Advertisement
MIRROR FOCUS

ಗ್ರಾಮೀಣ ಭಾಗದಲ್ಲಿ ಕ್ಲಿನಿಕ್‌ ತೆರೆಯಲು ಮನಸ್ಸು ಮಾಡಿದ ಯುವ ವೈದ್ಯರು | ಹಲವು ಕಡೆ ಈಗ ಯುವ ವೈದ್ಯರ ಕ್ಲಿನಿಕ್‌ |

Share

ಗ್ರಾಮೀಣ ಭಾಗದಲ್ಲಿ ಈಗ ಯುವ ವೈದ್ಯರು ಕ್ಲಿನಿಕ್‌ ತೆರೆಯಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಅತೀ ಅಗತ್ಯವಾದ ಸೌಲಭ್ಯ, ಆರೋಗ್ಯಕ್ಕೆ ಸಂಬಂಧಿಸಿದ್ದು. ಅಂತಹದ್ದೊಂದು ಸೌಲಭ್ಯವನ್ನು ಈಗಿನ ಯುವ ವೈದ್ಯರು ಹಳ್ಳಿಗೆ, ಗ್ರಾಮೀಣ ಭಾಗಕ್ಕೆ ನೀಡುತ್ತಿದ್ದಾರೆ. ಹಲವು ಕಡೆ ಯುವ ವೈದ್ಯರು ಕ್ಲಿನಿಕ್‌ ತೆರೆದುಕೊಂಡಿದೆ.

Advertisement
Advertisement

ಆರೋಗ್ಯ ಸೇವೆಯು ಗ್ರಾಮೀಣ ಭಾಗದವರೆಗೆ ಈಗ ಅಗತ್ಯ ಇದೆ. ಸರ್ಕಾರಿ ವ್ಯವಸ್ಥೆಯಿಂದ ಮಾತ್ರವೇ ಗ್ರಾಮೀಣ ಭಾಗದವರೆಗೆ ಆರೋಗ್ಯ ಸೇವೆ ನೀಡುವುದು ಅಷ್ಟು ಸುಲಭದ ಮಾತಲ್ಲ. ಹಿಂದೆಲ್ಲಾ ಇಡೀ ಊರಿಗೆ ಒಬ್ಬರೇ ಒಬ್ಬರೂ ವೈದ್ಯರು ಇರಲಿಲ್ಲ. ಕೆಲವು ಕಡೆಗಳಲ್ಲಿ ವೈದ್ಯಕೀಯ ಪದವಿ ಪಡೆದರೆ, ಔಷಧಿ ನೀಡುತ್ತಾರೆ ಎಂದು ತಿಳಿದ ತಕ್ಷಣವೇ ಅಂತಹ ವೈದ್ಯರನ್ನು ಗ್ರಾಮೀಣ ಭಾಗಕ್ಕೆ ದೂರದಿಂದಲೂ ಕರೆದು ಸ್ವಾಗತಿಸುತ್ತಿದ್ದರು. ಬಳಿಕ ಗ್ರಾಮಕ್ಕೊಬ್ಬ ವೈದ್ಯರು ಇರುತ್ತಿದ್ದರು. ಕೆಲವು ಸಮಯದವರೆಗೆ ಗ್ರಾಮೀಣ ಭಾಗದಲ್ಲಿ ಸೇವೆ ಮಾಡಲು ಯುವ ವೈದ್ಯರು ಮನಸು ಮಾಡುತ್ತಿರಲಿಲ್ಲ. ಇದೀಗ ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ಆರೋಗ್ಯ ಸೇವೆ ನೀಡಲು ಯುವ ವೈದ್ಯರು ಕ್ಲಿನಿಕ್‌ ತೆರೆಯಲು ಆರಂಭಿಸಿದ್ದಾರೆ. ಈ ಬಗ್ಗೆ ಯುವ ವೈದ್ಯ ಪುತ್ತೂರಿನ ಸರ್ವೆಯಲ್ಲಿ ಕ್ಲಿನಿಕ್‌ ತೆರೆಯಲು ಸಿದ್ಧತೆ ನಡೆಸಿರುವ ಡಾ.ಆದಿತ್ಯ ನಾರಾಯಣ ಭಟ್‌ ಅವರು ತಮ್ಮ ಅಭಿಪ್ರಾಯವನ್ನು ಹೀಗೆ ಹೇಳುತ್ತಾರೆ

ಡಾ.ಆದಿತ್ಯ ನಾರಾಯಣ ಭಟ್‌

” ಭಾರತದ ಪ್ರತಿ ಹಳ್ಳಿಯೂ ಆರೋಗ್ಯ ಮತ್ತು ವಿದ್ಯೆಯಲ್ಲಿ ಪ್ರಗತಿ ಮತ್ತು ಸ್ವಾವಲಂಬನೆಯತ್ತ ಸಾಗಬೇಕೆಂಬುದು ಆಶಯ. ಮೂಲಭೂತ ತುರ್ತು ಚಿಕಿತ್ಸೆಗೆ ಹಳ್ಳಿಯ ಜನ ದೂರದ ಪಟ್ಟಣವನ್ನು ಅವಲಂಬಿಸುವಂತರಾಗಬಾರದು .ಇಲ್ಲಿ ಮುಖ್ಯವಾಗಿ ರೋಗಿಯ ಆರ್ಥಿಕ ಸಂಪನ್ಮೂಲ ಮತ್ತು ಧಾರಣಾ ಶಕ್ತಿ , ಮತ್ತು ಸಮಯದ ಉಳಿತಾಯ , ಮತ್ತು ಅವಶ್ಯಕತೆಯ ಲಭ್ಯತೆ ದೊರೆಯುವಂತಾಗಲು ಮತ್ತು ಅಗತ್ಯವುಳ್ಳ ರೋಗಿಗಳಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಹಳ್ಳಿಯತ್ತ ನನ್ನ ಒಲವು ಜಾಸ್ತಿ.”

ನಾನು ಕಲಿತದ್ದು ಬೆಳೆದದ್ದು ಹಳ್ಳಿಯ ಪರಿಸರದಲ್ಲಿ , ಹಳ್ಳಿಯ ಜನರ ನೋವು ಬವಣೆ ಇದನ್ನು ಕಣ್ಣಾರೆ ಕಂಡವನು ಮತ್ತು ಅನುಭವಿಸಿದವನು . ಆ ಕಾರಣದಿಂದ ನಾನು ಹಳ್ಳಿಗಳಲ್ಲಿ ಯಾವಾಗಲೂ ಸುಧೃಢ ಆರೋಗ್ಯ ಮತ್ತು ಚಿಕಿತ್ಸಾ ವ್ಯವಸ್ಥೆ ಇರಬೇಕು ಎಂದು ಪ್ರತಿ ಪಾದಿಸುವವನು. ವೈದ್ಯನಿಗೆ ವೃತ್ತಿಯೇ ಧರ್ಮ. ರೋಗಿಯನ್ನು ಗುಣಪಡಿಸುವುದಷ್ಟೇ ವೈದ್ಯರ ಕರ್ತವ್ಯ ಎಂಬುದಷ್ಟೇ ಧ್ಯೇಯ ವಾಕ್ಯ.

ವರದಿಯ ಪ್ರಕಾರ, ಸರಾಸರಿ ಗ್ರಾಮೀಣವಾಗಿ 6000 ಜನ ಸಂಖ್ಯೆಗೆ ಒಂದು ಆರೋಗ್ಯ ಕೇಂದ್ರ ಇರಬೇಕು. ಆದರೆ ಸರಾಸರಿ, ಒಂದು ಪಿಎಚ್‌ಸಿ ಮತ್ತು ಸಿಎಚ್‌ಸಿ  ಗ್ರಾಮೀಣ ಪ್ರದೇಶಗಳಲ್ಲಿ ಕ್ರಮವಾಗಿ 36,049 ಮತ್ತು 164,027 ಜನಸಂಖ್ಯೆಯ ಒತ್ತಡವನ್ನು ಒಳಗೊಂಡಿದೆ. ಒಂದು ವರದಿಯ ಪ್ರಕಾರ ಅಖಿಲ ಭಾರತ ಮಟ್ಟದಲ್ಲಿ, ಗ್ರಾಮೀಣ ಪಿಎಚ್‌ಸಿ ಗಳಲ್ಲಿ ಅಲೋಪತಿ ವೈದ್ಯರ ಒಟ್ಟು ಅವಶ್ಯಕತೆಯಲ್ಲಿ 3.1 ಶೇಕಡಾ ಕೊರತೆ ಇದೆ.

ಅಕ್ಟೊಬರ್ 2023 ರ ಪತ್ರಿಕಾ ವರದಿಯೊಂದರ ಯೊಂದರ ಪ್ರಕಾರ ಪದವಿ ಪಡೆದ ವೈದ್ಯರಿಗೆ ಇನ್ನು ಮುಂದೆ ಗ್ರಾಮೀಣ ಸೇವೆ ಕಡ್ಡಾಯವಲ್ಲ ಎಂದು ಘೋಷಿಸಿ ಸುಗ್ರೀವಾಜ್ಞೆ ಹೊರಡಿಸಲು ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿದೆ . ಇದರಿಂದ ಪದವಿ ಪಡೆದ ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ವೃತ್ತಿ ನಿರ್ವಹಿಸಲು ಉದಾಸೀನ ತೋರುತ್ತದೆ ಎಂದು ತಿಳಿದು ಬರುತ್ತದೆ .

ಇಂತಹ ಕಾಲಘಟ್ಟದಲ್ಲಿ ಗ್ರಾಮೀಣ ಭಾಗದ ಜನರ ಅವಶ್ಯಕತೆಗಳನ್ನು ಅವರ ಪ್ರದೇಶದಲ್ಲಿಯೇ ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡಿ , ಗ್ರಾಮೀಣ ಪ್ರದೇಶಗಳನ್ನು ಸುದೃಢವಾಗಿಸುವದರ ಮೂಲಕ ನಮ್ಮ ವೃತ್ತಿಯನ್ನೂ ಆರೋಗ್ಯಕರವಾಗಿ ನಿಭಾಯಿಸೋಣ ಎಂಬ ಸದಾಶಯ ನನ್ನದು ಎನ್ನುತ್ತಾರೆ ಡಾ.ಆದಿತ್ಯ ನಾರಾಯಣ ಭಟ್‌.

Young doctors are now showing more interest in opening clinics in rural areas. The most essential facility is related to health. Today’s young doctors are providing such a facility to villages and rural areas. Young doctors have opened clinics in many places.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಣ್ಣಿಲ್ಲದೇ ಅವಕಾಡೊ ಬೆಳೆ..! ಜೇನು ಸೇರಿಸಿದ ಕೃಷಿ ಈಗ ಹೊಸ ಟ್ರೆಂಡ್

2026 ರಲ್ಲಿ ಹೈಡ್ರೋಪೋನಿಕ್ ಅವಕಾಡೊ ಕೃಷಿ ಮತ್ತು ಜೇನು ಪರಾಗಸ್ಪರ್ಶದ ಸಂಯೋಜನೆ ಹೊಸ…

4 hours ago

ರೇಷ್ಮೆ ಗೂಡಿಗೆ 800 ರೂ.ವರೆಗೆ ಬೆಲೆ | ಚಾಮರಾಜನಗರದಲ್ಲಿ ರೈತರಿಗೆ ಲಾಭದಾಯಕ ಹಾದಿ

ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಗೂಡಿಗೆ ಕೆಜಿಗೆ 750ರಿಂದ 800 ರೂಪಾಯಿವರೆಗೆ ಬೆಲೆ ಸಿಗುತ್ತಿದೆ.…

5 hours ago

ಸ್ಥಳೀಯ ಚುನಾವಣೆಗಳಲ್ಲಿ ಇವಿಎಂಗೆ ಬ್ರೇಕ್ | ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಸಚಿವ ಸಂಪುಟ ಹಸಿರು ನಿಶಾನೆ

ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ…

5 hours ago

ಕೇಂದ್ರವು ಕೇರಳದ ರಬ್ಬರ್ ಕ್ಷೇತ್ರವನ್ನು ದುರ್ಬಲಗೊಳಿಸುತ್ತಿದೆ – ಆರೋಪ

ಕೇಂದ್ರ ಸರ್ಕಾರವು ರಾಜ್ಯದ ರಬ್ಬರ್ ಕೃಷಿಯನ್ನು ಈಶಾನ್ಯಕ್ಕೆ ಸ್ಥಳಾಂತರಿಸುವ ಮೂಲಕ ರಬ್ಬರ್ ಕ್ಷೇತ್ರವನ್ನು…

5 hours ago

ಅಡಿಕೆ ಮಾರುಕಟ್ಟೆ ಸಮೀಕರಣ : ಬೆಲೆ ನಿರ್ಧಾರದ ಹಿಂದಿನ ಅರ್ಥಶಾಸ್ತ್ರ ಮತ್ತು ಮನೋವಿಜ್ಞಾನ

ಅಡಿಕೆ ಮಾರುಕಟ್ಟೆ ಎಂದರೆ ಕೇವಲ ಕೃಷಿ ಉತ್ಪನ್ನಗಳ ವಿನಿಮಯ ಕೇಂದ್ರವಲ್ಲ; ಅದೊಂದು ಸಂಕೀರ್ಣವಾದ…

13 hours ago

ಅಡಿಕೆ ಕಳ್ಳಸಾಗಣೆ ಜಾಲಕ್ಕೆ ಮಿಝೋರಂ ಸರ್ಕಾರದ ಬಿಗಿ ಹಿಡಿತ – ಅಡಿಕೆ ಮಾರುಕಟ್ಟೆ ಚೇತರಿಕೆ ಸಾಧ್ಯತೆ

ಮಿಝೋರಂ ಸರ್ಕಾರವು ಅಡಿಕೆ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ. ಯಾವುದೇ…

14 hours ago