ವಿಶ್ವ ಹೋಮಿಯೋಪತಿ ದಿನ 2024 | ಹೋಮಿಯೋಪತಿ ಎಂದರೇನು? ಹೋಮಿಯೋಪತಿ ವೈದ್ಯ ಪದ್ಧತಿ ಆರಂಭವಾದದ್ದು ಹೇಗೆ? ಈ ದಿನದ ಇತಿಹಾಸ, ಮಹತ್ವ, ಹಿನ್ನೆಲೆ ಏನು?

April 10, 2024
10:05 PM

ಪ್ರಪಂಚದಾದ್ಯಂತ ಏಪ್ರಿಲ್‌ 10 ರಂದು ವಿಶ್ವ ಹೋಮಿಯೋಪತಿ(Homeopathy) ದಿನವನ್ನು ಆಚರಿಸಲಾಗುತ್ತದೆ. ಇಂದು ಹೋಮಿಯೋಪತಿ ವೈದ್ಯ ಪದ್ಧತಿಯ ಜನಕ ಡಾ. ಸ್ಯಾಮುಯೆಲ್‌ ಹ್ಯಾನೆಮನ್‌(Dr. Samuel Hahnemann) ಅವರ ಜನ್ಮದಿನವೂ(Birthday) ಹೌದು. ಈ ದಿನದ ಬಗ್ಗೆ ಇನ್ನಷ್ಟು ಆಸಕ್ತಿದಾಯಕ ವಿಚಾರಗಳು ಇಲ್ಲಿದೆ… ಈ ದಿನದಂದು ಹೋಮಿಯೋಪತಿ ವೈದ್ಯರು(Doctor), ಇದರ ಬೆಂಬಲಿಗರು ಹಾಗೂ ಅನುಯಾಯಿಗಳು, ಈ ಪರ್ಯಾಯ ಔಷಧ(Medicine) ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

Advertisement
Advertisement

ಹೋಮಿಯೋಪತಿಯು ರೋಗಗಳನ್ನು ಗುಣಪಡಿಸುವ ಒಂದು ಸಮಗ್ರ ಚಿಕಿತ್ಸಾ ವಿಧಾನ. ಇದು ನೈಸರ್ಗಿಕ ಹಾಗೂ ನೈಸರ್ಗಿಕವಾಗಿ ಲಭ್ಯ ಇರುವ ಪದಾರ್ಥಗಳಿಂದ ರೋಗಗುಣಪಡಿಸುವ ಕ್ರಮವಾಗಿದೆ. ಈ ಪದ್ಧತಿಯನ್ನು 18ನೇ ಶತಮಾನದಲ್ಲಿ ಡಾ. ಸಾಮ್ಯಯಲ್‌ ಅಭಿವೃದ್ಧಿ ಪಡಿಸಿದರು. ಜರ್ಮನ್‌ ಮೂಲದ ವೈದ್ಯರಾಗಿರುವ ಸ್ಯಾಮುಯೆಲ್‌ ತನ್ನ ಕಾಲದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಹಾನಿಕಾರಕ ಅಡ್ಡ ಪರಿಣಾಮಗಳ ಬಗ್ಗೆ ಅತೃಪ್ತಿ ಹೊಂದಿದ್ದರು. ಆ ಕಾರಣದಿಂದ ಹೊಸ ವೈದ್ಯಕೀಯ ಪದ್ಧತಿಯನ್ನು ಅನ್ವೇಷಿಸಿದ್ದರು ಎನ್ನಲಾಗುತ್ತದೆ.

ಇತಿಹಾಸ: ಹೋಮಿಯೋಪತಿ ವಿಧಾನದಲ್ಲಿ ಯಾವುದೇ ಶಸ್ತಚಿಕಿತ್ಸೆ ಇರುವುದಿಲ್ಲ. ʼಯಾವುದೇ ಕಾಯಿಲೆಯಾಗಲಿ ವ್ಯಕ್ತಿಯಿಂದ ವ್ಯಕ್ತಿಗೆ ರೋಗಲಕ್ಷಣಗಳು ಭಿನ್ನವಾಗಿರುತ್ತವೆ. ಆ ಕಾರಣಕ್ಕೆ, ವ್ಯಕ್ತಿಯ ವಿಶಿಷ್ಟ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಬೇಕುʼ ಎಂಬ ನಂಬಿಕೆಯನ್ನು ಈ ವೈದ್ಯಕೀಯ ಪದ್ಧತಿ ಆಧರಿಸಿದೆ. ಸ್ಯಾಮ್ಯುಯೆಲ್ ಹ್ಯಾನೆಮನ್ (1755-1843) ಅವರ ವ್ಯಾಪಕವಾದ ಪ್ರವರ್ತಕ ಕೆಲಸದ ನಂತರ ಹೋಮಿಯೋಪತಿ ಮೊದಲ ಬಾರಿಗೆ 19 ನೇ ಶತಮಾನದಲ್ಲಿ ಪ್ರಾಮುಖ್ಯತೆಯನ್ನು ಪಡೆಯಿತು. ಆದರೆ, ಕ್ರಿಸ್ತಪೂರ್ವ 5ನೇ ಶತಮಾನದಲ್ಲೇ ಔಷಧಿಯ ಪಿತಾಮಹʼ ಹಿಪೊಕ್ರೇಟ್ಸ್‌ ಈ ಪದ್ಧತಿಯನ್ನು ಕಂಡುಹಿಡಿದಿದ್ದರು, ತನ್ನ ಎದೆ ನೋವಿಗೆ ಅವರು ಹೋಮಿಯೋಪತಿ ಪದ್ಧತಿಯನ್ನು ಅನುಸರಿಸಿದ್ದರು ಎಂಬ ಅಂಶಗಳ ಉಲ್ಲೇಖವಿದೆ.

ಹಿಪೊಕ್ರೇಟ್ಸ್‌ ರೋಗಲಕ್ಷಣಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು, ಮಾತ್ರವಲ್ಲ, ಅದರಿಂದ ದೇಹಕ್ಕೆ ಯಾವ ರೀತಿ ತೊಂದರೆಗಳು ಆಗಬಹುದು ಎಂಬುದನ್ನು ಕಂಡುಕೊಂಡಿದ್ದರು. ಅವರು ಹೋಮಿಯೋಪತಿಯನ್ನು ಆವಿಷ್ಕಾರ ಮಾಡಿದ್ದರೆ, ವಿನಹಃ ಔಷಧಿಗಳನ್ನು ಕಂಡುಹಿಡಿದಿರಲಿಲ್ಲ. ʼರೋಗಿಯ ರೋಗಲಕ್ಷಣಗಳನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ರೋಗಿಗಳು ರೋಗಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ, ಅವರಲ್ಲಿ ರೋಗ ತಡೆಯುವ ಸಾಮರ್ಥ್ಯ ಹೇಗಿದೆ ಎಂಬುದನ್ನು ಆಧರಿಸಿ ರೋಗ ನಿರ್ಣಯ ಮಾಡಲಾಗುತ್ತದೆ ಮತ್ತು ಅದರ ಮೇಲೆ ಚಿಕಿತ್ಸೆ ನೀಡಲು ಸಾಧ್ಯʼ ಎಂಬುದನ್ನು ಅವರು ಪ್ರತಿಪಾದಿಸಿದ್ದರು. ಅವರ ಅಂದಿನ ಈ ತಿಳುವಳಿಕೆಯೇ ಹೋಮಿಯೋಪತಿಗೆ ಆಧಾರವಾಗಿದೆ. ಹಿಪೊಕ್ರೇಟ್ಸ್‌ ಕಾಲಾನಂತರ, 18 ನೇ ಶತಮಾನದ ಉತ್ತರಾರ್ಧದಲ್ಲಿ ಹ್ಯಾನೆಮನ್ ಈ ಪದ್ಧತಿಯನ್ನು ಮರುಶೋಧಿಸುವವರೆಗೂ ಹೋಮಿಯೋಪತಿ ವೈದ್ಯ ಪದ್ಧತಿ ಮೂಲೆಗುಂಪಾಗಿತ್ತು. ಅಲ್ಲದೆ 18ನೇ ಶತಮಾನದಲ್ಲಿ ರೋಗಗಳು ಅತಿರೇಕವಾಗಿದ್ದು ಮತ್ತು ವೈದ್ಯಕೀಯ ಚಿಕಿತ್ಸೆಗಳು ಹೆಚ್ಚು ಹಿಂಸಾತ್ಮಕ ಹಾಗೂ ಆಕ್ರಮಣಕಾರಿಯಾಗಿದ್ದವು.

ಆ ಸಮಯದಲ್ಲಿ ಹ್ಯಾನೆಮನ್‌ ಕ್ಲಿನಿಕಲ್‌ ಮೆಡಿಸಿನ್‌ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂಬುದನ್ನು ಕಂಡುಕೊಂಡರು. ಔಷಧಿಶಾಸ್ತ್ರ ಹಾಗೂ ರಸಾಯನಶಾಸ್ತ್ರದಲ್ಲಿ ಸಾಕಷ್ಟು ಸಂಶೋಧನೆಗಳನ್ನು ಕೈಗೊಂಡರು. ಕಳಪೆ ನೈರ್ಮಲ್ಯದ ವಿರುದ್ಧ ಹೋರಾಡಿದರು, ಅಲ್ಲದೆ ಇದೇ ರೋಗದ ಹರಡುವಿಕೆಯ ಪ್ರಮಾಣ ಹೆಚ್ಚಲು ಪ್ರಮುಖ ಕಾರಣ ಎಂಬುದನ್ನು ತಿಳಿಸಲು ಪ್ರಯತ್ನಿಸಿದರು. ಅಸಂಬದ್ಧ ಹಾಗೂ ಹಿಂಸಾತ್ಮಕ ವೈದ್ಯಕೀಯ ಅಭ್ಯಾಸಗಳು ಹಾಗೂ ಅದರ ಭಯಾನಕ ಅಡ್ಡ ಪರಿಣಾಮಗಳನ್ನು ಉಂಟು ಮಾಡುವ ತೀವ್ರ ಪರಿಣಾಮವುಳ್ಳ ಔಷಧಿಗಳ ಬಳಕೆಯನ್ನು ವಿರೋಧಿಸಿದರು. ಅದರೊಂದಿಗೆ ಹೋಮಿಯೋಪತಿ ಔಷಧಿಗಳ ಪ್ರಾಮುಖ್ಯತೆಯನ್ನು ಜಗತ್ತಿಗೆ ಸಾರಿದ್ದರು. ಹೀಗೆ ಹೋಮಿಯೋಪತಿ ಜನಕ ಎನ್ನಿಸಿಕೊಂಡರು.

Advertisement

ಮಹತ್ವ: ಆತಂಕ, ಖಿನ್ನತೆ, ಎಡಿಎಚ್‌ಡಿ ಮತ್ತು ಒಸಿಡಿ ಸೇರಿದಂತೆ ವ್ಯಾಪಕ ಶ್ರೇಣಿಯ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಹೋಮಿಯೋಪತಿ ಪರಿಣಾಮಕಾರಿಯಾಗಿದೆ. ಹೋಮಿಯೋಪತಿ ಪರಿಹಾರಗಳು ಸುರಕ್ಷಿತ, ವಿಷಕಾರಿಯಲ್ಲದ ಮತ್ತು ಅಡ್ಡಪರಿಣಾಮಗಳಿಂದ ಮುಕ್ತವಾಗಿವೆ. ವಿಶ್ವ ಹೋಮಿಯೋಪತಿ ದಿನದ ಪ್ರಾಮುಖ್ಯತೆಯು ಹೋಮಿಯೋಪತಿಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಈ ಪರ್ಯಾಯ ಔಷಧ ಪದ್ಧತಿಯ ಸುತ್ತಲಿನ ತಪ್ಪು ತಿಳುವಳಿಕೆಗಳನ್ನು ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಉದ್ದೇಶವನ್ನು ಹೊಂದಿದೆ. ಈ ವೈದ್ಯ ಪದ್ಧತಿಯ ಪರಿಣಾಮಕಾರಿ ಅಂಶಗಳು ಸಾಬೀತಾದ ನಂತರವೂ ಇದನ್ನು ಅವೈಜ್ಞಾನಿಕ ಮತ್ತು ನಿಷ್ಪರಿಣಾಮಕಾರಿ ಎಂದು ಟೀಕಿಸಲಾಗಿತ್ತು.

ವಿಶ್ವ ಹೋಮಿಯೋಪತಿ ದಿನವು ಹೋಮಿಯೋಪತಿಯ ವೈಜ್ಞಾನಿಕ ತಳಹದಿ ಹಾಗೂ ಅದರ ಪರಿಣಾಮವನ್ನು ಬೆಂಬಲಿಸಲು ನಡೆಸಿದ ಸಂಶೋಧನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅವಕಾಶವನ್ನು ಒದಗಿಸುತ್ತದೆ. ಹೋಮಿಯೋಪತಿಯನ್ನು ಪರಿಸರ ಸ್ನೇಹಿ ಹಾಗೂ ಸುಸ್ಥಿರ ವಿಧಾನದ ಔಷಧಿ ಎಂದು ಹೇಳಲಾಗುತ್ತದೆ. ಏಕೆಂದರೆ, ಈ ವೈದ್ಯ ಪದ್ಧತಿಯಲ್ಲಿ ಪರಿಸರಕ್ಕೆ ಹಾನಿಯಾಗದ ನೈಸರ್ಗಿಕ ವಸ್ತುಗಳನ್ನು ಬಳಸಲಾಗುತ್ತದೆ. ಪ್ರಸ್ತುತ ಜಾಗತಿಕ ಹವಾಮಾನ ಬಿಕ್ಕಟ್ಟಿನಲ್ಲಿ ಹೋಮಿಯೋಪತಿಯ ಈ ಅಂಶವು ಬಹಳ ಮುಖ್ಯ ಎನ್ನಿಸುತ್ತದೆ. ಯಾಕೆಂದರೆ, ಸುಸ್ಥಿರತೆ ಮತ್ತು ಪರಿಸರ ಸಂರಕ್ಷಣೆ ಇಂದಿನ ತುರ್ತು ಆದ್ಯತೆಗಳಾಗಿವೆ.

ವಿಶ್ವ ಹೋಮಿಯೋಪತಿ ದಿನ 2024 ವಿಶ್ವ ಹೋಮಿಯೋಪತಿ ದಿನ 2024ರ ಪರಿಕಲ್ಪನೆ ʼಹೋಮಿಯೋ ಪರಿವಾರ ಸರ್ವಜನ ಸ್ವಾಸ್ಥ್ಯʼ ಎಂಬುದಾಗಿದೆ. ಈ ಪರಿಕಲ್ಪನೆಯು ಸಂಪೂರ್ಣ ಕುಟುಂಬ ಮತ್ತು ಸಮುದಾಯದ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವಲ್ಲಿ ಹೋಮಿಯೋಪತಿಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ. ಇದು ಮಾನವನ ಆರೋಗ್ಯ, ಪ್ರಾಣಿಗಳ ಆರೋಗ್ಯ ಮತ್ತು ಪರಿಸರದ ಆರೋಗ್ಯದ ಪರಸ್ಪರ ಸಂಬಂಧವನ್ನು ಗುರುತಿಸುತ್ತದೆ.

ಸಂಕಲನೆ: ಡಾ. ಪ್ರ. ಅ. ಕುಲಕರ್ಣಿ ಹೋಮಿಯೋಪತಿ ತಜ್ಞ ಪ್ರಕೃತಿ ಚಿಕಿತ್ಸಕ ಜೀವನಶೈಲಿ ಸಲಹೆಗಾರ

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ
July 26, 2025
10:25 PM
by: The Rural Mirror ಸುದ್ದಿಜಾಲ
ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ
July 26, 2025
10:13 PM
by: The Rural Mirror ಸುದ್ದಿಜಾಲ
ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ
July 26, 2025
10:05 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ
July 26, 2025
9:12 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group