ಇಂದು ವಿಶ್ವ ಪಾರ್ಶ್ವವಾಯು ದಿನ ( ಅಕ್ಟೋಬರ್ 29)

October 29, 2020
2:14 PM

ಬದುಕಿನುದ್ದಕ್ಕೂ ನಾವು ಒಬ್ಬರಿಗೊಬ್ಬರು ಆಸರೆಯಾಗಿರುವುದು ಅನಿವಾರ್ಯ. ಯಾರ ನೆರವೂ ನನಗೆ ಅಗತ್ಯವಿಲ್ಲವೆಂಬವರಿಗೂ ಇದರ ಅಗತ್ಯ ಖಂಡಿತಾ ಇದೆ. ಕೈ, ಕಾಲು ಗಟ್ಟಿಮುಟ್ಟಾಗಿರುವವರೆಗೆ ನಾನು ಯಾರಿಗೂ ಹೊರೆಯಲಾಗಲಾರೆ. ನನ್ನ ಕೆಲಸ ನಾನೇ ಮಾಡಿಕೊಳ್ಳಬಲ್ಲೆ‌ ಎಂಬ ವಿಶ್ವಾಸ ಜೀವನವನ್ನು ಹಗುರವಾಗಿಸುತ್ತದೆ. ಬದುಕಿನ ಓಟ ಒಂದೇ ರೀತಿ ಇರುವುದಿಲ್ಲ. ಒಂದು ವಿಷ ಗಳಿಗೆಯಲ್ಲಿ ಆರೋಗ್ಯ ಕೈ ಕೊಡುತ್ತದೆ. ಇಂದು ಹೃದಯದ ಮಧುಮೇಹ, ಕ್ಯಾನ್ಸರ್ ನ ಬಳಿಕ ಹೆಚ್ಚಿನ ಸಂಖ್ಯೆಯ ಜನರು ಬಲಿಯಾಗುತ್ತಿರುವುದು ‘ಪಾರ್ಶ್ವ ವಾಯುವಿಗೆ’. ಇದರ ಗಂಭೀರತೆಯನ್ನು ಜನರು ಅರಿಯುವುದು ಅನಿವಾರ್ಯವಾಗಿದೆ.

Advertisement

“ನಾಲ್ವರಲ್ಲಿ ಒಬ್ಬರಿಗೆ ಪಾರ್ಶ್ವವಾಯು , ಅದರಲ್ಲಿ ನೀವು ಒಬ್ಬರಾಗ ಬೇಡಿ” ಎಂಬುದು ಈ ಬಾರಿಯ ಘೋಷ ವಾಕ್ಯ.‌
ಕೋವಿಡ್ ಸೋಂಕಿನಿಂದ ಮೆದುಳಿನ ಮೇಲೆ ತೀವ್ರವಾದ ಹಾನಿಯುಂಟಾಗುತ್ತದೆ. ಉಸಿರಾಟದ ಸಮಸ್ಯೆಯೊಂದಿಗೆ, ರೋಗನಿರೋಧಕ ಶಕ್ತಿಯೂ ಕುಂದುತ್ತದೆ. ರಕ್ತನಾಳಗಳಿಗೆ ಹಾನಿಯಾಗುವುದರಿಂದ ರಕ್ತ ಹೆಪ್ಪುಗಟ್ಟುತ್ತದೆ. ಇದರಿಂದ ಮೆದುಳಿನ ಕಾರ್ಯ ಕುಂಠಿತವಾಗುತ್ತದೆ. ಅಗತ್ಯ ಪ್ರಮಾಣದ ಆಮ್ಲಜನಕ ಲಭ್ಯವಾಗದೆ ಪಾರ್ಶ್ವವಾಯು ಸಮಸ್ಯೆ ಉಂಟಾಗಬಹುದೆಂದು ತಜ್ಞ ರು ಅಭಿಪ್ರಾಯ ಪಡುತ್ತಾರೆ. ಸಾಮಾನ್ಯವಾಗಿ ಒತ್ತಡದ ಜೀವನ ಶೈಲಿ , ಅವೈಜ್ಞಾನಿಕ ಆಹಾರ ಕ್ರಮಗಳು, ಕಡಿಮೆ ದೈಹಿಕ ಚಟುವಟಿಕೆಗಳು ಕಾರಣವಾಗಿವೆ.

ಆರೋಗ್ಯದಲ್ಲಿ ಸ್ವಲ್ಪ ಏರು ಪೇರಾದರೂ ತಕ್ಷಣವೇ ವೈದ್ಯಕೀಯ ಚಿಕಿತ್ಸೆಗೆ ಒಳ ಪಟ್ಟರೆ ಪಾತ್ರ ಪಾರ್ಶ್ವವಾಯುವಿನಿಂದ ಪಾರಾಗಾಬಹುದು. ಇಲ್ಲಿ ಸಮಯಕ್ಕೆ ಬಹಳ ಮಹತ್ವವಿದೆ. ನಿಮಿಷಗಳ ವಿಳಂಬವೂ ದುಬಾರಿ ಪರಿಣಾಮಕ್ಕೆ ಕಾರಣವಾಗ ಬಹುದು. ಪಾರ್ಶ್ವವಾಯುವಿನ ಕುರಿತು ಜನಜಾಗೃತಿಯ ಅಗತ್ಯವಿದೆ.

-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಮಾರುಕಟ್ಟೆ ಶುಲ್ಕ ಬದಲಾವಣೆ ಮಾಡಬಾರದೆಂಬ ಕ್ಯಾಂಪ್ಕೋ ಬೇಡಿಕೆ ಪರಿಗಣನೆ
July 12, 2025
7:32 AM
by: The Rural Mirror ಸುದ್ದಿಜಾಲ
ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಮಳೆಯಿಂದಾಗಿ 148 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿ
July 11, 2025
7:07 AM
by: The Rural Mirror ಸುದ್ದಿಜಾಲ
ಕೇರಳದಲ್ಲಿ ನಿಫಾ ಎಚ್ಚರಿಕೆ | ತಡೆಗಟ್ಟುವ ಕ್ರಮಗಳ ಬಗ್ಗೆ ನಿಗಾ
July 10, 2025
8:51 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group