“ವಿಶ್ವ ಮಹಿಳಾ ದಿನ” ದ ಶುಭಾಶಯಗಳು
ಸಣ್ಣಪುಟ್ಟ ಸಂಗತಿಗಳು ದಿನನಿತ್ಯದ ಬದುಕಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಅದೊಂದು ನಗುವಿರಬಹುದು, ಬೆಳಗಿನ ನಮಸ್ಕಾರವಿರಬಹುದು, ಶುಭಾಶಯಗಳಿರ ಬಹುದು . ನಿನ್ನೆಯಿಂದಲೇ ಒಬ್ಬೊಬ್ಬ ರದೇ ಮೆಸೇಜ್ ಗಳನ್ನು ಓದುವಾಗಲೇ ನಿರ್ಧರಿಸಿದ್ದೆ ಇವತ್ತು ಖುಷಿಯಿಂದಲೇ ಇಡೀ ದಿನವನ್ನು ಸವಿಯಬೇಕೆಂದು. ಅದರಲ್ಲೇನಿದೆ ನಿನ್ನೆಯಂತೆಯೇ ಅಲ್ಲವೇ ಇಂದು ಎಂದು ಪ್ರಶ್ನೆ ತಯಾರಿದೆಯಲ್ಲವೇ? ಹೌದು ನಿನ್ನೆಯಂತೆಯೇ ಇಂದು. ತಾರೀಖು, ವಾರ ಮಾತ್ರ ವ್ಯತ್ಯಾಸ. ಅದೇ ಮುಂಜಾವಿನ ಸೂರ್ಯೋದಯ,ಅದೇ ಹಕ್ಕಿಗಳ ಕಲರವ. ಅದೇ ನಿತ್ಯಕರ್ಮಗಳು, ಅದೇ ಜನ, ಸೇಮ್ ಟು ಸೇಮ್. ಆದರೂ ಕೂಡ ನನಗಿಂದು ವಿಶೇಷ ದಿನವೇ. !
ಮಾರ್ಚ್ 8 ವಿಶ್ವ ಮಹಿಳಾ ದಿನ. ಯಾಕೆ ಈ ಆಚರಣೆಗಿಷ್ಟು ಪ್ರಚಾರ? ಮನಸು ಮೃದು, ಮಾತು ಕಠೋರ. ತನ್ನೆಲ್ಲ ನಿರ್ಧಾರಗಳನ್ನು ಭವಿಷ್ಯದ ಕುರಿತು ಲಕ್ಷ್ಯವಿಟ್ಟು ತೆಗೆದುಕೊಳ್ಳುವುದು ಮಹಿಳೆಯ ವಿಶೇಷತೆ.
ಅಂದು ಅದೊಂದು ಪ್ರಮುಖ ಹೋರಾಟ ಒಬ್ಬ ಸಾಮಾನ್ಯ ಮಹಿಳೆಯನ್ನು ಅಸಾಮಾನ್ಯವಾಗಿಸಿತು. ನ್ಯೂಯಾರ್ಕ್ ನ ಕಾರ್ಮಿಕ ಮಹಿಳೆ ಕ್ಲಾರಾ ಜೆಟ್ ಕಿನ್ ಕೆಲಸಕ್ಕಾಗಿ , ಸಮಾನ ವೇತನಕ್ಕಾಗಿ, ಹೆರಿಗೆ ಸೌಲಭ್ಯ ಕ್ಕಾಗಿ ತಿಂಗಳಾನುಗಟ್ಟಲೆ ಹೋರಾಟ ಮಾಡಿ ಗೆಲುವು ಸಾಧಿಸಿದ ದಿನ. ಆದ್ದರಿಂದ ಈ ದಿನವನ್ನು ಸಾಧನೆಯ ದಿನ, ಮಹಿಳಾ ಯಶಸ್ಸಿನ ದಿನವೆಂದು ಸಂಭ್ರಮಿಸುತ್ತೇವೆ.
1975 ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ‘ ವಿಶ್ವ ಮಹಿಳಾ ದಿನ’ವೆಂದು ಘೋಷಿಸಿತು. ದೊಡ್ಡ ದೊಡ್ಡ ಪ್ರಶಸ್ತಿಗಳು ಸಿಕ್ಕಿದರಷ್ಟೇ ಯಶಸ್ವಿ ಮಹಿಳೆ ಎಂಬ ಮಾತು ಯಾಕೋ ಬೇಸರವುಂಟು ಮಾಡುತ್ತದೆ. ಬದುಕಿನ ಪ್ರತಿಯೊಂದು ನಡೆಯಲ್ಲೂ ಎದುರಾಗುವ ಸಮಸ್ಯೆಗಳು ನಿರಂತರವಾಗಿ ಪ್ರಶ್ನೆ ಪತ್ರಿಕೆಗಳಾಗಿ ಕಾಡುತ್ತವೆ. ತಾಳ್ಮೆ ಯಿಂದ ಉಪಾಯವಾಗಿ ಉತ್ತರಿಸುತ್ತಾ ಮುನ್ನಡೆದಾಗ ಗೋಜಲುಗಳು ನಿವಾರಣೆಯಾಗುತ್ತಾ ಪರಿಹಾರ ತಾನಾಗಿಯೇ ದೊರೆಯಿತ್ತದೆ. ದೈಹಿಕ ಆರೋಗ್ಯ ದೊಂದಿಗೆ ಮನಸ್ಸಿನ ಆರೋಗ್ಯವನ್ನು ಸಮರ್ಥವಾಗಿ ಕಾಪಾಡಿಕೊಂಡಾಗ ಮಹಿಳೆ ಯಶಸ್ವಿಯಾಗಿ , ಗಟ್ಟಿಗಿತ್ತಿಯಾಗಿ ಹೊರಹೊಮ್ಮುತ್ತಾಳೆ.
ಎಲ್ಲಾ ಹೆಣ್ಣು ಮಕ್ಕಳಿಗೂ ‘ ವಿಶ್ವ ಮಹಿಳಾ ದಿನ’ದ ಶುಭಾಶಯಗಳು.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಇಂದು ರಾಷ್ಟ್ರೀಯ ರೈತ ದಿನ. ಈ ದೇಶದಲ್ಲಿ ಕೃಷಿಯ ಪ್ರಾಧಾನ್ಯತೆ ಬಹಳಷ್ಟಿದೆ. ಕೃಷಿಗಾಗಿ…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಡಿ.26 ರಂದು ತಮಿಳುನಾಡು ಕರಾವಳಿಯ ಬಳಿ ಶಿಥಿಲಗೊಳ್ಳುತ್ತಿದ್ದಂತೆಯೇ ಹಿಂಗಾರು…
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಶಾಲಾ ವಠಾರದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ…
23.12.24ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
22.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಒಡಿಶಾ ರಾಜ್ಯ ಸರ್ಕಾರವು ಕೃಷಿಯಲ್ಲಿ ಹೊಸವಿಧಾನಗಳ, ಪರ್ಯಾಯ ಕೃಷಿಯ ಪಾತ್ರವನ್ನು ಪರೋಕ್ಷವಾಗಿ ಕೃಷಿಕರಿಗೆ…