ದೇವಾನು ದೇವತೆಗಳ ಕಾಲದಿಂದಲೂ ಗೋವಿಗೆ ವಿಶೇಷ ಸ್ಥಾನವನ್ನು ಭಾರತದಲ್ಲಿ ನೀಡಲಾಗುತ್ತಿದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ದೊಡ್ಡ ಮಟ್ಟದಲ್ಲಿ ಹೈನುಗಾರಿಕೆ ಮಾಡಲಾಗುತ್ತದೆ. ಪ್ರಪಂಚದಾದ್ಯಂತ ವಿವಿಧ ತಳಿಯ ಹಸುಗಳಿವೆ. ಅವುಗಳು ಅದರದೇ ಆದ ವಿಶೇಷತೆಗಳನ್ನು ಹೊಂದಿವೆ. ಇಲ್ಲೊಂದು ಅತೀ ದುಬಾರಿ ಬೆಲೆಯ ಹಸುವೊಂದನ್ನು ಬ್ರೆಜಿಲ್ ನಲ್ಲಿ ಸಾಕಲಾಗುತ್ತಿದೆ. ಆದರೆ ಒಂದು ಹೆಮ್ಮೆಯ ವಿಷಯ ಏನಂದ್ರೆ ಅದು ನಮ್ಮ ಪಕ್ಕದ ರಾಜ್ಯವಾದ ಆಂದ್ರದ ತಳಿ. ಇದೀಗ ಈ ಹಸು ವಿಶ್ವದ ಅತ್ಯಂತ ದುಬಾರಿ ಹಸು #World’sMostExpensiveCow.
ಹಸುಗಳಿಗೆ ಲಕ್ಷಗಟ್ಟಲೆ ಕೊಟ್ಟು ಖರೀದಿಸುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಹಸುವಿಗೆ ಕೋಟಿಗಟ್ಟಲೆ ಕೊಟ್ಟು ಖರೀದಿಸಿದ್ದಾರೆ. ಅಂತ ವಿಶೇಷತೆ ಏನು ಈ ಹಸುವಿನಲ್ಲಿ..? ಈ ಹಸು ಇವಾಗ ವಿಶ್ವದ ಅತ್ಯಂತ ದುಬಾರಿ ಹಸು ಎನ್ನಿಸಿಕೊಂಡಿದೆ. ಇದು ಬ್ರೆಜಿಲ್ನಲ್ಲಿದೆ. ಪ್ರಸ್ತುತ ಈ ಹಸು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಹಸುವಿನ ಬೆಲೆ ಕೇಳಿದ್ರೆ ದಂಗಾಗುತ್ತೀರಾ. ಈ ಹಸುವಿನ ಬೆಲೆಗೆ ನೀವು ಕಾರು, ಬಂಗಲೆಗಳನ್ನೇ ಖರೀದಿಸಬಹುದು. ನೆಲ್ಲೂರು ತಳಿಯ ಈ ಹಸು ವಿಶ್ವದ ಅತಿ ದುಬಾರಿ ಬೆಲೆಯದ್ದಾಗಿದೆ.
ನೆಲ್ಲೂರು ತಳಿಯ ನಾಲ್ಕೂವರೆ ವರ್ಷದ ಹಸು ವಯಾಟಿನಾ-19 ಎಫ್ ಐವಿ ಮಾರಾ ಎಮೋವಿಸ್ ವಿಶ್ವದ ಅತ್ಯಂತ ದುಬಾರಿ ಹಸುವೆಂದು ಗುರುತಿಸಿಕೊಂಡಿದೆ. ಈ ಜಾತಿಯ ನೂರಾರು ಹಸುಗಳು ಬ್ರೆಜಿಲ್ನಲ್ಲಿ ಕಂಡುಬರುತ್ತವೆ. ವರದಿಗಳ ಪ್ರಕಾರ, ಹಸುವಿನ ಮೂರನೇ ಒಂದು ಭಾಗದ ಮಾಲೀಕತ್ವವನ್ನು ಇತ್ತೀಚೆಗೆ ಬ್ರೆಜಿಲ್ನ ಅರಾಂಡೋದಲ್ಲಿ ಹರಾಜಿನಲ್ಲಿ 6.99 ಮಿಲಿಯನ್ ರಿಯಲ್ಗಳಿಗೆ ಅಂದರೆ ಸುಮಾರು 11 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಯಿತು, ಇದರ ವೆಚ್ಚ ಬಿಟ್ಟು ಒಟ್ಟು $ 4.3 ಮಿಲಿಯನ್ಗೆ ಅಂದರೆ 35 ಕೋಟಿ ರೂ. ಲಾಭ ತಂದುಕೊಟ್ಟಿದೆ.
ಮಾರಾ ಇಮೋವಿಸ್ ಅನ್ನು ಕಳೆದ ವರ್ಷ ವಿಶ್ವದ ಅತ್ಯಂತ ದುಬಾರಿ ಹಸು ಎಂದು ಘೋಷಿಸಲಾಯಿತು. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಹೆಸರನ್ನು ಈ ತಳಿಗೆ ಇಡಲಾಗಿದೆ. ಇಲ್ಲಿಂದ ಬ್ರೆಜಿಲ್ಗೆ ತಳಿಯನ್ನು ಕಳುಹಿಸಲಾಯಿತು ಮತ್ತು ನಂತರ ಪ್ರಪಂಚದ ಇತರ ಭಾಗಗಳಿಗೆ ಸಹ ಹರಡಿತು. ಬ್ರೆಜಿಲ್ ಒಂದರಲ್ಲೇ ಈ ತಳಿಯ ಸುಮಾರು 160 ಮಿಲಿಯನ್ ಹಸುಗಳಿವೆ. ಈ ಹಸುಗಳು ಹೊಳೆಯುವ ಬಿಳಿ ತುಪ್ಪಳ, ಸಡಿಲವಾದ ಚರ್ಮವನ್ನು ಹೊಂದಿರುತ್ತವೆ. ನೆಲ್ಲೂರು ಹಸುಗಳು ಬಿಸಿ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತವೆ.
ನೆಲ್ಲೂರು ತಳಿ ಅನುವಂಶಿಕವಾಗಿ ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಬ್ರೆಜಿಲಿಯನ್ ಮಾರುಕಟ್ಟೆಯಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅದರ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ. ಈ ತಳಿಯ ಉತ್ತಮ ಗುಣಮಟ್ಟದ ಆನುವಂಶಿಕ ಗುಣಲಕ್ಷಣಗಳನ್ನು ಹೊಂದಿರುವುದರಿಂದ ವಿಶ್ವದಾದ್ಯಂತ ಬೇಡಿಕೆ ಹೆಚ್ಚುತ್ತಿದೆ ಮತ್ತು ಹರಾಜು ವೇಳೆ ದಾಖಲೆ ಪ್ರಮಾಣದ ಹೂಡಿಕೆ ಮಾಡಲು ಹೂಡಿಕೆದಾರರು ಇಚ್ಛೆಯನ್ನು ಪ್ರದರ್ಶಿಸಿದ್ದಾರೆ.
(ಕೃಪೆ-ಅಂರ್ಜಾಲ)