Advertisement
MIRROR FOCUS

ವಿಶ್ವ ಹೃದಯ ದಿನಾಚರಣೆ | ಗ್ರಾಮೀಣ ಜನರ ಹೃದಯದ ಕಾಳಜಿ | 50 ಲಕ್ಷ ಜನರನ್ನು ತಲುಪಿದ ವಿಶೇಷ ಯೋಜನೆ

Share
ಇಂದು ವಿಶ್ವ ಹೃದಯ ದಿನಾಚರಣೆ. ಹೃದಯ ರಕ್ಷಣೆಯ ವಿಶೇಷ ಯೋಜನೆಯೊಂದು ರಾಜ್ಯದ ಸುಮಾರು 50  ಲಕ್ಷ ಜನರಿಗೆ ತಲುಪಿದೆ.ಮಂಗಳೂರಿನಿಂದ ಆರಂಭವಾದ ಈ ಯೋಜನೆ ರಾಜ್ಯದ ವಿವಿಧ ಮೂಲೆಗಳಿಗೆ ಇಂದು ತಲುಪಿದೆ.  ಮಂಗಳೂರಿನ ಹೃದ್ರೋಗ ತಜ್ಞ ಮತ್ತು ಪ್ರಾಧ್ಯಾಪಕ ಹಾಗೂ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ|ಪದ್ಮನಾಭ ಕಾಮತ್ ಗ್ರಾಮೀಣ ಭಾಗದ ಜನರ ಜೀವ ಉಳಿಸುವ ನಿಟ್ಟಿನಲ್ಲಿ  ಹಮ್ಮಿಕೊಂಡ ಯೋಜನೆ Cardiolgy At Doorsteps ಇಂದು ರಾಜ್ಯದಲ್ಲಿ  ಮೆಚ್ಚುಗೆ ಪಡೆದಿದೆ. ಯಾವುದೇ ಕಾರಣಕ್ಕೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಯಾರೊಬ್ಬರೂ ಬದುಕು ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಕೆಲಸ ಮಾಡುತ್ತಿದೆ.
ಈ ಯೋಜನೆ ಆರಂಭವಾಗಿ ಸುಮಾರು 30  ತಿಂಗಳಾಗಿವೆ. 2018 ಫೆಬ್ರವರಿ ವೇಳೆಗೆ ಆರಂಭವಾದ ಈ ಯೋಜನೆ ಗ್ರಾಮೀಣ ಭಾಗದ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ಸೆಳೆದಿದೆ. ಹೃದಯ ಸಂಬಂಧಿ ಕಾಯಿಲೆಗಳು ಗ್ರಾಮೀಣ ಭಾಗದಲ್ಲಿ ಭಯ ಹುಟ್ಟಿಸುತ್ತದೆ. ಎದೆನೋವು ಇತ್ಯಾದಿಗಳು ಕಾಣಿಸಿಕೊಂಡಾಗ ತಕ್ಷಣ  ಯಾವ ಸಮಸ್ಯೆ ಎಂಬುದು ಪತ್ತೆಯಾಗಬೇಕು ಜೊತೆಗೆ ತಕ್ಷಣ ಚಿಕಿತ್ಸೆಯೂ ಆಗಬೇಕು. ಆದರೆ ಗ್ರಾಮೀಣ ಭಾಗದಲ್ಲಿ ಇದ್ಯಾವುದಕ್ಕೂ ವ್ಯವಸ್ಥೆ ಇರುವುದಿಲ್ಲ. ಇದ್ದರೂ ಅಸಮರ್ಪಕ ಇಸಿಜಿ ವ್ಯವಸ್ಥೆ ಇರುತ್ತದೆ. ಕನಿಷ್ಠ 1 ಗಂಟೆ ಚಿಕಿತ್ಸೆಗೆ ಸಮಯ ತಗಲುತ್ತದೆ. ಅದಾಗಲೇ ಪ್ರಮುಖ ಸಮಯ ಕಳೆದ ಬಿಡುತ್ತದೆ. ಇದಕ್ಕಾಗಿ ಮಂಗಳೂರಿನ ಪ್ರಮುಖ  ಹ್ರದ್ರೋಗ ತಜ್ಞ ಡಾ| ಪದ್ಮನಾಭ ನೇತೃತ್ವದ ವೈದ್ಯರ ತಂಡ ಹಾಗೂ ಗ್ರಾಮೀಣ ಭಾಗದ ವೈದ್ಯರ ಸಮನ್ವಯದ ಜೊತೆಗೆ  ಆಧುನಿಕ ಸೌಲಭ್ಯ ಬಳಸಿ ಚಿಕಿತ್ಸೆ ನೀಡಲು ಪ್ರಯತ್ನ ಮಾಡುತ್ತಿದೆ.
ಇಂದು ರಾಜ್ಯದ ವಿವಿದೆಡೆ ಈ ಇಸಿಜಿ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಸದ್ಯ 260ಕ್ಕೂ ಅಧಿಕ ಇಸಿಜಿ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಗ್ರಾಮೀಣ ಹಾಗೂ ನಗರದ ಪ್ರದೇಶದಲ್ಲಿ  ಸೇರಿಸಿ ಸುಮಾರು 3000 ವೈದ್ಯರು ಕೈಜೋಡಿಸಿದ್ದಾರೆ. ಈಗಲೂ ಈ ಯೋಜನೆ ಮುಂದುವರಿದಿದೆ. ವಿಶ್ವ ಹೃದಯ ಆರೋಗ್ಯದ ದಿನಂದು  ಕಾರ್ಕಳ ತಾಲೂಕಿನ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ECG ಯಂತ್ರಗಳ ಅಳವಡಿಕೆಯಾಗಲಿದೆ. ಇದಾದರೆ ಒಟ್ಟಾರೆ 275  ಇಸಿಜಿ ಯಂತ್ರಗಳ ಅಳವಡಿಕೆಯಾದಂತಾಗುತ್ತದೆ.
ಏನಿದು ಸಿಎಡಿ ?  ವ್ಯವಸ್ಥೆ ಏನು ?:

ಗ್ರಾಮೀಣ ಭಾಗದ ಬಹುದೊಡ್ಡ ಸಮಸ್ಯೆ ಹೃದಯಾಘಾತ. ಇದಕ್ಕೆ ತಕ್ಷಣವೇ ಚಿಕಿತ್ಸೆಯಾಗಬೇಕು.ಆದರೆ ಗ್ರಾಮೀಣ ಭಾಗದಲ್ಲಿ ಇದು ಸಾಧ್ಯವಾಗುತ್ತಿಲ್ಲ.ಇದಕ್ಕೆ ಅಸಮರ್ಪಕ ಇಸಿಜಿ  ಸೌಲಭ್ಯಗಳು ಮತ್ತು ವಿಳಂಬವಾದ ರೋಗನಿರ್ಣಯವೂ ಕಾರಣವಾಗುತ್ತದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಹೃದಯಾಘಾತ ಪ್ರಕರಣಗಳಲ್ಲಿ ಸಾವಿಗೆ ಕಾರಣವಾಗಿದೆ.

2014 ರಲ್ಲಿ ವಿಳಂಬವಾದ ರೋಗನಿರ್ಣಯದಿಂದಾಗಿ ಗ್ರಾಮೀಣ ಭಾಗದ ಯುವಕನೊಬ್ಬ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿರುವುದನ್ನು ಕಂಡ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ|ಪದ್ಮನಾಭ ಕಾಮತ್ ಇಂತಹ ಪ್ರಕರಣಗಳಿಗೆ ಏನಾದರು ಮಾಡಲೇಬೇಕು ಎಂದು ಸಾಮಾಜಿಕ ನೆಲೆಯಲ್ಲಿ ಯೋಚಿಸಿದರು. ಹೀಗಾಗಿ ವಾಟ್ಸಾಪ್ ಗುಂಪುಗಳ ಮೂಲಕ ಹಳ್ಳಿಗಳು, ಹತ್ತಿರದ ಪಟ್ಟಣಗಳು, ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು ಹಾಗೂ ಅಲ್ಲಿನ ಭೌಗೋಳಿಕ ಸಮಸ್ಯೆ, ತಾಂತ್ರಿಕ ಸಮಸ್ಯೆ ಬಗ್ಗೆ ಮಾಹಿತಿ ಕಲೆ ಹಾಕಿದರು. ಫೆಬ್ರವರಿ 2018 ರಲ್ಲಿ, ಅವರು 150 ಸದಸ್ಯರನ್ನು ಹೊಂದಿರುವ ವಾಟ್ಸಾಪ್ ಗುಂಪಿನ ‘ಕಾರ್ಡಿಯಾಲಜಿ ಎಟ್ ಡೋರ್‌ಸ್ಟೆಪ್’ (CAD) ಅನ್ನು ರಚಿಸಿದರು, ಹೃದಯ ಸಂಬಂಧಿತ ಸಮಸ್ಯೆಗಳನ್ನು ಗುರುತಿಸಲು ಮತ್ತು ವಾಟ್ಸಾಪ್ ಮೂಲಕ ಸಹಾಯವನ್ನು ಒದಗಿಸಲು ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಖಾಸಗಿ ಚಿಕಿತ್ಸಾಲಯಗಳಲ್ಲಿ ಇಸಿಜಿ ಯಂತ್ರಗಳನ್ನು ಸ್ಥಾಪಿಸಿದರು. ಈ ಇಸಿಜಿ ಯಂತ್ರಗಳನ್ನು ಉಚಿತವಾಗಿ ನೀಡಲಾಯಿತು. ಈಗಾಗಲೇ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಹಾಗೂ ಕೆಲವು ಕಡೆ ಖಾಸಗಿ ಕ್ಲಿನಿಕ್ ಗಳಲ್ಲಿ  ಇಸಿಜಿ ಯಂತ್ರ ಇಡಲಾಗಿದೆ. ಪ್ರಥಮ ಚಿಕಿತ್ಸೆ ಸಮಯಕ್ಕೆ ಸರಿಯಾಗಿ ನೀಡಿದರೆ 80 ರಷ್ಟು ಹೃದಯ ರೋಗಿಗಳನ್ನು ಉಳಿಸಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಪ್ರಥಮ ಚಿಕಿತ್ಸಾ ಕೊರತೆಯ ಬಗ್ಗೆ, ಗ್ರಾಮೀಣ ಪ್ರದೇಶಗಳಲ್ಲಿ ಇಸಿಜಿ ಸೌಲಭ್ಯದ ಕೊರತೆಯಿಂದಾಗಿ ಸರಿಯಾದ ರೋಗನಿರ್ಣಯದ ಕೊರತೆಯು ಅನೇಕ ಸಂದರ್ಭಗಳಲ್ಲಿ ಕಾರಣವಾಗಿದೆ ಎಂದು ಹೇಳುತ್ತಾರೆ ಡಾ.ಪದ್ಮನಾಭ ಕಾಮತ್.

ಹೇಗೆ ಕೆಲಸ ಮಾಡುತ್ತದೆ CAD ?:

ಎದೆನೋವು ಸಮಸ್ಯೆ ಕಾಡುವ ವ್ಯಕ್ತಿ CAD ಕಡೆಯಿಂದ ಇಸಿಜಿ ಯಂತ್ರ ಇರಿಸಲಾದ   ಖಾಸಗಿ ಕ್ಲಿನಿಕ್ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ತಕ್ಷಣವೇ ಅಲ್ಲಿನ ವೈದ್ಯರು  ಇಸಿಜಿಯನ್ನು ದಾಖಲಿಸುತ್ತಾರೆ ಮತ್ತು ಅದನ್ನು ವಾಟ್ಸಾಪ್ ಗುಂಪಿನಲ್ಲಿ ರವಾನಿಸುತ್ತಾರೆ.ಈ ಗುಂಪುಗಳಲ್ಲಿ ಪೋಸ್ಟ್ ಮಾಡಲಾದ ಇಸಿಜಿಗಳ ಬಗ್ಗೆ ಮಂಗಳೂರಿನ ಮತ್ತೊಬ್ಬ ಹೃದ್ರೋಗ ತಜ್ಞ ಕಾಮತ್ ಮತ್ತು ಮನೀಶ್ ರೈ ಅಥವಾ ಡಾ.ಪದ್ಮನಾಭ ಕಾಮತ್ ಅಥವಾ ತಜ್ಞ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ತುರ್ತು ಸಂದರ್ಭಗಳಲ್ಲಿ  ಅವರನ್ನು ಎಚ್ಚರಿಸಿ ಅಂಬುಲೆನ್ಸ್ ಮೂಲಕ ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡುತ್ತಾರೆ. ಸಾಮಾನ್ಯ ಸಂದರ್ಭದಲ್ಲಿ ಮುಂದಿನ ಚಿಕಿತ್ಸೆ ಹಾಗೂ ಪರೀಕ್ಷೆಗೆ ಸಲಹೆ ನೀಡುತ್ತಾರೆ. ಗ್ರೂಪುಗಳಲ್ಲಿ ಬರುವ ಇಸಿಜಿಗಳಿಗೆ ಕ್ಷಣಮಾತ್ರದಲ್ಲಿ ಉತ್ತರವನ್ನೂ ನೀಡುತ್ತಾರೆ.  ಇಸಿಜಿಯಲ್ಲಿ ಹೃದಯಾಘಾತಕ್ಕೆ ಸಂಬಂಧಿಸಿದ ಸಂದರ್ಭಗಳನ್ನು ಕಂಡುಬಂದರೆ ತಕ್ಷಣ ನಿಭಾಯಿಸಲು ಅವರಿಗೆ ಪ್ರಥಮ ಚಿಕಿತ್ಸೆಯನ್ನು ಸಹ ಕಲಿಸಲಾಗಿದೆ.

ಇಂದು ರಾಜ್ಯದ 21 ಜಿಲ್ಲೆಗಳಿಗೆ ಈ ಯೋಜನೆ ತಲುಪಿದೆ. ಇಡೀ ಕರ್ನಾಟಕವನ್ನು ಈ ಯೋಜನೆಯ ಮೂಲಕ ತಲುಪಬೇಕು ಎನ್ನುವುದು ಸಮಾಜಮುಖಿ ವೈದ್ಯರ ಉದ್ದೇಶವಾಗಿದೆ.

ಹೃದಯ ರೋಗಕ್ಕೆ ಸಂಬಂಧಿಸಿದಂತೆ ತಕ್ಷಣದ ಚಿಕಿತ್ಸೆಯಾಗಬೇಕು ಹಾಗೂ ಸಮಾಜದ ಎಲ್ಲಾ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆ ಸಿಗಬೇಕು ಎನ್ನುವುದು  ನಮ್ಮ ಉದ್ದೇಶ ಎನ್ನುತ್ತಾರೆ  ಡಾ|ಪದ್ಮನಾಭ ಕಾಮತ್.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 08-07-2026 | ಕರ್ನಾಟಕದಲ್ಲಿ ಮಳೆ ಇಳಿಮುಖ – ರೈತರಿಗೆ ಮಹತ್ವದ ಹವಾಮಾನ ಮಾಹಿತಿ..!

ಜುಲೈ 10ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಜುಲೈ 11…

40 minutes ago

E20 ಪೆಟ್ರೋಲ್‌ : ದೇಶದ ಹಿತದ ಹೆಸರಿನಲ್ಲಿ ಸಾಮಾನ್ಯರ ಹೆಗಲಿನ ಮೇಲೆ ಹೆಚ್ಚು”ವರಿ”ಯೇ?

ಪವರ್‌ ಸ್ಪ್ರೇಯರ್‌ ಸಮಸ್ಯೆಯ ಅನುಭವದ ಮೂಲಕ E20 ಪೆಟ್ರೋಲ್‌ನ ಪರಿಣಾಮಗಳ ಬಗ್ಗೆ ಪ್ರಶ್ನೆ…

1 hour ago

₹1,500 ಕೋಟಿ ಅಕ್ರಮ ಅಡಿಕೆ ಜಾಲ ಬಯಲು – ED ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಸಾಗಾಟ ಮಾಡಿ ₹1,500 ಕೋಟಿ ಹಣ ವರ್ಗಾವಣೆ ನಡೆಸಿದ…

16 hours ago

ಮಹಾರಾಷ್ಟ್ರದಲ್ಲಿ ತಡೆಹಿಡಿದ ಅಡಿಕೆ ಲಾರಿಗಳ ಬಿಡುಗಡೆಗೆ ಫಡ್ನವೀಸ್‌ಗೆ ಮನವಿ

ಮಹಾರಾಷ್ಟ್ರದಲ್ಲಿ ತಡೆಹಿಡಿದಿರುವ 50ಕ್ಕೂ ಹೆಚ್ಚು ಅಡಿಕೆ ಲಾರಿಗಳನ್ನು ಬಿಡುಗಡೆ ಮಾಡುವಂತೆ ಫಡ್ನವೀಸ್‌ಗೆ ಅಡಿಕೆ…

16 hours ago

ರಾಜ್ಯದ ವಿವಿದೆಡೆ ಭಾರೀ ಮಳೆ – ಜುಲೈ 8 ರಂದು ಹಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರೀ ಮಳೆ ಹಿನ್ನೆಲೆಯಲ್ಲಿ ಜುಲೈ 8ರಂದು ರಾಜ್ಯದ ಹಲವು ಜಿಲ್ಲೆಗಳ ಶಾಲೆ-ಕಾಲೇಜುಗಳಿಗೆ ರಜೆ…

17 hours ago

ಮುಂಗಾರು ಬೆಳೆ ಸಮೀಕ್ಷೆ ಆರಂಭ | ರೈತರೇ ಮೊಬೈಲ್‌ ಮೂಲಕ ಬೆಳೆ ವಿವರ ದಾಖಲಿಸಿ – ಕೃಷಿ ಇಲಾಖೆ ಮನವಿ

2026-27ರ ಮುಂಗಾರು ಬೆಳೆ ಸಮೀಕ್ಷೆಗೆ ಚಾಲನೆ; ರೈತರು ಮೊಬೈಲ್‌ ಆ್ಯಪ್‌ ಮೂಲಕವೇ ಬೆಳೆ…

17 hours ago