ಅಪಘಾತದಲ್ಲಿ ಯುವಕನ ಬ್ರೈನ್ ಡೆಡ್ | ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು |

Advertisement
Advertisement

ಬೆಂಗಳೂರು ಗ್ರಾಮಾಂತರ ಗಂಗೊಂಡನ ಹಳ್ಳಿಯ ಯುವಕ ದೀಪಕ್ ಎಂಬವರು ಸೆ.25 ರಂದು ಬೆಂಗಳೂರಿನ ನೈಸ್ ರಸ್ತೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದೀಪಕ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಅವರ ಮೆದುಳು ನಿಷ್ಕ್ರಿಯಗೊಂಡಿದೆ (Brain dead) ಎಂದು ವೈದ್ಯರು ತಿಳಿಸಿದ್ದರು. ಹೀಗಾಗಿ  ಆತನ ಅಂಗಾಂಗ ದಾನ ಮಾಡುವ ಮೂಲಕ  ಪೋಷಕರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

Advertisement

Advertisement
Advertisement

26 ವರ್ಷದ ಯುವಕ ದೀಪಕ್  ಚಲಾಯಿಸುತ್ತಿದ್ದ ಕಾರು ನಿಂತಿದ್ದ ಕ್ಯಾಂಟರ್​ ಗೆ ಹಿಂಬದಿಯಿಂದ  ಡಿಕ್ಕಿ ಹೊಡೆದಿತ್ತು. ಈ ದುರಂತದಲ್ಲಿ ದೀಪಕ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಚಿಕಿತ್ಸೆ ಬಳಿಕವೂ ದೀಪಕ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆ ಆರ್.ಆರ್. ನಗರದಲ್ಲಿರುವ ಸ್ಪರ್ಷ ಆಸ್ಪತ್ರೆ ವೈದ್ಯರು ಬ್ರೈನ್ ಡೆಡ್ ಎಂದು ಘೋಷಣೆ ಮಾಡಿದ್ದರು. ಮೆದುಳು ನಿಷ್ಕ್ರಿಯ ಹಿನ್ನೆಲೆ ಕುಟುಂಬಸ್ಥರು ಆತನ ಅಂಗಾಂಗಳನ್ನು ದಾನ ಮಾಡಿದ್ದಾರೆ. ಮೃತನ ಕಿಡ್ನಿ, ಕಣ್ಣು,  ಸೇರಿದಂತೆ ಹಲವು ಅಂಗಾಂಗಳನ್ನು ದಾನ ಮಾಡಿದ್ದಾರೆ.

ಯುವಕ ದೀಪಕ್ ಅವರ ದೇಹದಿಂದ ಯಕೃತ್ತು, ಕಿಡ್ನಿ, ಹೃದಯದ ಕವಾಟ, ಕಾರ್ನಿಯಾ ಹಾಗೂ ಚರ್ಮವನ್ನು ಕಸಿ ಮಾಡಲಾಗಿದ್ದು, ಅನೇಕರಿಗೆ ಜೀವದಾನ ನೀಡಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್‌ ತಮ್ಮ ಟ್ವಿಟ್ಟರ್‌ ನಲ್ಲಿ ಹಾಕಿದ್ದಾರೆ.

Advertisement
Advertisement

 

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಅಪಘಾತದಲ್ಲಿ ಯುವಕನ ಬ್ರೈನ್ ಡೆಡ್ | ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು |"

Leave a comment

Your email address will not be published.


*