ಯಕ್ಷಗಾನ ಸರ್ವಾಂಗೀಣ ಕಲೆ | ರಂಗಮನೆ ಯಕ್ಷ ನಾಟ್ಯ-ಹಿಮ್ಮೇಳ ಶಿಕ್ಷಣ ಉದ್ಘಾಟನೆಯಲ್ಲಿ ಕುಮಾರ ಸುಬ್ರಹ್ಮಣ್ಯ |

July 10, 2023
2:48 PM
ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ಸುಜನಾ ಯಕ್ಷ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ನಡೆಯುವ 2023-24 ನೇ ಸಾಲಿನ ಯಕ್ಷಗಾನ ನಾಟ್ಯ ಮತ್ತು ಹಿಮ್ಮೇಳ ತರಗತಿಗಳ ಉದ್ಘಾಟನಾ ಸಮಾರಂಭ ನಡೆಯಿತು.

ಯಕ್ಷಗಾನದ ಕಲಿಕೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿಯೂ ಬಹಳ ಉಪಯುಕ್ತ. ಹಿಮ್ಮೇಳ,ಮಾತುಗಾರಿಕೆ,ನಾಟ್ಯ,ವೇಷಭೂಷಣ ಸೇರಿದಂತೆ ಯಕ್ಷಗಾನ ಒಂದು ಸರ್ವಾಂಗೀಣ ಕಲೆ. ಕಳೆದ 35 ವರ್ಷಗಳಿಂದ ಹಿಮ್ಮೇಳ ವಾದಕನಾಗಿ, ಗುರುವಾಗಿ ದುಡಿಯುತ್ತಿದ್ದೇನೆ. ಕಲಿಕೆಗೆ ಪೂರಕವಾದ ವಾತಾವರಣರಂಗಮನೆಯಲ್ಲಿದೆ’ ಎಂದು ಖ್ಯಾತ ಹಿಮ್ಮೇಳ ಗುರುಗಳಾದ ವಳಕುಂಜ ಕುಮಾರ ಸುಬ್ರಹ್ಮಣ್ಯ ಹೇಳಿದರು.

ಅವರು ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ಸುಜನಾ ಯಕ್ಷ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ನಡೆಯುವ 2023-24 ನೇ ಸಾಲಿನ ಯಕ್ಷಗಾನ ನಾಟ್ಯ ಮತ್ತು ಹಿಮ್ಮೇಳ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಹಿರಿಯ ಯಕ್ಷರಂಗ ಕಲಾವಿದ ಸುಜನಾ ಸುಳ್ಯರವರು ದೀಪಬೆಳಗಿಸಿ ತರಗತಿಗೆ ಚಾಲನೆ ನೀಡಿದರು. ಯಕ್ಷಗಾನ ನಾಟ್ಯಗುರುಗಳಾದ, ಕಲಾವಿದೆ  ಸರೋಜಿನಿ ಬನಾರಿ, ಉದ್ಯಮಿ ಬಾಲಕೃಷ್ಣ ಬಲ್ಲಾಳ್ ಅತಿಥಿಗಳಾಗಿ ಭಾಗವಹಿಸಿದರು.

ರಂಗಮನೆಯ ಅಧ್ಯಕ್ಷರಾದ ಡಾ.ಜೀವನ್ ರಾಂ ಸುಳ್ಯ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ರಂಗಮನೆಯ ಸದಸ್ಯರಾದ ರವೀಶ್ ಪಡ್ಡಂಬೈಲು ವಂದಿಸಿದರು.

ಯಕ್ಷಗಾನ ನಾಟ್ಯ ತರಗತಿಯು ಪೂ.9.30 ರಿಂದ 11.30 ವರೆಗೆ ಹಾಗೂ ಚೆಂಡೆ – ಮದ್ದಳೆ ತರಗತಿಯು ಪೂ.9.00 ರಿಂದ ಮಧ್ಯಾಹ್ನ 1.30 ರ ವರೆಗೆ ನಡೆಯುತ್ತದೆ. ಒಂದು ಗಂಟೆ ಅವಧಿಯ ಹಿಮ್ಮೇಳ ತರಗತಿಯನ್ನು ಕಲಿಯುವವರು ತಮ್ಮ ಅನುಕೂಲದ ಸಮಯವನ್ನು ಹೊಂದಿಸಿಕೊಳ್ಳಲು ಅವಕಾಶವಿದೆ. ಆಸಕ್ತರು ಗುರುಗಳಾದ ಶ್ರೀಮತಿ ಸರೋಜಿನಿ ಬನಾರಿ (9441189710 )
ಮತ್ತು ಶ್ರೀ ಕುಮಾರ ಸುಬ್ರಹ್ಮಣ್ಯ ( 9449915777 ) ಇವರನ್ನು ಸಂಪರ್ಕಿಸಬಹುದು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ
ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ
March 23, 2026
9:12 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror