ವಿದೇಶದಿಂದ ಹಳ್ಳಿಗೆ ಬಂದು ಕೃಷಿ ಸಾಧನೆ ಮಾಡಿದ ಯುವಕ

June 15, 2025
11:17 AM
ಕೃಷಿಯನ್ನು ನಂಬಿ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು ಎಂಬುದನ್ನು ರೈತ  ಯೋಗೇಶ್ ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಯುವ ಸಮುದಾಯಕ್ಕೂ  ಮಾದರಿಯಾಗಿದ್ದಾರೆ.

ಹಳ್ಳಿ ಎಂದರೆ ಈಗ ವಿದ್ಯಾವಂತರು ಬಯಸುವ ಊರು. ಕೃಷಿ ಎಂದರೆ ಯುವಕರು ಬಯಸುವ ಕ್ಷೇತ್ರವಾಗಿ ಬದಲಾಗುತ್ತಿದೆ. ಇದಕ್ಕೊಬ್ಬ ಉದಾಹರಣೆ ಚಾಮರಾಜನಗರ ಜಿಲ್ಲೆಯ ವಿ.ಸಿ ಹೊಸೂರು ಗ್ರಾಮದ ಯುವಕ ಯೋಗೇಶ್.‌ ವಿದೇಶದಿಂದ ಹಿಂದಿರುಗಿ ತನ್ನೂರಲ್ಲಿ ಕೃಷಿಯಲ್ಲಿ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ವಿದ್ಯಾಭ್ಯಾಸ ಮುಗಿಸಿ ವಿದೇಶಕ್ಕೆ ತೆರಳಿ  ಸಂಬಳ ಪಡೆಯುತ್ತಿದ್ದ   ಚಾಮರಾಜನಗರ ಜಿಲ್ಲೆಯ ಯೋಗೇಶ್  ಮರಳಿ  ತಾಯ್ನಾಡಿಗೆ  ಆಗಮಿಸಿ, ಹಿರಿಯರು ಅನುಸರಿಸಿದ್ದ ಕೃಷಿಯನ್ನೇ ತಮ್ಮ ಮೂಲ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸುವ ಮೂಲಕ  ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಯೋಗೇಶ್ ತಮ್ಮ ಜಮೀನಿನಲ್ಲಿ ವಿವಿಧ ಬಗೆಯ ಹಣ್ಣು-ತರಕಾರಿ,  ಬಾಳೆ, ಮಾವು, ನಿಂಬೆ, ಪಪ್ಪಾಯ, ಸೀತಾಫಲ, ಸೀಬೆ, ವಿಶೇಷವಾಗಿ ಸೇಬು, ಡ್ಯಾಗನ್ ಫ್ರೂಟ್ಸ್ ಸೇರಿದಂತೆ ತರಾವರಿ ಹಣ್ಣುಗಳನ್ನು ಬೆಳೆದಿದ್ದಾರೆ. ಇದರೊಂದಿಗೆ ವಿವಿಧ ತರಕಾರಿ ಹಾಗೂ ಸೊಪ್ಪಿನ ಜೊತೆಗೆ  ಜೇನುಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಸಾವಯವ ಮತ್ತು ನೈಸರ್ಗಿಕ ಬೇಸಾಯದ ಮಾದರಿ ಅಳವಡಿಸಿಕೊಂಡಿದ್ದು ರಾಸಾಯನಿಕ ಮುಕ್ತ ಗೊಬ್ಬರವನ್ನು ತಮ್ಮ ಕೃಷಿ ಪದ್ಧತಿಯಲ್ಲಿ ಬಳಕೆ ಮಾಡುತ್ತಿದ್ದು. ತೋಟದಲ್ಲೆ ನೈಸರ್ಗಿಕವಾಗಿ ದೊರಕುವ ಉತ್ಪನ್ನಗಳನ್ನು ಬಳಸಿಕೊಂಡು ಜೀವಾಮೃತ, ಪಂಚಗವ್ಯ, ಎರೆಹುಳು ಗೊಬ್ಬರ ಸೇರಿದಂತೆ ವಿವಿಧ ಮಾದರಿಯ ಸಾವಯವ ಗೊಬ್ಬರ ತಯಾರಿಸಿ ಕೃಷಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.  ಇದರ ಜೊತೆಗೆ  ಹೈನುಗಾರಿಕೆಯಲ್ಲಿಯೂ  ನಿರತರಾಗಿದ್ದಾರೆ. ಕೃಷಿಯನ್ನು ನಂಬಿ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು ಎಂಬುದನ್ನು ರೈತ  ಯೋಗೇಶ್ ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಯುವ ಸಮುದಾಯಕ್ಕೂ  ಮಾದರಿಯಾಗಿದ್ದಾರೆ.

ಊರಿನ ಸೆಳೆತದಿಂದ ತಮ್ಮೂರಿಗೆ ಹಿಂತಿರುಗಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಜಮೀನಿನಲ್ಲಿ ವಿದೇಶಿ ತಳಿಯ ಹಣ್ಣುಗಳು, ಔಷಧ ಸಸ್ಯಗಳನ್ನು ಬೆಳೆಯುವ  ಜೊತೆಗೆ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಲಾಗಿದೆ.  ಮಾರುಕಟ್ಟೆಯ ಮೌಲ್ಯವರ್ಧನೆ  ಅರಿತು ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದೇನೆ ಎನ್ನುತ್ತಾರೆ ಯುವ ರೈತ ಯೋಗೇಶ್. 

ಎರೆಜಲ ಹಾಗೂ ಎರೆಹುಳುವಿನ ಗೊಬ್ಬರ ತಯಾರಿ, ಸುಸ್ಥಿರ ಬೇಸಾಯ ಪದ್ಧತಿ ಅಳವಡಿಕೆ ಮಾಡಿಕೊಂಡಿರುವುದರಿಂದ  ಬಾಳೆ ಉತ್ತಮ ಫಸಲು ನೀಡಿದೆ ಎನ್ನುತ್ತಾರೆ  ರೈತ ಗೂಳಿಪುರ ಬಿ.ನಂದೀಶ್.

Advertisement

ಯೋಗೇಶ್ ಅವರ ತೋಟದಲ್ಲಿ ಸುಸ್ಥಿರ ಬೇಸಾಯ  ಪದ್ಧತಿ ಅಳವಡಿಸಿಕೊಂಡಿದ್ದಾರೆ. ಜೊತೆಗೆ ಭೂಮಿಯ ಫಲವತ್ತತೆ ಕಾಪಾಡಲು ಹಲವು  ಕ್ರಮಗಳನ್ನು ಅನುಸರಿಸಿದ್ದಾರೆ ಎಂದು ಹೇಳುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ವಿದ್ಯಾರ್ಥಿ ಡಿ.ಜೆ.ರಕ್ಷಿತಾ ಹೇಳಿದರೆ, ರೈತ ಯೋಗೇಶ್ ಅವರ ಸಾವಯವ ಕೃಷಿಯಲ್ಲಿನ  ಸಾಧನೆ  ರೈತ ವಿದ್ಯಾರ್ಥಿಗಳಿಗೆ  ಮಾದರಿಯಾಗಿದೆ ಎಂದು ಹೇಳುತ್ತಾರೆ ವಿದ್ಯಾರ್ಥಿ ಅಂಕಿತ್.

ರೈತ ಯೋಗೇಶ್  ವಿಜ್ಞಾನಿಗಳ ಸಲಹೆ ಪಡೆದು ಸಾಂಪ್ರದಾಯಿಕ ಸುಸ್ಥಿರ ಸಮಗ್ರ ಬೇಸಾಯ ಪದ್ಧತಿ  ಅಳವಡಿಸಿಕೊಂಡಿದ್ದಾರೆ.  ಯೋಗೇಶ್ ಅವರಿಂದ  ಎರೆಜಲ, ಪಂಚಗವ್ಯವನ್ನು ವಿಶ್ವವಿದ್ಯಾಲಯವು ಖರೀದಿಸಿ ಇತರೆ ರೈತರಿಗೆ ಪೂರೈಕೆ  ಮಾಡುತ್ತಿದ್ದೇವೆ ಎಂದು  ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಯೋಗೇಶ್ ಹೇಳುತ್ತಾರೆ.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಧಾರಣೆ ಏರಿಕೆ | ಒಮ್ಮೆಲೇ ಬೇಡಿಕೆ ಹೆಚ್ಚಳದಿಂದ ಮಾರುಕಟ್ಟೆಯಲ್ಲಿ ಅಸ್ಥಿರತೆ – ಭವಿಷ್ಯದಲ್ಲಿ ಗುಣಮಟ್ಟದ ಅಡಿಕೆಗೆ ಬೇಡಿಕೆ ನಿರೀಕ್ಷೆ
January 8, 2026
7:16 AM
by: ದ ರೂರಲ್ ಮಿರರ್.ಕಾಂ
ಚಿಕಿತ್ಸೆ ಮುಗಿದರೂ ಕ್ಯಾನ್ಸರ್ ಅಪಾಯ ಏಕೆ ಮುಗಿಯುವುದಿಲ್ಲ?
January 7, 2026
11:10 PM
by: ದ ರೂರಲ್ ಮಿರರ್.ಕಾಂ
‌ ಭೂಮಿಗೆ ಬಿದ್ದ ಪ್ಲಾಸ್ಟಿಕ್ ಕರಗುವಂತೆ ಮಾಡಬಹುದು…!, ಇದು ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರವೇ?
January 7, 2026
10:43 PM
by: ದ ರೂರಲ್ ಮಿರರ್.ಕಾಂ
2026 ರಲ್ಲಿ ಕೃಷಿ ಕ್ಷೇತ್ರ ಸ್ಥಿರತೆ , ಆದರೆ ಅಸಮಾನತೆ ಮುಂದುವರಿಕೆ
January 7, 2026
10:14 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror