ಹಿಮಾಚಲ ಪ್ರದೇಶ ಕ್ಕೆ ಪ್ರವಾಸಕ್ಕೆ ತೆರಳಿದ್ದ ಮಂಜೇಶ್ವರ ನಿವಾಸಿ ಹಿಮಪಾತದ ಸಂದರ್ಭ ಮಂಜುಗಡ್ಡೆಯಲ್ಲಿ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. ಮಂಜೇಶ್ವರ ಮಜೀರ್ ಪಳ್ಳದ ಸಿನಾನ್ (28) ಮೃತ ಪಟ್ಟ ಯುವಕ. ತಿಂಗಳ ಹಿಂದೆ ಪ್ರವಾಸಕ್ಕೆಂದು ತೆರಳಿದ್ದರು.
ಕತ್ತರ್ ನಲ್ಲಿ ಉದ್ಯೋಗ ದಲ್ಲಿದ್ದ ಸಿನಾನ್ ಆರು ತಿಂಗಳ ಹಿಂದೆ ಊರಿಗೆ ಬಂದಿದ್ದರು. ಎರಡು ವಾರಗಳ ಹಿಂದೆ ಮನೆಯವರು ಸಂಪರ್ಕಿಸಿದಾಗ ಮೊಬೈಲ್ ಸಿಚ್ಡ್ ಆಫ್ ಆಗಿತ್ತು ಎನ್ನಲಾಗಿದೆ. ದೆಹಲಿಗೆ ತೆರಳಿ ಅಲ್ಲಿಂದ ಹಿಮಾಚಲ ಪ್ರದೇಶಕ್ಕೆ ತೆರಳಿರುವುದಾಗಿ ಮಾಹಿತಿ ಲಭಿಸಿದೆ.ಸೋಮವಾರ ಬೆಳಿಗ್ಗೆ ಹಿಮಾಚಲ ಪ್ರದೇಶ ಪೊಲೀಸರು ಸಿನಾನ್ ಮಂಜುಗಡ್ಡೆಯಲ್ಲಿ ಸಿಲುಕಿ ಮೃತ ಪಟ್ಟಿ ರುವುದಾಗಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel