ಅಡಿಕೆ ಮರದ ಸೋಫಾ ಸೆಟ್‌ | ಹಳ್ಳಿ ಸೊಗಡಿನ ಮನೆಗೆ ಅಂದದ ದೇಸಿ ಲುಕ್‌ | ಅಡಿಕೆ ಮೌಲ್ಯವರ್ಧನೆಗೆ ಇನ್ನೊಂದು ದಾರಿ | ಸುಳ್ಯದ ಯುವಕನ ಹೊಸ ಐಡಿಯಾ |

November 18, 2023
10:22 PM

ಅಡಿಕೆ… ಕರಾವಳಿ ಹಾಗೂ ಮಲೆನಾಡಿನ ಕೃಷಿಕರ ಜೀವನಾಡಿ. ಆದರೆ ಇತ್ತೀಚಿನ ದಿನಗಳಲ್ಲಿ ಅಡಿಕೆಗೆ ಒಳ್ಳೆಯ ದರ ಇದ್ದರೂ ರೋಗಬಾಧೆ, ಪ್ರಾಕೃತಿಕ ವಿಕೋಪ, ಇತರೆ ಸವಾಲುಗಳನ್ನು ಎದುರಿಸಿ ರೈತರು ಬೆಳೆ ಬೆಳೆಯುತ್ತಿದ್ದಾರೆ. ಹಾಗಾಗಿ ಕೇವಲ ಅಡಿಕೆಗೆ ಮಾತ್ರ ನೆಚ್ಚಿಕೊಳ್ಳದೆ, ಅಡಿಕೆಗಳಿಂದ ಆಗುವ ಉಪಉತ್ಪನ್ನಗಳತ್ತ ಮನಸ್ಸು ಮಾಡುತ್ತಿದ್ದಾರೆ. ಅಡಿಕೆ ಚೊಗರಿನ ಬಣ್ಣ, ವಿವಿಧ ತಿನಿಸುಗಳು, ಅಡಿಕೆ ಟೀ, ಹಾಳೆ ತಟ್ಟೆ, ಅಡಿಕೆ ಸಿಪ್ಪೆಯಿಂದ ಬಟ್ಟೆ ತಯಾರಿ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಹೊಸತನ್ನು ಕಂಡು ಹಿಡಿದು ಅಡಿಕೆಗೆ ಮೌಲ್ಯವರ್ಧನೆ ಮಾಡುವತ್ತ ಕೃಷಿಕರು ಮನಸ್ಸು ಮಾಡುತ್ತಿದ್ದಾರೆ.ಇದೀಗ ಅಡಿಕೆ ಮರ ಸೋಫಾ ಇನ್ನೊಂದು ಸೇರ್ಪಡೆಯಾಗಿದೆ.

ಕರಾವಳಿ, ಮಲೆನಾಡಿನಲ್ಲಿ ಇತ್ತೀಚೆಗೆ ಹಳದಿ ರೋಗ, ಎಲೆ ಚುಕ್ಕಿ ರೋಗ  ಕೃಷಿಕರನ್ನು ಕಾಡುತ್ತಿದೆ. ಅದೆಷ್ಟೋ ಮಂದಿ ಮರಗಳನ್ನು ಕಡಿದ್ದು ದಲ್ಲಾಳಿಗಳಿಗೆ ಮಾರಿದ್ದೇ ಹೆಚ್ಚು..!, ಇನ್ನೂ ಕೆಲವರ ಮನೆಯ ಸ್ನಾನದ ಒಲೆ ಸೇರುವುದಕ್ಕೆ ಆದ್ಯತೆ..!. ಆದರೆ, ಅಡಿಕೆ ಮರಗಳನ್ನು ರೀಪು ಮಾಡಿ ಕೊಟ್ಟಿಗೆಗಳಿಗೆ, ಸಣ್ಣ ಸಣ್ಣ ಶೆಡ್‌ ಕಟ್ಟಲು ಉಪಯೋಗಿಸಲಾಗುತ್ತಿತ್ತು. ಅದರೊಂದಿಗೆ ತೆಂಗಿನ ಮರಗಳ ದಿಮ್ಮಿಗಳನ್ನು ಮನೆ , ಕೊಟ್ಟಿಗೆ ಕಟ್ಟಲು ಬಳಸುತ್ತಿದ್ದದ್ದು ಎಲ್ಲರಿಗೂ ತಿಳಿದೇ ಇದೆ. ಇಲ್ಲೊಬ್ಬ ಯುವಕ ಅದೇ ಮಾದರಿಯ ಕೆಲಸಕ್ಕೆ ಇಳಿದಿದ್ದಾರೆ. ಅಡಿಕೆ ಮರ ಹಾಗೂ ತೆಂಗಿನ ಮರದ ತುಂಡುಗಳನ್ನು ಬಳಸಿ ಪೀಠೋಪಕರಣ ಮಾಡಿ ಗಮನ ಸೆಳೆದಿದ್ದಾರೆ.

ಈ ಬಗ್ಗೆ ಹೆಚ್ಚಿನ ಅಡಿಕೆ ಕೃಷಿಕರಿಗೆ ಇಂತಹದ್ದೊಂದು ಉಪಾಯ ಹೊಳೆದಿದ್ದರೂ ಕೆಲಸಕ್ಕೆ ಇಳಿದಿಲ್ಲ. ಸುಳ್ಯ ತಾಲೂಕಿನ ಅರಂಬೂರಿನ ಕೃಷಿಕ ಕೃಷ್ಣ ಕಿರಣ್‌ ಭಾರಧ್ವಜ್ ಅವರಿಗೆ ಈ ಬಗ್ಗೆ ಉಪಾಯ ಹೊಳೆದಿದೆ, ಕಾರ್ಯರೂಪಕ್ಕೆ ಇಳಿದಿದ್ದಾರೆ. ಹಳದಿ ರೋಗ ಬಂದು ತೋಟದ ಅಡಿಕೆ ಮರಗಳನ್ನು ಕಡಿಯುವ ಸನ್ನಿವೇಶ ಬಂದಾಗ ಇವರಿಗೆ ಹೊಳೆದದ್ದು ಈ ಮರಗಳಿಂದ ನಾವು ಪೀಠೋಪಕರಣ ಯಾಕೆ ಮಾಡಬಾರದು ಎಂದು. ಹಾಗೆ ಊರ ತಳಿಯ 25-30 ವರ್ಷ ಹಳೆಯ ಅಡಿಕೆ ಮರದ ಬುಡದ ತುಂಡುಗಳನ್ನು ಆಯ್ಕೆ ಮಾಡಿ, ಅದನ್ನು ತುಂಡು ಮಾಡಿ, ಅದರ ಒಳ ತಿರುಳನ್ನು ತೆಗೆದು ಅದರಿಂದ ಪೀಠೋಪಕರಣ ಮಾಡುವ ಐಡಿಯಾ ಮಾಡಿದರು.

ಅಡಿಕೆ ಮರ ಗಟ್ಟಿ ಅನ್ನೋದು ಗೊತ್ತು. ಆದರೆ ಇದು ಗೆದ್ದಲು ಹಿಡಿದರೆ ಏನು ಮಾಡುವುದು ಅನ್ನೋ ಯೋಚನೆ ಬಂದಾಗ ಹಿರಿಯರು ಉಪಯೋಗಿಸುತ್ತತಿದ್ದ ಕ್ರಮವನ್ನು ಮಾಡಿದರು. ಅದನ್ನು 15 ರಿಂದ 20 ದಿನಗಳ ಕಾಲ ಉಪ್ಪು ನೀರಿನಲ್ಲಿ ಹಾಕಿ, ಮತ್ತೆ ಒಂದು ವಾರ ಸಾದಾ ನೀರಿನಲ್ಲಿ ಹಾಕಿ ಒಣಗಿಸಿದರು. ಈಗ ಮರ ಗಟ್ಟಿ ಮುಟ್ಟಾಯಿತು.

Advertisement

ನಂತರ ಇದರ ಕೆಲಸ ಮಾಡಲು ಮರದ ಕೆಲಸ ಮಾಡುವವರ ಹುಡುಕುವ ಸರದಿ. ಅವರ ಮಾಮೂಲು ಬಡಗಿಯವರನ್ನು ಸಂಪರ್ಕಿಸಿದಾಗ ಅಡಿಕೆ ಹಾಗೂ ತೆಂಗು ಮರ ಬಹಳ ಗಟ್ಟಿ, ಇದನ್ನು ಪಾಲಿಶ್‌ ಮಾಡುವುದು ಹಾಕುವುದು ಕಷ್ಟ. ಹಾಗೆ ಮರದ ಮಿಲ್‌ ಗೆ ತೆಗೆದುಕೊಂಡು ಹೋದರೆ ಇದರ ಕೆಲಸ ಮಾಡಿದ್ರೆ ನಮ್ಮ ಬ್ಲೇಡ್‌ ಸಮಸ್ಯೆಯಾದೀತು ಎಂಬ ಉತ್ತರ ಬಂತು. ಹಾಗಾಗಿ ತಾವೇ ಒಂದು ಯಂತ್ರ ಖರೀದಿಸಿ ಕೆಲಸ ಆರಂಭವಾಯ್ತು. ಉಳಿದ ಮರಗಳ ಸೋಫಾ ಸೆಟ್‌ ಗಿಂತ ಅರ್ಧಕ್ಕರ್ಧ ಕಡಿಮೆ ಖರ್ಚಿನಲ್ಲಿ ಸೋಫಾ ತಯಾರಾಯ್ತು. ಸೋಫಾದ ಕಾಲು, ಫ್ರೇಮ್‌ ಗಳನ್ನು ತೆಂಗಿನ ಮರದ ತುಂಡುಗಳಿಂದ ಮಾಡಿದ್ರೆ, ಉಳಿದ ರೀಪುಗಳನ್ನು ಅಡಿಕೆ ಮರದಿಂದ ಮಾಡಲಾಯಿತು. ಲೇಬರ್‌ ಕೆಲಸ ಆರಂಭವಾದ ಕಾರಣ ಕೊಂಚ ಜಾಸ್ತಿ ಆದ್ರು ಇದು ಓಕೆ ಅನ್ನಿಸ್ತು ಅವರಿಗೆ. ಉಳಿದ ಮರಗಳ ಸೋಫಾ ಸೆಟ್ಟಿಗೆ ಹೋಲಿಸಿದ್ರೆ ಬಹಳ ಖರ್ಚು ಕಡಿಮೆ. ಹಾಗೆ ನಿಮ್ಮ ಮನೆಗೆ ಚಂದದ ದೇಸಿ ಲುಕ್‌ ನೀಡುತ್ತದೆ.

ಮುಂದಿನ ದಿನಗಳಲ್ಲಿ ಇದನ್ನೇ ಉದ್ಯಮವಾಗಿಸುವ ಆಲೋಚನೆಯನ್ನು ಕಿರಣ್‌ ಕುಮಾರ್‌ ಹೊಂದಿದ್ದಾರೆ. ಸದ್ಯಕ್ಕೆ ಇನ್ನಷ್ಟು ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿದ್ದಾರೆ. ಈಗಾಗಲೇ ಬಹಳ ಜನ ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ ಸೋಫಾ ಸೆಟ್‌ ಮಾತ್ರವಲ್ಲ ವಾಲ್‌ ಪಾರ್ಟಿಷನರ್‌ ಕೂಡ ಮಾಡಿದ್ದಾರೆ. ಮುಂದೆ ಟಿಫಾಯ, ಮಂಚ, ದಿವಾನ್‌, ಡೈನಿಂಗ್‌ ಟೇಬಲ್‌ ಎಲ್ಲವೂ ಮಾಡುವ ಆಲೋಚನೆಯಿದೆ ಎನ್ನುತ್ತಾರೆ ಕಿರಣ್‌ ಭಾರಧ್ವಾಜ್.

 

Advertisement

ಇನ್ನು ಮುಂದೆ, ಅಡಿಕೆ ಕೃಷಿಕರ ಮನೆಯ ಪೀಠೋಪಕರಣಗಳು ಅಡಿಕೆ ಮರದಿಂದಲೇ ಆಗಲಿ, ರಾಜ್ಯಕ್ಕೂ ಬಳಕೆಯಾಗುವುದರ ಜೊತೆಗೆ ಅಡಿಕೆಯ ಹೊಸ ಉತ್ಪನ್ನಗಳೂ ತಯಾರಾಗಲಿ.  ಈ ಮೂಲಕ ಪರಿಸರ ಸ್ನೇಹಿ ಬದುಕು ಆರಂಭವಾಗಲಿ.

Young man from Sullia made a sofa using Arecanut wood. Arecanut is now being used towards alternative uses.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಚಿತ್ರಕಲಾ ಪಟ್ರಮೆ

ಪತ್ರಕರ್ತರು, ಹವ್ಯಾಸಿ ಬರಹಗಾರರು

ಇದನ್ನೂ ಓದಿ

ಹವಾಮಾನ ವರದಿ | 11-01-2026| ಇಂದು ಕೆಲವೆಡೆ ಮಳೆ ನಿರೀಕ್ಷೆ | ಎಲ್ಲೆಲ್ಲಿ ಮಳೆ ಇರಬಹುದು..?
January 11, 2026
2:11 PM
by: ಸಾಯಿಶೇಖರ್ ಕರಿಕಳ
ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ
January 11, 2026
9:58 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ
January 11, 2026
8:30 AM
by: ದ ರೂರಲ್ ಮಿರರ್.ಕಾಂ
ಬಾಯಿಯ ಕ್ಯಾನ್ಸರ್ ಭೀತಿ ಕಡಿಮೆ ಮಾಡಲಿದೆಯೇ ‘ಇ-ಬೀಮ್’ ತಂತ್ರಜ್ಞಾನ? ಅಡಿಕೆ ಸಂಸ್ಕರಣೆಯಲ್ಲಿ ಹೊಸ ಮನ್ವಂತರ!
January 11, 2026
7:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror