World Water Day | ನೀರು ಉಳಿಸುವ ಬನ್ನಿ… | ಶಾಂತಿ ಹಾಗೂ ಸಮೃದ್ಧಿಗಾಗಿ ನೀರು |

March 22, 2024
11:23 AM
ಇಂದು ವಿಶ್ವ ಜಲ ದಿನಾಚರಣೆ. ನೀರಿನ ಸಂರಕ್ಷಣೆಯ ಬಗ್ಗೆ ತುರ್ತಾಗಿ ಗಮನಹರಿಸಬೇಕಿದೆ.

ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈಗೀಗ ಜನ ಸಂರಕ್ಷಣೆಯ ಅಗತ್ಯದ ಬಗ್ಗೆ ಮನವರಿಕೆಯಾಗಲು ಆರಂಭವಾಗಿದೆ. ಈ ವರ್ಷ ನೀರಿನ ಬಿಕ್ಕಟ್ಟು ಆರಂಭವಾಗಿದೆ. ಕೈಕೊಟ್ಟ ಮುಂಗಾರು, ಬತ್ತುತ್ತಿರುವ ಅಂರ್ತಜಲ, ವಿಪರೀತ ಬಿಸಿಲು ಇರುವ ನೀರನ್ನು ಬತ್ತುವಂತೆ ಮಾಡುತ್ತಿದೆ. ಹೀಗಾಗಿ ತಡವಾಗಿಯಾದರೂ ಜಲ ಸಂರಕ್ಷಣೆಯ ಕಡೆಗೆ ಗಮನಹರಿಸಬೇಕಿದೆ. ನೀರು ಉಳಿಸುವ ಬಗ್ಗೆ ಅತಿಯಾಗಿ ಗಮನ ಕೊಡಬೇಕಿದೆ.

Advertisement

1992 ರಲ್ಲಿ ಜನೈರೊದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿಯ ಸಮ್ಮೇಳನದಲ್ಲಿ ಮಾರ್ಚ್ 22 ವಿಶ್ವ ಜಲ ದಿನ ಎಂದು ಘೋಷಿಸಲಾಯಿತು. ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು, ಪ್ರತಿ ವರ್ಷ ನೀರು ಮತ್ತು ನೈರ್ಮಲ್ಯದ ಕುರಿತು ಮಾಹಿತಿ ನೀಡಲಾಗುತ್ತದೆ. ಈ ವರ್ಷ  ‘ಸಮೃದ್ಧಿ ಮತ್ತು ಶಾಂತಿಗಾಗಿ ನೀರು’ ಎಂಬ ವಿಷಯದ ಮೇಲೆ ಜಲ ದಿನವನ್ನು ಆಚರಿಸಲಾಗುತ್ತದೆ.

ನೀರು ಶಾಂತಿಯನ್ನು ಸೃಷ್ಟಿಸಬಹುದು, ಘರ್ಷಣೆಯನ್ನು ಸೃಷ್ಟಿಸಬಹುದು. ನೀರು ಕಡಿಮೆಯಾದಾಗ ಅಥವಾ ಕಲುಷಿತಗೊಂಡಾಗ ಸಮಾಜಗಳಲ್ಲಿ ಉದ್ವಿಗ್ನತೆ ಉಂಟಾಗುತ್ತದೆ. ಆ ಸಮಯದಲ್ಲಿ ಪ್ರತಿಯೊಬ್ಬರ ಸಹಕಾರದಿಂದ ಮಾತ್ರ  ನೀರಿನ ಅಗತ್ಯವನ್ನು ಸರಿಗೊಳಿಸಬಹುದು. ನೀರು ಸಮೃದ್ಧಿಗಾಗಿ ಎನ್ನುವುದರಲ್ಲಿ ಎರಡು ಮಾತಿಲ್ಲ. ನೀರು ಇದ್ದರೆ ಮಾತ್ರವೇ ಕೃಷಿಯಿಂದ ತೊಡಗಿ ಎಲ್ಲಾ ಕಡೆಯೂ ಅಭಿವೃಧ್ಧಿ ಸಾಧ್ಯ.

ಜಲ ದಿನದ ಸಂದರ್ಭದ ವಿಶೇಷ ಗಮನಹರಿಸುವ ಭಾಗ ಇದು : 

Advertisement
  • ಸಮೃದ್ಧಿ ಮತ್ತು ಶಾಂತಿ ನೀರಿನ ಮೇಲೆ ಅವಲಂಬಿಸಿದೆ.
  • ಸಾಮೂಹಿಕ ವಲಸೆ ಮತ್ತು ರಾಜಕೀಯ ಅಶಾಂತಿಯ ರಾಷ್ಟ್ರಗಳ ಪ್ರಮುಖ ಕಾರಣಗಳಲ್ಲಿ ಹವಾಮಾನ ಬದಲಾವಣೆ ಕೂಡಾ ಇರುತ್ತದೆ.
  • ನೀರು ನಮ್ಮನ್ನು ಎಲ್ಲಾ ಬಿಕ್ಕಟ್ಟಿನಿಂದ ಹೊರತರಬಹುದಾದ ಪ್ರಮುಖ ಭಾಗ
  •  ನೀರಿನ ನ್ಯಾಯಯುತ ಮತ್ತು ಸುಸ್ಥಿರ ಬಳಕೆಯ ಕಡೆಗೆ ಗಮನ ಅಗತ್ಯ ಇದೆ.
  • ಶಾಂತಿಯುತವಾಗಿ ನೀರಿನ ಬಿಕ್ಕಟ್ಟನ್ನು ನಿವಾರಿಸಬಹುದು. ಇದಕ್ಕಾಗಿ ಎಲ್ಲಾ ವಿಭಾಗದಲ್ಲೂ ಕೆಲಸ ಆಗಬೇಕಿದೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಗಣಿಯಿಂದ 5500 ಕಿಮೀ ಮಾಲಿನ್ಯ ರಹಿತ ಪ್ರಯಾಣ..!
August 14, 2025
7:39 AM
by: ವಿಶೇಷ ಪ್ರತಿನಿಧಿ
ಬಾಗಿಲು ಇಲ್ಲದ ಮನೆಯಂತಾದ ಕನ್ನಡ ಸ್ಥಿತಿ : ರಾಘವೇಶ್ವರ ಶ್ರೀ
August 14, 2025
7:04 AM
by: The Rural Mirror ಸುದ್ದಿಜಾಲ
ಅಕ್ರಮ ಅಡಿಕೆ ಸಾಗಾಟ ಪತ್ತೆ | 466 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌
August 13, 2025
11:03 PM
by: ದ ರೂರಲ್ ಮಿರರ್.ಕಾಂ
ಆ.15 ರಿಂದ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಸರ್ಕಾರ ಆದೇಶ
August 13, 2025
9:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group