ಅಂದು ಆಕಸ್ಮಿಕವಾಗಿ ಗೆಳತಿ ಬಸ್ಸ್ ನಲ್ಲಿ ಸಿಕ್ಕಿದ್ದಳು. ಎಷ್ಟೋ ವರ್ಷಗಳ ನಂತರ ಸಿಕ್ಕಿದಾಗ ನನಗಂತು ಗೊತ್ತೇ ಆಗಲಿಲ್ಲ. ಅವಳ ಮುಖದಲ್ಲಿ ಕಣ್ಣು ಮಾತ್ರ ಕಾಣುತ್ತಿತ್ತು. ಅಷ್ಟು ವೀಕ್ ಆಗಿ ಬಿಟ್ಟಿದ್ದಳು. ಸದೃಢ ವಾಗಿದ್ದ ಗೆಳತಿ ಹೀಗೇಕಾದಳು ಎಂಬ ಚಿಂತೆ ಕಾಡ ತೊಡಗಿತು. ಬಸ್ಸ್ ಲ್ಲಿ ಸಿಕ್ಕಿದ ಕಾರಣ ಹೆಚ್ಚು ಮಾತಾಡಿಸದೆ ಧೈರ್ಯ ತುಂಬಿದೆ. ಅವಳನ್ನು ನೋಡುತ್ತಲೇ ಅರಿವಿಲ್ಲದೆ ಕಣ್ಣು ಹನಿಗೂಡಿತು.
ಒಂದೆರಡು ದಿನ ಕಳೆಯುತ್ತಲೇ ನಾನಾಕೆಗೆ ಫೋನಾಯಿಸಿದೆ. ಏನಾಯಿತೇ ನಿನಗೆ ಎಂದು ನೇರವಾಗಿ ಕೇಳಿಯೇ ಬಿಟ್ಟೆ. ನಿಟ್ಟುಸಿರು ಬಿಡುತ್ತಾ ಆಕೆ ಹೇಳಿದ ಶಬ್ದ ಕೇಳಿ ನಾನು ಹೌಹಾರಿದೆ. ಹೌದಾ ಹೇಗಾಯ್ತು ಮಾರಾಯಿತಿ ಎನ್ನುತ್ತಲೇ ಅವಳು ಎಲ್ಲಾ ವಿಷಯಗಳನ್ನು ಹೇಳ ತೊಡಗಿದಳು. ಮೊದಲಿಗೆ ಶೀತ ಸುರುವಾಯಿತು. ಅದಕ್ಕೆ ಮದ್ದು ತಗೊಂಡಾಯಿತು. ಸ್ವಲ್ಪ ಕಮ್ಮಿ ಆಯಿತು ಅನ್ನುತ್ತಲೇ ಮತ್ತೆ ಜೋರಾಗ ತೊಡಗಿತು. ಯಾವ ಮದ್ದಿಗೂ ಜಗ್ಗುತ್ತಲೇ ಇರಲಿಲ್ಲ. ಹಲವು ವೈದ್ಯ ರನ್ನು ಭೇಟಿಯಾದರೂ ಉತ್ತರ ಶೂನ್ಯ. ಕೊನೆಗೆ ಹಲವು ಪರೀಕ್ಷೆಗಳ ನಂತರ ಕ್ಷಯ ರೋಗದ ಪತ್ತೆಯಾಯಿತು. ಅದು ಹ್ಯಾಗೆ, ಎಲ್ಲಿಂದ ನನಗೆ ಬಂತೆಂದೇ ತಿಳಿಯದು. ಆದರೆ ಈಗ ಚಿಕಿತ್ಸೆಯ ನಂತರ ನಿಧಾನವಾಗಿ ಚೇತರಿಸಿ ಕೊಳ್ಳುತ್ತಿದ್ದೇನೆ. ದೇವರು ದೊಡ್ಡವನು , ಸಕಾಲದಲ್ಲಿ ಗೊತ್ತಾಯಿತು.
ಸಕಾಲದಲ್ಲಿ ಔಷಧೀಯ ಚಿಕಿತ್ಸೆ ದೊರೆತಾಗ. ಕ್ಷಯದಿಂದ ಸಂಪೂರ್ಣ ಗುಣಮುಖರಾಗ ಬಹುದು. ಪೌಷ್ಟಿಕ ಆಹಾರ, ಅಗತ್ಯ ಚಿಕಿತ್ಸೆ ಗಳಿಂದ ಪೂರ್ಣ ಗುಣಮುಖರಾಗ ಬಹುದು.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ