ಯಕ್ಷಗಾನ ತಾಳಮದ್ದಳೆ ನರಕಾಸುರ ಮೋಕ್ಷ ಕಾರ್ಯಕ್ರಮ: ಸೆ. 27ರಂದು ಯುಟ್ಯೂಬ್‌ನಲ್ಲಿ ಪ್ರಸಾರ

September 26, 2020
6:08 PM
ಕೊರೋನಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಲಾ , ಕಾಲೇಜುಗಳು ಆರಂಭಗೊಳ್ಳದೆ ಶಿಕ್ಷಣವನ್ನು ಆನ್‌ಲೈನ್ ಮೂಲಕ ಕಲಿಯುವ ಅರ್ನಿವಾಯತೆ ತಲೆದೋರಿದರೂ ಸಾಂಸ್ಕೃತಿಕ ರಸದೌತಣವನ್ನು ನೀಡಲು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಮತ್ತು ಉಪನ್ಯಾಸಕರ ಸಹಕಾರದಿಂದ ನರಕಾಸುರ ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ಯುಟ್ಯೂಬ್‌ನಲ್ಲಿ ಬಿತ್ತರಗೊಳ್ಳಲಿದೆ. ಈ ಕಾರ್ಯಕ್ರಮವು ಸೆ. 27ನೇ ತಾರೀಕಿನಂದು ಸಂಜೆ ಆರು ಗಂಟೆಗೆ ಪ್ರಸಾರವಾಗಲಿದೆ.

Advertisement

ಮುಮ್ಮೇಳದಲ್ಲಿ ದೇವೆಂದ್ರನಾಗಿ ವಿದ್ಯಾರ್ಥಿನಿ ಕೃತಿ ಕೆ.ಎಂ, ನಾರದನಾಗಿ ಶ್ರೀ ವಿದ್ಯಾ ಬಿ.ಆರ್, ಶ್ರೀಕೃಷ್ಣನಾಗಿ ಗಹನಶ್ರೀ, ಸತ್ಯಭಾಮೆಯಾಗಿ ಭಾಗವಹಿಸಿದ ಶ್ರೇಯಾ, ನರಕಾಸುರನಾಗಿ ಅನೀಶ್ ಕೃಷ್ಣ, ಮುರಾಸುರನಾಗಿ ಅನ್ವಿತ್ ಗೊಪ, ದೇವದೂತನಾಗಿ ಭಗತ್ ಎಚ್ ಎನ್ ಭಾಗವಹಿಸಿರುತ್ತಾರೆ.

ಅದೇ ರೀತಿ ಹಿಮ್ಮೇಳದಲ್ಲಿ ಭಾಗವತಿಕೆಗೆ ಹೇಮಸ್ವಾತಿ ಕುರಿಯಾಜೆ, ಚೆಂಡೆಯಲ್ಲಿ ಅಂಬಾತನಯ ಅರ್ನಾಡಿ, ಮದ್ದಳೆಯಲ್ಲಿ ಭೀಮ ಭಾರದ್ವಾಜ್, ಚಕ್ರತಾಳದಲ್ಲಿ ನವೀನಕೃಷ್ಣ ಮತ್ತು ಸಾತ್ವಿಕ್ ವಿ ನಾಯಕ್ ಮತ್ತು ನಿರೂಪಕಿಯಗಿ ದೇವಿಕಾ ಕುರಿಯಾಜೆ ತಮ್ಮ ಸಹಕಾರವನ್ನು ನೀಡಿರುತ್ತಾರೆ. ಈ ಕಾರ್ಯಕ್ರಮದ ಸಾಹಿತ್ಯ ಮತ್ತು ನಿರ್ದೇಶನವನ್ನು ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀಧರ ವಿ ಶೆಟ್ಟಿಗಾರ್ ,ಸಮನ್ವಯ ಮತ್ತು ಸಂಕಲನಕಾರರಾಗಿ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಅಜಯಶಾಸ್ತ್ರಿ ನಿರ್ವಹಿಸಿರುತ್ತಾರೆ. ಇದರ ಜೊತೆಗೆ ವಿವೇಕಾನಂದ ಪದವಿ ಕಾಲೇಜಿನ ವಿಕಸನ ಸ್ಟುಡಿಯೋ ಈ ಕಾರ್ಯಕ್ರಮಕ್ಕೆ ಸಂಪುರ್ಣ ಸಹಕಾರವನ್ನು ನೀಡಿದೆ.

ನಿಗದಿಪಡಿಸಲಾದ ಸಮಯದಲ್ಲಿ http://youtu.be/lr7i3SKQCBo ಲಿಂಕ್ ಓಪನ್ ಮಾಡುವ ಮೂಲಕ ಈ ಕಾರ್ಯಕ್ರಮವನ್ನು ವೀಕ್ಷಿಸಲು ಅವಕಾಶವಿದೆ. ಅದೇ ರೀತಿ ಯುಟ್ಯೂಬ್‌ನಲ್ಲಿ Vpuc Puttur ಎಂದು ಸರ್ಚ್ ಮಾಡಿದರೂ ಆಯ್ಕೆ ಲಭ್ಯವಿರುತ್ತದೆ

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

50 ವರ್ಷಗಳಲ್ಲಿ ಶೇ 8 ರಷ್ಟು ಜನರ ಭಾಷೆಗಳು ಜಗತ್ತಿನ ಮೇಲೆ ಅಧಿಪತ್ಯ ಸಾಧಿಸುವ ಅಪಾಯ | ಡಾ. ಪುರುಷೋತ್ತಮ ಬಿಳಿಮಲೆ ಎಚ್ಚರಿಕೆ
April 27, 2025
10:39 AM
by: The Rural Mirror ಸುದ್ದಿಜಾಲ
ಯೇನೆಕಲ್ಲು ಬಚ್ಚನಾಯಕ ನಮ್ಮ ಕಾರ್ಣಿಕದ ಆರಾಧ್ಯ ಶಕ್ತಿ
March 31, 2025
8:32 PM
by: ದ ರೂರಲ್ ಮಿರರ್.ಕಾಂ
ಶ್ರೀ ಸಂಗೀತ ಪಾಠಶಾಲೆ | ವಾರ್ಷಿಕೋತ್ಸವ `ಸ್ವರಶ್ರೀ 2025′
February 13, 2025
8:38 PM
by: The Rural Mirror ಸುದ್ದಿಜಾಲ
ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group