ಹೊಸ ದಾಖಲೆ ನಿರ್ಮಿಸಿದ ವಿಶ್ವದ ಅತಿ ಉದ್ದದ ಕಾರು…..!

March 12, 2022
12:18 PM

ಈಗಾಗಲೇ ತನ್ನ ವಿಶೇಷತೆಯಿಂದ ಗಿನ್ನೆಸ್‌ ರೆಕಾರ್ಡ್ ಮಾಡಿದ್ದ ಕಾರೀಗ ತನ್ನದೇ ದಾಖಲೆಯನ್ನು ಮುರಿದು ಹೊಸ ರೆಕಾರ್ಡ್ ಮಾಡಿದೆ. ಜಗತ್ತಿನ ಅತ್ಯಂತ ಉದ್ದನೆಯ ಕಾರಿನ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

1986ರಲ್ಲಿ ಕ್ಯಾಲಿಫೋರ್ನಿಯಾದ ಬರ್ಬ್ಯಾಂಕ್‌ನಲ್ಲಿ ಪ್ರಸಿದ್ಧ ಕಾರ್ ಕಸ್ಟಮೈಸರ್ ಜೈ ಓರ್ಬರ್ಗ್ ಅವರು ವಿಶ್ವದ ಅತಿ ಉದ್ದನೆಯ ಕಾರು ನಿರ್ಮಿಸಿ ಸಾಧನೆಗೈದಿದ್ದರು. ಆಗ ಈ ಕಾರು18.28 ಮೀಟರ್ (60 ಅಡಿ) ಉದ್ದವಿತ್ತು. ಇದೀಗ ಮತ್ತೆ ಆ ಐಷಾರಾಮಿ ಕಾರನ್ನು ನವೀಕರಿಸಿ ಪುನಃ ಪರಿಚಯಿಸಲಾಗಿದೆ.

‘ದಿ ಅಮೆರಿಕನ್ ಡ್ರೀಮ್​ ಕಾರು’ ಈಗ 30.54 ಮೀಟರ್ (100 ಅಡಿ ಮತ್ತು 1.50 ಇಂಚು) ಉದ್ದವಿದೆ. 26 ಚಕ್ರಗಳನ್ನು ಒಳಗೊಂಡ ಈ ಕಾರು, ದೊಡ್ಡ ವಾಟರ್​ ಬೆಡ್, ಡೈವಿಂಗ್ ಬೋರ್ಡ್‌ನೊಂದಿಗೆ ಈಜುಕೊಳ, ಬಾತ್‌ಟಬ್, ಮಿನಿ-ಗಾಲ್ಫ್ ಕೋರ್ಸ್, ಹೆಲಿಪ್ಯಾಡ್ ಇದ್ದು 75 ಕ್ಕೂ ಹೆಚ್ಚು ಜನರು ಕೂರಬಹುದಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕೃಷಿ ವೆಚ್ಚ ಕಡಿಮೆ ಮಾಡಲು ಇಲ್ಲಿ ರೈತರ ಹೊಸ ಹೆಜ್ಜೆ…
September 29, 2026
7:28 AM
by: ದ ರೂರಲ್ ಮಿರರ್.ಕಾಂ
‘ರೋಸ್ಟೆಡ್ ಅಡಿಕೆ’ ಆಮದು ವರ್ಗೀಕರಣಕ್ಕೆ ಮತ್ತೊಂದು ತಿರುವು – ಹೈಕೋರ್ಟ್ ತೀರ್ಪು ಉಲ್ಲೇಖಿಸಿ ಅರ್ಜಿ ತಿರಸ್ಕರಿಸಿದ ಮುಂಬೈ ಪ್ರಾಧಿಕಾರ
September 28, 2026
10:20 PM
by: ದ ರೂರಲ್ ಮಿರರ್.ಕಾಂ
ಬರಕ್ಕೆ ರಾಗಿ ಕೂಡ ಸೋಲುತ್ತಿದೆ – ‘ಬರ ನಿರೋಧಕ’ ಎಂದರೆ ಮಳೆ ಇಲ್ಲದಿದ್ದರೂ ಬೆಳೆಯುತ್ತದೆ ಎಂದಲ್ಲ!
September 28, 2026
9:05 PM
by: ದ ರೂರಲ್ ಮಿರರ್.ಕಾಂ
₹2,000ಕ್ಕಿಂತ ಹೆಚ್ಚಿನ UPI ವಹಿವಾಟಿನ MDRಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ
September 28, 2026
2:31 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror