಯಾಗಿವೆ. ಆಧುನಿಕ ವೈದ್ಯಕೀಯ ವಿಜ್ಞಾನವನ್ನು ಅರಿತು ನೈಸರ್ಗಿಕ ಗಿಡಮೂಲಿಕೆಗಳು ಮತ್ತು ಆಯುರ್ವೇದ ಔಷಧ,ಪಂಚಕರ್ಮ ಯೋಗ, ಧ್ಯಾನ,ಪ್ರಾಣಾಯಾಮ ಉತ್ತಮ ಜೀವನ ಶೈಲಿ ಹಾಗೂ ಆರೋಗ್ಯಕರ ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡು ಹೃದಯದ ಕಾಳಜಿಯನ್ನು ವಹಿಸಿ ಹೃದಯದ ಕಾಯಿಲೆಯನ್ನು ತಡೆಗಟ್ಟುವುದು ಅತ್ಯವಶ್ಯಕ. ಹೃದಯ ಆರೋಗ್ಯವಾಗಿದ್ದರೆ ಅದುವೇ ಜೀವನ.