ಗುಬ್ಬಚ್ಚಿ ಹಕ್ಕಿಯ ಇಂದು ಹಕ್ಕಿನ ದಿನ ಇಂದು. ಗುಬ್ಬಚ್ಚಿಯ ರಕ್ಷಿಸುವ ದಿನ ಇಂದು. ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವೆಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
“ಸಣ್ಣ ಹಕ್ಕಿಯೂ ಕೂಡ ದೊಡ್ಡ ಬದಲಾವಣೆಗೆ ಕಾರಣವಾಗ ಬಹುದು” ಇಂದು ಅಲ್ಲಲ್ಲಿ ಸಣ್ಣ ಪುಟ್ಟ ಮಣ್ಣಿನ ಪಾತ್ರೆಗಳಲ್ಲಿ ನೀರು ಇಡುವುದನ್ನು ಕಾಣಬಹುದು. ಮನೆಗಳ ಪಕ್ಕದಲ್ಲಿ ಹಕ್ಕಿಯ ಗೂಡುಗಳನ್ನು ತೂಗುತ್ತಿರುವುದು ಸಂತಸದ ಸಂಗತಿಗಳು.
ಗುಬ್ಬಚ್ಚಿ ಸಣ್ಣ ಹಕ್ಕಿ . ನಮ್ಮ ಮನಸಿಗೆ ಯಾಕೋ ಇದು ತುಂಬಾ ಹತ್ತಿರದ ಹಕ್ಕಿ ಎನಿಸುತ್ತದೆ. ಯಾವ ಶಾಲೆಯಲ್ಲೂ ಕಲಿತಿಲ್ಲ, ಯಾವ ಟೀಚರ್ ತರಬೇತಿಯನ್ನೂ ಕೊಟ್ಟಿಲ್ಲ, ಆದರೆ ಯಾವ ಇಂಜಿನಿಯರ್ ಗೂ ಕಮ್ಮಿ ಇಲ್ಲದಂತೆ ಸೊಗಸಾಗಿ ಗೂಡು ಕಟ್ಟುವ ಚಾಣಕ್ಯ ಹಕ್ಕಿ ಈ ಗುಬ್ಬಚ್ಚಿ. ಆದರೀಗ ಯಾಕೋ ಅಪರೂಪ. ಬೇಕೆಂದ ಕೂಡಲೇ ನೋಡಲು ಸಿಗದು. ಗುಬ್ಬಚ್ಚಿಗಳ ಆಹಾರ ಮೂಲವಾದ ಗದ್ದೆಗಳು ಕಮ್ಮಿಯಾದದ್ದು, ಹಕ್ಕಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾದುದರ ಕಾರಣವಿರಬಹುದೇ?.
ಗುಬ್ಬಚ್ಚಿಯು ಜೋಡಿಯಾಗಿ ಇರುತ್ತವೆ. ಸರಾಸರಿ ಜೀವಿತಾವಧಿ 3 ವರ್ಷ. ಇದರ ವೇಗದ ಮಿತಿ ಗಂಟೆಗೆ46 ಕಿಮೀ. ಹಕ್ಕಿಯ ಉದ್ದ 14 ರಿಂದ 18 ಸೆ.ಮೀ. ಎತ್ತರ 16 ಸೆ.ಮೀ. ಸಾಮಾನ್ಯವಾಗಿ ತೂಕ 24 ರಿಂದ 40 ಗ್ರಾಂ. ಅವುಗಳ ಬಣ್ಣ ಕಂದು.ಬೆನ್ನು ಮತ್ತು ಪಕ್ಕಗಳಲ್ಲಿ ಬಿಳಿ ಮತ್ತು ಕಪ್ಪು ಬಣ್ಣಗಳು ಮಿಶ್ರಿತವಾಗಿರುತ್ತದೆ. ಮುಂಭಾಗ ಬೆಳ್ಳಗಿರುತ್ತದೆ. ಗಂಡು ಗುಬ್ಬಿಗೆ ಗಂಟಲ ಮೇಲೆ ಕಪ್ಪು ಕಲೆ ಇರುತ್ತದೆ. ಇವುಗಳ ಮೊಟ್ಟೆಗಳು ನಸು ಹಸಿರು ಮಿಶ್ರಿತ ಬಿಳಿ ಬಣ್ಣದ್ದಾಗಿರುತ್ತದೆ.
Bird watching with baby. Vedio by Nityananda Shetty. #birdphotography #birdwatching #bird #WorldSparrowDay pic.twitter.com/GEztPzjAlA
Advertisement— theruralmirror (@ruralmirror) March 20, 2022
ಗುಬ್ಬಿಗಳಿಗೆ ಧೂಳು ಸ್ನಾನವೆಂದರೆ ಬಹಳ ಪ್ರೀತಿ. ಗುಬ್ಬಿಗಳು ಅಗತ್ಯ ಬಿದ್ದರೆ ನೀರಿನ ಮೇಲೆ ಈಜ ಬಲ್ಲುದು. ಈ ಹಕ್ಕಿ ತನ್ನ ವಾಸ್ತವ್ಯ ಪ್ರದೇಶದಿಂದ ಹೆಚ್ಚೆಂದರೆ 2 ಕಿ.ಮೀ ಸಂಚರಿಸುತ್ತವೆ. ಗುಬ್ಬಚ್ಚಿ ವಲಸೆ ಹಕ್ಕಿಯಲ್ಲ. 2022 ನೇ ಇಸವಿಯಲ್ಲಿ ದೆಹಲಿಯ “ರಾಜ್ಯ ಪಕ್ಷಿ”ಯೆಂದು ಗುಬ್ಬಚ್ಚಿಯನ್ನು ಘೋಷಿಸಲಾಗಿದೆ. ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವೆಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.ಮಹಮದ್ ದಿಲ್ವಾರ್ ಎಂಬ ನಾಸಿಕ್ ಮೂಲದ ವ್ಯಕ್ತಿ ನಮ್ಮ ಭಾರತದಲ್ಲಿ ಮೊದಲ ಬಾರಿಗೆ ಗುಬ್ಬಚ್ಚಿಗಳ ಅಳಿವಿನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆರಂಭಿಸಿದರು. ಆ ಸಂಬಂಧ ಮಾರ್ಚ್ 20 ರಂದು ‘ ಗುಬ್ಬಚ್ಚಿ ದಿನ’ ವೆಂದು ಆಚರಿಸಲು ನಿರ್ಧರಿಸಲಾಯಿತು. ಮನದಲ್ಲಿ ಮಾತ್ರವಲ್ಲ ಮನೆಯ ಸುತ್ತಮುತ್ತಲೂ ಗುಬ್ಬಚ್ಚಿ ಗಳು ಚೀಂವ್ ಚೀಂವ್ ಕಲರವ ಕೇಳುತ್ತಿರಲಿ ಅಲ್ಲವೇ.!!!!