Advertisement
ಅನುಕ್ರಮ

ಸತ್ಸಂತಾನಕ್ಕಾಗಿ ಭಗವಂತನನ್ನು ಹೀಗೆ ಪೂಜಿಸಿ

Share

ಮನಸ್ಸಿನ ಪ್ರಶಾಂತತೆಯಿಂದ ಸಂತಾನ ಬಲ ಬಹುಬೇಗನೆ ಈಡೇರುವುದಂತೆ. ಮನಸ್ಸೇ ಎಲ್ಲದಕ್ಕೂ ಕಾರಣವಾಗಿರುವುದರಿಂದ ಒಂದೊಳ್ಳೆಯ ಸಂತಾನ ಪಡೆಯುವಲ್ಲಿ ಭಗವಂತನ ಕೃಪೆಯು ನಮ್ಮ ಮೇಲಿರಬೇಕಲ್ಲವೇ?

ಸತ್ ಸಂತಾನ ಪಡೆಯಲು ಶ್ರೀಕೃಷ್ಣನ ಅನುಗ್ರಹ ಇರಲೇ ಬೇಕು. ಸದ್ಗೃಹಸ್ಥರೆಲ್ಲರೂ ಒಂದು ಸತ್- ಸಂತಾನ ಪ್ರಾಪ್ತಿಗಾಗಿ ಸಾಕಷ್ಟು ಕನಸನ್ನು ಕಾಣುತ್ತಿರುತ್ತಾರೆ. ಹದಗೆಡುತ್ತಿರುವ ಸಾಮಾಜಿಕ ಚಿಂತನಾ ವ್ಯವಸ್ಥೆಗಳೊಂದಿಗೆ ಸಾಮಾಜಿಕ ಧೋರಣೆಗಳ ಮಧ್ಯೆ ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ, ಜೊತೆಗೆ ಎಲ್ಲದಕ್ಕಿಂತಲೂ ಆಧ್ಯಾತ್ಮಿಕವಾಗಿ ಪ್ರಬಲತೆಯಿಂದ ಕೂಡಿದ ಸ್ವಂತ ನಿಲುವುಗಳನ್ನು ಹೊಂದಿ ಜೀವನ ನಡೆಸಬಲ್ಲ ಸಂತಾನ ಪ್ರಾಪ್ತಿಯಾಗಬೇಕೆಂಬುದೇ ಪ್ರತಿಯೊಂದು ಗೃಹಸ್ಥನ ಮನದಾಸೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಒಂದು ಯೋಜಿತ ವರ್ಷದಲ್ಲಿ ಸಂತಾನವನ್ನು ಹಡೆಯಬೇಕೆಂದು ನಿಶ್ಚಯಿಸಿಕೊಂಡು ಮುಂದಡಿಯಿಡುತ್ತೇವೆ. ವೈದ್ಯರ ಸಲಹೆಗಳ ಮೇರೆಗೆ ಆರೋಗ್ಯವನ್ನು ಸುಧಾರಿಸಿಕೊಳ್ಳುವಂತಹ ಆಹಾರಕ್ರಮಗಳನ್ನು ಹೊಂದುತ್ತೇವೆ. ನಮ್ಮ ದಿನಚರಿಯಲ್ಲಿಯೂ ಅನೇಕ ಮಾರ್ಪಾಡು ಮಾಡಿಕೊಂಡು ಬಹಳಷ್ಟು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತೇವೆ. ದೈಹಿಕ ವ್ಯಾಯಾಮಗಳತ್ತ ವಿಶೇಷ ಗಮನವನ್ನು ಹರಿಸುತ್ತೇವೆ. ಈ ಎಲ್ಲಾ ಸಕಾರಣಗಳು ನಮ್ಮ ಮನಸ್ಸಿನ ಮೇಲೆ ಸತ್ಪರಿಣಾಮಗಳನ್ನು ಬೀರುತ್ತವೆಯಾದರೂ ಧಾರ್ಮಿಕವಾಗಿ ಕೆಲವೊಂದು ಆಚರಣೆಗಳತ್ತ ಗಮನಹರಿಸುವುದು ಮತ್ತೂ ಒಳ್ಳೆಯದು. ಯಾವುದೇ ಧಾರ್ಮಿಕ ಆಚರಣೆಗಳ ಹಿಂದೆ ವ್ಯಕ್ತಿಗೆ ಅನುಕೂಲವಾಗುವಂತಹ ವೈಜ್ಞಾನಿಕ ದೃಷ್ಟಿಕೋನಗಳು ಇರುತ್ತವೆ ಎಂಬುವುದನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಮಕ್ಕಳನ್ನು ಪಡೆಯಲಿಚ್ಛಿಸುವವರು ಸಣ್ಣ ಸಣ್ಣ ಮಕ್ಕಳ ಭಾವಚಿತ್ರವನ್ನು ಆಗಾಗ್ಗೆ ನೋಡುತ್ತಾ ಮಕ್ಕಳನ್ನು ಪಡೆಯುವ ಆಸೆ ಹೆಚ್ಚಾಗುವಂತೆ ಮನಸ್ಸನ್ನು ರೂಪಿಸಿಕೊಳ್ಳಲು ವೈದ್ಯರು ಸಲಹೆ ಕೊಟ್ಟಿರುವುದನ್ನು ನಾವು ನೋಡಿರುತ್ತೇವೆ. ಇನ್ನು ಧಾರ್ಮಿಕವಾಗಿ ಒಂದು ಹೆಜ್ಜೆ ಮುಂದಡಿ ಇಡುವಿರಾದರೆ ಮುದ್ದಾದ ಬಾಲಗೋಪಾಲಕೃಷ್ಣನ ಮುದ್ದು ಮುಖವನ್ನು ನೋಡಿದಾಕ್ಷಣ ನಮಗೂ ಒಂದು ಮುದ್ದಾದ ಕಂದಮ್ಮ ಬೇಕೆನಿಸುವುದು.

ಮಕ್ಕಳನ್ನು ಪಡೆಯುವ ನಿರಂತರ ಪ್ರಯತ್ನಗಳಿಂದ, ಜಾತಕ ವಿಮರ್ಶೆಗಳಿಂದ , ವೈದ್ಯರ ಸಲಹೆ ಸೂಚನೆಗಳಿಂದ ಪ್ರೇರಿತರಾಗಿ ಮಾನವ ಪ್ರಯತ್ನಗಳಿಗೆ ಯಾವುದೇ ಫಲ ಸಿಗದೇ ಇದ್ದಾಗ ಸಂತಾನಪ್ರಾಪ್ತಿಗಾಗಿಯೇ ಇರುವ ‘ಸಂತಾನ ಗೋಪಾಲ ಮಂತ್ರ’ವನ್ನು ನಿತ್ಯವೂ ಪಠಿಸಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಿ ಮಗುವನ್ನು ಪಡೆದವರ ಸಂಖ್ಯೆಯು ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಅತಿ ಹೆಚ್ಚಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ ಸೇರಿಕೊಳ್ಳಿ….

ಸಂತಾನ ಗೋಪಾಲಕೃಷ್ಣ ಮಂತ್ರ:

” ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ದೇವಕೀಸುತ ಗೋವಿಂದ ವಾಸುದೇವ ಜಗತ್ಪತೇ ದೇಹಿ ಮೇ ತನಯಂ ಕೃಷ್ಣ ತ್ಮಾಮಹಂ ಶರಣಂ ಗತಃ |”

Advertisement

ಇದು ಸಂತಾನ ಪಡೆಯಲು ನಿರ್ಧರಿಸಿದ ಗೃಹಸ್ಥರು ಪಠಿಸಬೇಕಿರುವ ಮಂತ್ರ. ಮಂತ್ರವನ್ನು ಪಠಿಸಲು ನಿರ್ದಿಷ್ಟವಾದ ಕ್ರಮಗಳಿವೆ.

ಈ ರೀತಿಯಲ್ಲಿ ನಿರ್ದಿಷ್ಟ ನಿಯಮ ಪಾಲನೆಯಿಂದ ನಾವು ಆಚರಿಸುವ ಈ ಜಪದ ಮೇಲಿನ ಶ್ರದ್ಧೆ ಹಾಗೂ ಅದರ ಮೇಲಿನ ಭಕ್ತಿ ನಂಬಿಕೆಯು ನಮ್ಮಲ್ಲಿ ಮನಸ್ಸಿಗೆ ಬೇಕಾದ ಬಲವನ್ನು ತುಂಬಬಲ್ಲದು. ಸಂತಾನ ಗೋಪಾಲ ಮಂತ್ರವನ್ನು ಪಠಿಸುವುದರಿಂದ ದೀರ್ಘಾಯುಷ್ಯವುಳ್ಳ, ಬುದ್ಧಿವಂತ, ಸದ್ಗುಣಶೀಲ ಮಗುವನ್ನು ನಾವು ಹೊಂದಬಹುದು. ಇದರ ನಿಯಮಗಳಿಗನುಗುಣವಾಗಿ ನೀವು ಸಂತಾನ ಗೋಪಾಲಕೃಷ್ಣ ಮಂತ್ರವನ್ನು ಪಠಿಸಬೇಕಾಗುತ್ತದೆ.

ಸಂತಾನ ಗೋಪಾಲ ಮಂತ್ರವನ್ನು ಪಠಿಸುವಾಗ : ನೀವು ಸಂತಾನ ಗೋಪಾಲ ಕೃಷ್ಣ ಮಂತ್ರವನ್ನು ಪಠಿಸಲು ಆರಂಭಿಸಿದ ದಿನದಿಂದ ಪತಿ-ಪತ್ನಿಯು ಸೂರ್ಯ ಉದಯಿಸುವ ಮುನ್ನ ಏಳಲು ಅಭ್ಯಾಸ ಮಾಡಿಕೊಳ್ಳಬೇಕು. ಹಾಗೆಯೇ ಪ್ರತಿದಿನವೂ ಅದೇ ನಿರ್ದಿಷ್ಟ ಸಮಯವನ್ನು ಆಯ್ಕೆಮಾಡಿಕೊಳ್ಳಬೇಕು. ಮುಂಜಾನೆ ಬೇಗ ಎದ್ದು ಮಂತ್ರವನ್ನು ಪಠಿಸಿದರೆ ಫಲದಾಯಕ. ಮುಂಜಾನೆ ಬೇಗ ಎದ್ದ ನಂತರ ಸ್ನಾನ ಮಾಡಿ ಶುದ್ಧವಾದ ಬಟ್ಟೆಯನ್ನು ಧರಿಸಿ, ಸೂರ್ಯದೇವನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವಾಗ ತಾಮ್ರದ ಪಾತ್ರೆಯಲ್ಲೇ ಅರ್ಪಿಸಿದರೆ ಉತ್ತಮ. ಅರ್ಘ್ಯವನ್ನು ಅರ್ಪಿಸುವ ನೀರಿಗೆ ಸ್ವಲ್ಪ ಅರಶಿಣ ಮತ್ತು ಕುಂಕುಮವನ್ನು ಬೆರೆಸಿ ಅರ್ಪಿಸುವುದು ಉತ್ತಮ. ಇದರಿಂದ ಸಂತಾನವನ್ನು ಪಡೆಯಲು ನೀವು ಎದುರಿಸುತ್ತಿರುವ ಅಡೆತಡೆಗಳು ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ.

ನಂತರ ಮನೆಯ ದೇವರ ಕೋಣೆಯ ಒಳಗೆ ಈಶಾನ್ಯ ದಿಕ್ಕಿನತ್ತ ಒಂದು ಮಣೆ ಅಥವಾ ಮರದ ಚಿಕ್ಕ ಹಲಗೆಯನ್ನಿಟ್ಟು, ಅದರ ಮೇಲೆ ಹಳದಿ ಬಣ್ಣದ ಬಟ್ಟೆಯನ್ನು ಹಾಸಿ ಚಿಕ್ಕ ಶ್ರೀಕೃಷ್ಣನ ವಿಗ್ರಹವನ್ನು ಅಥವಾ ಶ್ರೀಕೃಷ್ಣನ ಬಾಲ್ಯದ ಚಿತ್ರವನ್ನು ಇಡಿ. ಬಾಲ ಗೋಪಾಲನ ಚಿತ್ರವನ್ನು ಅಥವಾ ವಿಗ್ರಹವನ್ನು ಪೂಜಿಸುವ ಮುನ್ನ ಮೊದಲೊಂದಿಪನಾದ ಗಣೇಶನನ್ನು ಪೂಜಿಸಿರಿ. ಮತ್ತು ಪ್ರತಿನಿತ್ಯವೂ ನಡೆಸುವ ಈ ಜಪವು ಯಾವುದೇ ವಿಘ್ನಗಳಿಲ್ಲದೆ ನಡೆಸಲು ಅನುಗ್ರಹವನ್ನು ಬೇಡಿಕೊಳ್ಳಿರಿ.

ಪ್ರತಿನಿತ್ಯ ಮನೆಯ ಹೊರಗೆ ತುಪ್ಪದ ಅಥವಾ ಎಳ್ಳೆಣ್ಣೆಯ ದೀಪವನ್ನು ಬೆಳಗಬೇಕು. ಹಾಗೂ ತಾಮ್ರದ ಪಾತ್ರೆಯಲ್ಲಿ ನೀರನ್ನು ಇಡಬೇಕು. ಗಣೇಶನನ್ನು ಪೂಜಿಸಿದ ನಂತರ ಬಾಲ ಗೋಪಾಲನನ್ನು ಪೂಜಿಸಿ, ಅವನಿಗೆ ಕಲ್ಲು ಸಕ್ಕರೆ ಮತ್ತು ಬೆಣ್ಣೆಯನ್ನು ಅರ್ಪಿಸಬೇಕು. ಹಾಗೂ 108 ಬಾರಿ ಈ ಮೇಲಿನ ಬಾಲ ಗೋಪಾಲ ಮಂತ್ರವನ್ನು ಪಠಿಸಬೇಕು. ಹೀಗೆ ದಿನವೊಂದಕ್ಕೆ 108 ಬಾರಿ ಪಠಿಸುತ್ತಾ ಒಟ್ಟು ಒಂದು ಮಂಡಲವನ್ನು ಅಂದರೆ 48 ದಿನಗಳನ್ನು ಪೂರ್ಣಗೊಳಿಸಬೇಕು. ಪ್ರತಿದಿನವೂ ಜಪವು ಮುಗಿದ ಬಳಿಕ ಬಾಲಕೃಷ್ಣ ಭಾವಚಿತ್ರಕ್ಕೆ ಆರತಿ ಬೆಳಗಿ ಪೂಜೆಯನ್ನು ನಡೆಸಬೇಕು. ಭಾವಚಿತ್ರಕ್ಕೆ ಪತಿ – ಪತ್ನಿಯರಿಬ್ಬರೂ ಮೂರು ಸುತ್ತು ಸುತ್ತುವರಿದು ಬಾಗಿ ನಮಸ್ಕರಿಸಿ ಏಳಬೇಕು. ಈ ಆಚರಣೆಯು ಪ್ರತಿನಿತ್ಯವೂ ನಡೆಯುತ್ತಲಿರಲಿ.

Advertisement

ಗೀತೆಯಲ್ಲಿ ಶ್ರೀಕೃಷ್ಣನ ಭರವಸೆಯ ನುಡಿಯಂತೆ
“ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ||

ಯಾರು ಅನನ್ಯ ಭಾವನೆಯಿಂದ , ಬೇರೆ ಏನನ್ನು ಚಿಂತಿಸದೆ ಶ್ರೀಕೃಷ್ಣನನ್ನು ಉಪಾಸನೆ ಮಾಡುತ್ತಾ , ಶ್ರೀಕೃಷ್ಣನಲ್ಲೇ ಮನಸ್ಸನ್ನು ಸರ್ವಸ್ವವನ್ನು ನೆಟ್ಟಿರುತ್ತಾರೋ ಅಂತಹ ಸದ್ಭಕ್ತರ ಸಂಪೂರ್ಣ ಯೋಗಕ್ಷೇಮ ನನ್ನದು ಎಂಬ ದೃಢ ಭರವಸೆಯ ಬೆಳಕಿನ ನುಡಿಯು ಇದಾಗಿದೆ.

ಮಾನವ ಪ್ರಯತ್ನಗಳ ನಡುವೆ ದೇವಬಲವಿದ್ದಾಗ ಮನಸ್ಸು ನಿರ್ಮಲಗೊಂಡು ಎಲ್ಲವೂ ಯೋಗವಾಗಿ ಕೂಡಿಬರುತ್ತದೆ.

ಬರಹ :
ದುರ್ಗಾ ಪರಮೇಶ್ವರ ಭಟ್
, ಮನ:ಶಾಸ್ತ್ರಜ್ಞ ಹಾಗೂ ಶಿಶು ಶಿಕ್ಷಣ ತಜ್ಞರು, ಲಕ್ಷ್ಯ ಕೌನ್ಸಲಿಂಗ್ ಸೆಂಟರ್, ಪುತ್ತೂರು.  Mob; 9663826972
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದುರ್ಗಾಪರಮೇಶ್ವರ ಭಟ್

ದುರ್ಗಾಪರಮೇಶ್ವರ ಭಟ್. ಇವರು ಮನಶಾಸ್ತ್ರಜ್ಞ ಹಾಗೂ ಶಿಶು ಶಿಕ್ಷಣ ತಜ್ಞರು. ಪುತ್ತೂರಿನಲ್ಲಿ ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಆರಂಭಿಸಿದ್ದಾರೆ.

Published by
ದುರ್ಗಾಪರಮೇಶ್ವರ ಭಟ್

Recent Posts

ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ

ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…

5 hours ago

ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..

ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…

5 hours ago

ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭ | 2026 ಮಾರ್ಚ್ ವರೆಗೆ ಅವಕಾಶ

ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭವಾಗಿದ್ದು 2026 ಮಾರ್ಚ್ ವರೆಗೆ ಅವಕಾಶ ಕರ್ನಾಟಕ…

5 hours ago

ಸ್ವಾವಲಂಬಿ ಸಾರಥಿ ಯೋಜನೆ | ಆಟೋ ಗೂಡ್ಸ್ ವಾಹನ ಖರೀದಿಗೆ ರೂ.4 ಲಕ್ಷ ಸಹಾಯಧನ

ಟ್ಯಾಕ್ಸಿ, ಆಟೋ ಟ್ಯಾಕ್ಟರ್, ಗೂಡ್ಸ್ ವಾಹನದ ಡ್ರೈವರ್ ಆಗಿದ್ದರೂ ಸ್ವಂತ ವಾಹನವಿಲ್ಲ ಎಂಬ…

5 hours ago

ಕ್ಯಾನ್ಸರ್ ಗುಣಪಡಿಸಲು ಗೋವಿನ ಉತ್ಪನ್ನಗಳು | ಮಧ್ಯಪ್ರದೇಶ ಸರ್ಕಾರ ಸಂಶೋಧನೆಗೆ 3.5 ಕೋಟಿ ಖರ್ಚು ಮಾಡಿದ ಹಣ ಎಲ್ಲಿ?

ಮಧ್ಯಪ್ರದೇಶ ಸರ್ಕಾರದಿಂದ ಅನುದಾನಿತ ಸಂಶೋಧನಾ ಉಪಕ್ರಮವು, ಸಾಂಪ್ರದಾಯಿಕ ಹಸು ಆಧಾರಿತ ಸಿದ್ಧತೆಗಳನ್ನು ಬಳಸಿಕೊಂಡು…

5 hours ago

ಭಾರತದ 44% ನಗರಗಳು ದೀರ್ಘಕಾಲದ ವಾಯು ಮಾಲಿನ್ಯ ಸಂಕಟದಲ್ಲಿ| CREA ಉಪಗ್ರಹ ಅಧ್ಯಯನದ ಶಾಕಿಂಗ್ ಬಹಿರಂಗ

ಉಪಗ್ರಹ ದತ್ತಾಂಶ ಆಧಾರಿತ CREA ವಿಶ್ಲೇಷಣೆಯ ಪ್ರಕಾರ, ಭಾರತದ 4,041 ನಗರಗಳಲ್ಲಿ 1,787…

5 hours ago