ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ ಬಿಪೊರ್ಜೊಯ್ ಇದೀಗ ತೀವ್ರ ಸ್ವರೂಪದೊಂದಿಗೆ ಗುಜರಾತ್ನ ಕಛ್ ಹಾಗೂ ಪಾಕಿಸ್ತಾನದ ಕರಾಚಿ ನಡುವೆ ಜೂನ್ 15ರ ವೇಳೆಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಎರಡನೇ ಹಂತದ ಚಂಡಮಾರುತ ಎಚ್ಚರಿಕೆಯನ್ನು ಕರಾವಳಿ ಪ್ರದೇಶಗಳಲ್ಲಿ ಪ್ರತಿಕೂಲ ಹವಾಮಾನದ ಎಚ್ಚರಿಕೆಯನ್ನು ನೀಡಲಾಗಿದೆ. ಬೈಪಾರ್ಜೋಯ್ ಪೂರ್ವ ಮಧ್ಯ ಅರೇಬಿಯನ್ ಸಮುದ್ರದಲ್ಲಿ ಜೂನ್ 11 ರಂದು ಚಲಿಸಿ ಜೂನ್ 15 ರ ಮಧ್ಯಾಹ್ನದ ವೇಳೆಗೆ ಮಾಂಡ್ವಿ (ಗುಜರಾತ್) ಮತ್ತು ಕರಾಚಿ (ಪಾಕಿಸ್ತಾನ) ನಡುವೆ ದಾಟುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಬಂಗಾಳಿ ಭಾಷೆಯಲ್ಲಿ ಚಂಡಮಾರುತಕ್ಕೆ ‘ಬಿಪೊರ್ಜೊಯ್’ ಎಂದು ಹೆಸರಿಡಲಾಗಿದೆ. ಭಾನುವಾರ ಗುಜರಾತ್ನ ಪೋರಬಂದರ್ನಿಂದ 480 ಕಿ.ಮೀ. ದೂರದ ನೈಋತ್ಯ ಭಾಗದಲ್ಲಿ ಕೇಂದ್ರೀಕೃತವಾಗಿತ್ತು. ಅದು ಉತ್ತರ ಭಾಗದತ್ತ ಚಲಿಸಲಿದ್ದು, ಜೂನ್ 15ರ ವೇಳೆಗೆ ಸೌರಾಷ್ಟ್ರ ಹಾಗೂ ಕಛ್ ಮತ್ತು ಪಾಕಿಸ್ತಾನದ ಕರಾಚಿ ಕರಾವಳಿಗಳ ಮಧ್ಯ ಗಂಟೆಗೆ 125ರಿಂದ 150 ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.