ಯಕ್ಷಗಾನ ಭಾಗವತ ದಿನೇಶ ಅಮ್ಮಣ್ಣಾಯರಿಗೆ ‘ಶ್ರೀ ಯಕ್ಷಾಂಜನೇಯ ಪ್ರಶಸ್ತಿ’

December 21, 2022
10:10 PM

ಪುತ್ತೂರು ಬೊಳ್ವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘವು ಆಯೋಜಿಸುವ ‘ಶ್ರೀ ಯಕ್ಷಾಂಜನೇಯ ಪ್ರಶಸ್ತಿ’ಗೆ ಹಿರಿಯ ಭಾಗವತ  ದಿನೇಶ ಅಮ್ಮಣ್ಣಾಯರು ಭಾಜನರಾಗಿದ್ದಾರೆ. 2022 ದಶಂಬರ 25, ಭಾನುವಾರ ಸಂಜೆ ಗಂಟೆ 5ಕ್ಕೆ ಜರಗುವ ‘ಶ್ರೀ ಆಂಜನೇಯ 49’ ವಾರ್ಷಿಕ ಕಲಾಪದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಅಮ್ಮಣ್ಣಾಯರಿಗೆ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು ಎಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ  ಭಾಸ್ಕರ ಬಾರ್ಯ ತಿಳಿಸಿದ್ದಾರೆ.

Advertisement
Advertisement
Advertisement
Advertisement
ದಿನೇಶ ಅಮ್ಮಣ್ಣಾಯರು ‘ರಸರಾಗ ಚಕ್ರವರ್ತಿ’ ಬಿರುದಾಂಕಿತ ಭಾಗವತ. ಕೀರ್ತಿಶೇಷ ಭಾಗವತ ದಾಮೋದರ ಮಂಡೆಚ್ಚರ ಉತ್ತರಾಧಿಕಾರಿಯಾಗಿ ಕರ್ನಾಟಕ ಮೇಳದಲ್ಲಿ ಹೊರಹೊಮ್ಮಿದವರು. ಇಪ್ಪತ್ತೊಂದು ವರುಷ ಕರ್ನಾಟಕ ಮೇಳವೂ ಸೇರಿದಂತೆ ಪುತ್ತೂರು ಮೇಳ, ಕುಂಟಾರು ಮೇಳ, ಕದ್ರಿ ಮೇಳ, ಶ್ರೀ ಎಡನೀರು ಮೇಳಗಳಲ್ಲಿ ವ್ಯವಸಾಯ ಮಾಡಿದ್ದಾರೆ.

Advertisement
‘ಮಾ ನಿಷಾದ, ಭಕ್ತ ಸುಧಾಮ, ಪಾಂಚಜನ್ಯ, ಅಕ್ಷಯಾಂಬರ, ಸತ್ಯಹರಿಶ್ಚಂದ್ರ, ನಳದಮಯಂತಿ..’ ಮೊದಲಾದ ಪ್ರಸಂಗಗಳ ಹಾಡುಗಳಲ್ಲಿ ರಸ-ಭಾವಗಳು ಮರುಹುಟ್ಟು ಪಡೆಯುತ್ತವೆ. ತುಳು ಪ್ರಸಂಗಗಳ ರಂಗ ಸಂಭ್ರಮದ ಕಾಲಘಟ್ಟದಲ್ಲಿ ಅಮ್ಮಣ್ಣಾಯರ ಗಾಯನಕ್ಕೆ ಪ್ರತ್ಯೇಕವಾದ ಗಾನಸುಖ. ದಾಮೋದರ ಮಂಡೆಚ್ಚರ ನೆರಳಿನಲ್ಲಿ ಮೇಲ್ಮೆ ಕಂಡ ಇವರ ಗಾಯನ ಮಾರ್ಗವು ‘ಅಮ್ಮಣ್ಣಾಯ ಶೈಲಿ’ಯಾಗಿ ರೂಪುಗೊಂಡಿದೆ. ಅಮ್ಮಣ್ಣಾಯರ ಪದ್ಯಶೈಲಿಗೆ ದೊಡ್ಡ ಅಭಿಮಾನಿ ಗಡಣವಿರುವುದು ಅವರ ಕಲಾಯಾನದ ದ್ಯೋತಕ ಹಾಗೂ ಗೌರವ ಎಂದು  ಭಾಸ್ಕರ ಬಾರ್ಯ ತಿಳಿಸಿದ್ದಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |
February 1, 2025
7:07 PM
by: The Rural Mirror ಸುದ್ದಿಜಾಲ
ಕೇಂದ್ರ ಬಜೆಟ್‌ | ಕೃಷಿ-ಗ್ರಾಮೀಣ-ಆರೋಗ್ಯದ ಕಡೆಗೂ ಗಮನ |
February 1, 2025
2:28 PM
by: The Rural Mirror ಸುದ್ದಿಜಾಲ
ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ
January 31, 2025
10:23 PM
by: The Rural Mirror ಸುದ್ದಿಜಾಲ
ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ
January 31, 2025
10:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror