ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಸಲ್ಪಡುವ ಅಮರ ಯೋಗ ತರಬೇತಿ ಕೇಂದ್ರ ವಿದ್ಯಾರ್ಥಿಗಳು ಕೇಂದ್ರ ಸಹಕಾರದ ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯ ಹಾಗೂ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ ಮೈಸೂರು ವತಿಯಿಂದ ನಡೆಸಿದ ಯೋಗ ಕಾರ್ಯಕ್ರಮದಲ್ಲಿ ಸೂರ್ಯನಮಸ್ಕಾರ ಯಜ್ಞ ಇದರಲ್ಲಿ ಭಾಗವಹಿಸಿದ 26 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಚಿನ್ನದ ಪದಕ ದೊರೆತಿದ್ದು ಅದನ್ನು ಯೋಗ ತರಬೇತಿ ಕೇಂದ್ರದಲ್ಲಿ ನಿವೃತ್ತ ಭೂ ಸೇನಾ ಯೋಧ ಮಹೇಶ್ ಕೊಪ್ಪತಡ್ಕ ನೀಡಿ ಗೌರವಿಸಿದರು . ಈ ಸಂದರ್ಭದಲ್ಲಿ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ, ಪ್ರಶಾಂತ್ ವಾಲ್ತಾಜೆ, ತುಳಸಿ ಕುಮಾರ್ ಕೊರತ್ಯಡ್ಕ, ಅರುಣ್ ಮೇಕೇರಿ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಟ್ರಸ್ಟ್ ಸದಸ್ಯ ಮೋಹನ್ ದಾಸ್ ಶಿರಾಜೆ ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel