ಚೀನೀ ಆ್ಯಪ್​ಗಳಿಂದ ಮೋಸ ಹೋದಿರಿ ಜೋಕೆ | ಮಂಗಳೂರು ಪೊಲೀಸ್ ಆಯುಕ್ತರ ಸೂಚನೆ |

July 23, 2023
1:51 PM
ಚೀನೀ ಆ್ಯಪ್​ಗಳನ್ನು ಡೌನ್‍ಲೋಡ್ ಮಾಡಿಕೊಂಡು ಮೋಸ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಸಾಲದ ಆ್ಯಪ್​ಗಳಿಂದ ಅಪರಾಧಗಳು ಹೆಚ್ಚಾಗುತ್ತಿವೆ. ಚೀನೀ ಆ್ಯಪ್​ಗಳಿಂದ ಎಚ್ಚರದಿಂದ ಇರಿ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.

ಜನ ಮೋಸ ಹೋಗುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಅದರಲ್ಲೂ ಈ ಚೀನಿ#Chineseಯರು ಇತರ ದೇಶದ ಜನರನ್ನು ಮಂಗ ಮಾಡೋದ್ರಲ್ಲಿ ಎತ್ತಿದ ಕೈ. ಚೀನಾ ದೇಶ ತಂತ್ರಜ್ಞಾನ#Technologyದಲ್ಲಿ ಪವರ್ಫುಲ್ ದೇಶ. ಗ್ಯಾಜೆಟ್ ಐಟಂ ತಯಾರಿಸುದಲ್ಲಿ ಮುಂಚೂಣಿಯಲ್ಲಿದೆ. ಹಾಗೆ ಇದೇ ಅಸ್ತ್ರದೊಂದಿಗೆ ಇತರರನ್ನು ದೋಚುವ ಕೆಲಸವನ್ನು ಚೆನ್ನಾಗಿ ಮಾಡುತ್ತಿದೆ. ಪ್ರಪಂಚದಲ್ಲಿ ಯಾವತ್ತಿದ್ದರೂ ಚೀನಾ ಮೋಸಕ್ಕೆ ಹೆಸರುವಾಸಿ. ಹಾಗಾಗಿ ಚೀನಾ ಅಪ್ ಗಳನ್ನು ಬಳಸುವಾಗ ಎಚ್ಚರ.

Advertisement

ಸಾಮಾಜಿಕ ಜಾಲತಾಣದಲ್ಲಿ ಸಾಲ ಕೊಡುವ ಆ್ಯಪ್​ ಗಳು ಹೆಚ್ಚಾಗಿವೆ. ಕಡಿಮೆ ಬಡ್ಡಿಗೆ ಹಣ ಸಿಗುತ್ತೆ ಅಂತ ಜನ ಮೋಸ ಹೋಗ್ತಾ ಇದ್ದಾರೆ. ಅದರಲ್ಲೂ ಚೀನೀ ಆ್ಯಪ್​ಗಳನ್ನು ಡೌನ್‍ಲೋಡ್ ಮಾಡಿಕೊಂಡು ಮೋಸ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಸಾಲದ ಆ್ಯಪ್​ಗಳಿಂದ ಅಪರಾಧಗಳು ಹೆಚ್ಚಾಗುತ್ತಿವೆ. ಚೀನೀ ಆ್ಯಪ್​ಗಳಿಂದ ಎಚ್ಚರದಿಂದ ಇರಿ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.

ಚೀನೀ ಆ್ಯಪ್​ಗಳಿಂದ ಮೋಸ : ಜನರಿಗೆ ಚೀನೀ ಆಪ್ ಗಳಿಂದ ಸರಿಯಾದ ಮಾಹಿತಿ ಸಿಗದೇ ಅಪ್ಲಿಕೇಶ್‍ಗಳನ್ನು ಡೌನ್‍ಲೋಡ್ ಮಾಡಿ ಮೋಸ ಹೋಗ್ತಾ ಇದ್ದಾರೆ. ಚೀನೀ ಆ್ಯಪ್​ಗಳು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಮತ್ತು ಆಕರ್ಷಕ ಮರುಪಾವತಿ ಆಯ್ಕೆಗಳಲ್ಲಿ ಸಾಲಗಳನ್ನು ನೀಡುವುದಾಗಿ ಜಾಹೀರಾತು ನೀಡಿ ಜನರಿಗೆ ವಂಚಿಸುತ್ತಿವೆ.

ಟ್ರ್ಯ್ರಾಪ್ ಕಾಲ್ : ವೀಡಿಯೊ ಕಾಲ್ ಮತ್ತು ಇಂಟರ್ನೆಟ್ ಕಾಲ್ ಮೂಲಕ ಜನರನ್ನು ಚೀನೀ ಆ್ಯಪ್​ಗಳು ಸಾಲದ ಬಲೆಗೆ ಬೀಳಿಸಿಕೊಳ್ಳುತ್ತಿವೆ. ಅವರು ಮಾನ್ಯತೆ ಪಡೆದ ಹಣಕಾಸು ಏಜೆನ್ಸಿಗಳಿಂದ ಮಾತನಾಡಿದಂತೆ ಮಾಡಿ ಜನರನ್ನು ನಂಬಿಸುತ್ತಾರೆ. ನಂತರ ಸಾಲ ಕೊಡುವ ನೆಪದಲ್ಲಿ ಬ್ಯಾಂಕ್ ಖಾತೆ ಸಂಖ್ಯೆ, ಭಾವಚಿತ್ರಗಳು ಸೇರಿದಂತೆ ವೈಯಕ್ತಿಕ ವಿವರಗಳನ್ನು ಪಡೆಯುತ್ತಾರೆ. ಸಾಲದ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಮೊತ್ತವನ್ನು ಜಮಾ ಮಾಡಿದ ಕ್ಷಣದಿಂದಲೇ ಟ್ರ್ಯಾಪ್ ಮಾಡಲು ಪ್ರಾರಂಭಿಸುತ್ತಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.

 

ಜನರಿಗೆ ಬ್ಲ್ಯಾಕ್‍ಮೇಲ್ : ಸಾಲ ವಸೂಲಾತಿಗಾಗಿ ಸಂತ್ರಸ್ತರ ಕುಟುಂಬಗಳಿಗೆ ಅಶ್ಲೀಲ ಫೋಟೋಗಳನ್ನು ಕಳಿಸಿ ಬ್ಲ್ಯಾಕ್‍ಮೇಲ್ ಮಾಡ್ತಾರೆ. ಸಾಲದ ಅಪ್ಲಿಕೇಶನ್ ಸಂಸ್ಥೆಗಳು ಜನರ ವೈಯಕ್ತಿಕ ವಿವರಗಳನ್ನು ಪಡೆಯುವ ಮೂಲಕ ಸಾಲವನ್ನು ವಸೂಲಿ ಮಾಡಲು ಮುಂದಾಗುತ್ತವೆ. ಅಂತಿಮವಾಗಿ ಸಂತ್ರಸ್ತರು ಸಾಲವಾಗಿ ಪಡೆದಿದ್ದಕ್ಕಿಂತ ಹೆಚ್ಚಿನ ಹಣವನ್ನು ಮರುಪಾವತಿ ಮಾಡುತ್ತಾರೆ ಎಂದು ಜೈನ್ ಹೇಳಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಸುಮಾರು 600 ಸಾಲದ ಅಪ್ಲಿಕೇಶನ್‍ಗಳನ್ನು ನಿಷೇಧಿಸಿದೆ. ಆದ್ರೂ ದಿನ ಹೊಸ ಹೊಸ ಆ್ಯಪ್​ಗಳು ಹುಟ್ಟಿಕೊಂಡು ಜನರನ್ನು ಮೋಸಗೊಳಿಸುತ್ತಿವೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ
April 16, 2025
9:41 PM
by: ಡಾ.ಚಂದ್ರಶೇಖರ ದಾಮ್ಲೆ
ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ
April 16, 2025
8:40 PM
by: ದ ರೂರಲ್ ಮಿರರ್.ಕಾಂ
ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!
April 16, 2025
11:18 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |
April 16, 2025
10:50 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group