ಬದುಕಿನುದ್ದಕ್ಕೂ ನಾವು ಒಬ್ಬರಿಗೊಬ್ಬರು ಆಸರೆಯಾಗಿರುವುದು ಅನಿವಾರ್ಯ. ಯಾರ ನೆರವೂ ನನಗೆ ಅಗತ್ಯವಿಲ್ಲವೆಂಬವರಿಗೂ ಇದರ ಅಗತ್ಯ ಖಂಡಿತಾ ಇದೆ. ಕೈ, ಕಾಲು ಗಟ್ಟಿಮುಟ್ಟಾಗಿರುವವರೆಗೆ ನಾನು ಯಾರಿಗೂ ಹೊರೆಯಲಾಗಲಾರೆ. ನನ್ನ ಕೆಲಸ ನಾನೇ ಮಾಡಿಕೊಳ್ಳಬಲ್ಲೆ ಎಂಬ ವಿಶ್ವಾಸ ಜೀವನವನ್ನು ಹಗುರವಾಗಿಸುತ್ತದೆ. ಬದುಕಿನ ಓಟ ಒಂದೇ ರೀತಿ ಇರುವುದಿಲ್ಲ. ಒಂದು ವಿಷ ಗಳಿಗೆಯಲ್ಲಿ ಆರೋಗ್ಯ ಕೈ ಕೊಡುತ್ತದೆ. ಇಂದು ಹೃದಯದ ಮಧುಮೇಹ, ಕ್ಯಾನ್ಸರ್ ನ ಬಳಿಕ ಹೆಚ್ಚಿನ ಸಂಖ್ಯೆಯ ಜನರು ಬಲಿಯಾಗುತ್ತಿರುವುದು ‘ಪಾರ್ಶ್ವ ವಾಯುವಿಗೆ’. ಇದರ ಗಂಭೀರತೆಯನ್ನು ಜನರು ಅರಿಯುವುದು ಅನಿವಾರ್ಯವಾಗಿದೆ.
“ನಾಲ್ವರಲ್ಲಿ ಒಬ್ಬರಿಗೆ ಪಾರ್ಶ್ವವಾಯು , ಅದರಲ್ಲಿ ನೀವು ಒಬ್ಬರಾಗ ಬೇಡಿ” ಎಂಬುದು ಈ ಬಾರಿಯ ಘೋಷ ವಾಕ್ಯ.
ಕೋವಿಡ್ ಸೋಂಕಿನಿಂದ ಮೆದುಳಿನ ಮೇಲೆ ತೀವ್ರವಾದ ಹಾನಿಯುಂಟಾಗುತ್ತದೆ. ಉಸಿರಾಟದ ಸಮಸ್ಯೆಯೊಂದಿಗೆ, ರೋಗನಿರೋಧಕ ಶಕ್ತಿಯೂ ಕುಂದುತ್ತದೆ. ರಕ್ತನಾಳಗಳಿಗೆ ಹಾನಿಯಾಗುವುದರಿಂದ ರಕ್ತ ಹೆಪ್ಪುಗಟ್ಟುತ್ತದೆ. ಇದರಿಂದ ಮೆದುಳಿನ ಕಾರ್ಯ ಕುಂಠಿತವಾಗುತ್ತದೆ. ಅಗತ್ಯ ಪ್ರಮಾಣದ ಆಮ್ಲಜನಕ ಲಭ್ಯವಾಗದೆ ಪಾರ್ಶ್ವವಾಯು ಸಮಸ್ಯೆ ಉಂಟಾಗಬಹುದೆಂದು ತಜ್ಞ ರು ಅಭಿಪ್ರಾಯ ಪಡುತ್ತಾರೆ. ಸಾಮಾನ್ಯವಾಗಿ ಒತ್ತಡದ ಜೀವನ ಶೈಲಿ , ಅವೈಜ್ಞಾನಿಕ ಆಹಾರ ಕ್ರಮಗಳು, ಕಡಿಮೆ ದೈಹಿಕ ಚಟುವಟಿಕೆಗಳು ಕಾರಣವಾಗಿವೆ.
ಆರೋಗ್ಯದಲ್ಲಿ ಸ್ವಲ್ಪ ಏರು ಪೇರಾದರೂ ತಕ್ಷಣವೇ ವೈದ್ಯಕೀಯ ಚಿಕಿತ್ಸೆಗೆ ಒಳ ಪಟ್ಟರೆ ಪಾತ್ರ ಪಾರ್ಶ್ವವಾಯುವಿನಿಂದ ಪಾರಾಗಾಬಹುದು. ಇಲ್ಲಿ ಸಮಯಕ್ಕೆ ಬಹಳ ಮಹತ್ವವಿದೆ. ನಿಮಿಷಗಳ ವಿಳಂಬವೂ ದುಬಾರಿ ಪರಿಣಾಮಕ್ಕೆ ಕಾರಣವಾಗ ಬಹುದು. ಪಾರ್ಶ್ವವಾಯುವಿನ ಕುರಿತು ಜನಜಾಗೃತಿಯ ಅಗತ್ಯವಿದೆ.
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯ ಕ್ರಮ…
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…