ಯಕ್ಷಗಾನದ ಕಲಿಕೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿಯೂ ಬಹಳ ಉಪಯುಕ್ತ. ಹಿಮ್ಮೇಳ,ಮಾತುಗಾರಿಕೆ,ನಾಟ್ಯ,ವೇಷಭೂಷಣ ಸೇರಿದಂತೆ ಯಕ್ಷಗಾನ ಒಂದು ಸರ್ವಾಂಗೀಣ ಕಲೆ. ಕಳೆದ 35 ವರ್ಷಗಳಿಂದ ಹಿಮ್ಮೇಳ ವಾದಕನಾಗಿ, ಗುರುವಾಗಿ ದುಡಿಯುತ್ತಿದ್ದೇನೆ. ಕಲಿಕೆಗೆ ಪೂರಕವಾದ ವಾತಾವರಣರಂಗಮನೆಯಲ್ಲಿದೆ’ ಎಂದು ಖ್ಯಾತ ಹಿಮ್ಮೇಳ ಗುರುಗಳಾದ ವಳಕುಂಜ ಕುಮಾರ ಸುಬ್ರಹ್ಮಣ್ಯ ಹೇಳಿದರು.
ಅವರು ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ಸುಜನಾ ಯಕ್ಷ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ನಡೆಯುವ 2023-24 ನೇ ಸಾಲಿನ ಯಕ್ಷಗಾನ ನಾಟ್ಯ ಮತ್ತು ಹಿಮ್ಮೇಳ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಹಿರಿಯ ಯಕ್ಷರಂಗ ಕಲಾವಿದ ಸುಜನಾ ಸುಳ್ಯರವರು ದೀಪಬೆಳಗಿಸಿ ತರಗತಿಗೆ ಚಾಲನೆ ನೀಡಿದರು. ಯಕ್ಷಗಾನ ನಾಟ್ಯಗುರುಗಳಾದ, ಕಲಾವಿದೆ ಸರೋಜಿನಿ ಬನಾರಿ, ಉದ್ಯಮಿ ಬಾಲಕೃಷ್ಣ ಬಲ್ಲಾಳ್ ಅತಿಥಿಗಳಾಗಿ ಭಾಗವಹಿಸಿದರು.
ರಂಗಮನೆಯ ಅಧ್ಯಕ್ಷರಾದ ಡಾ.ಜೀವನ್ ರಾಂ ಸುಳ್ಯ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ರಂಗಮನೆಯ ಸದಸ್ಯರಾದ ರವೀಶ್ ಪಡ್ಡಂಬೈಲು ವಂದಿಸಿದರು.
ಯಕ್ಷಗಾನ ನಾಟ್ಯ ತರಗತಿಯು ಪೂ.9.30 ರಿಂದ 11.30 ವರೆಗೆ ಹಾಗೂ ಚೆಂಡೆ – ಮದ್ದಳೆ ತರಗತಿಯು ಪೂ.9.00 ರಿಂದ ಮಧ್ಯಾಹ್ನ 1.30 ರ ವರೆಗೆ ನಡೆಯುತ್ತದೆ. ಒಂದು ಗಂಟೆ ಅವಧಿಯ ಹಿಮ್ಮೇಳ ತರಗತಿಯನ್ನು ಕಲಿಯುವವರು ತಮ್ಮ ಅನುಕೂಲದ ಸಮಯವನ್ನು ಹೊಂದಿಸಿಕೊಳ್ಳಲು ಅವಕಾಶವಿದೆ. ಆಸಕ್ತರು ಗುರುಗಳಾದ ಶ್ರೀಮತಿ ಸರೋಜಿನಿ ಬನಾರಿ (9441189710 )
ಮತ್ತು ಶ್ರೀ ಕುಮಾರ ಸುಬ್ರಹ್ಮಣ್ಯ ( 9449915777 ) ಇವರನ್ನು ಸಂಪರ್ಕಿಸಬಹುದು.
ಏಪ್ರಿಲ್ 3 ಹಾಗೂ 4 ರಂದು ಕರಾವಳಿ ಹಾಗೂ ಉತ್ತರ ಮತ್ತು ದಕ್ಷಿಣ…
ಮಿಜೋರಾಂನ ಚಂಫೈ ಜಿಲ್ಲೆಯ ಕಾಡಿನಲ್ಲಿ ದಾಸ್ತಾನು ಇರಿಸಿದ್ದ 321 ಚೀಲ ಅಡಿಕೆಯನ್ನು ಅಸ್ಸಾಂ…
ಕಡಬ ತಾಲೂಕಿನ ಯೇನೆಕಲ್ಲು ಬಚ್ಚನಾಯಕ ದೈವಸ್ಥಾನದಲ್ಲಿ ವಾರ್ಷಿಕ ನೇಮ ನಡೆಯುತ್ತಿದೆ. ಈ ಸಂದರ್ಭಹವ್ಯಾಸಿ…
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟ್ರವಾಗಿದ್ದು, ಹಸಿರು ಪರಿವರ್ತನೆಯಂತಹ ಕ್ಷೇತ್ರದಲ್ಲಿ…
ಈಗಿನಂತೆ ಎ.1 ರಿಂದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ…