Advertisement
MIRROR FOCUS

ಕಾಲೇಜು ವಿದ್ಯಾರ್ಥಿಯೂ ಹೌದು-ಜನಪ್ರತಿನಿಧಿಯೂ ಹೌದು | ಈಶ್ವರಮಂಗಲದ ಈ ಯುವ ಜನಪ್ರತಿನಿಧಿ ಜಿಲ್ಲೆಗೆ ಮಾದರಿ ಏಕೆ ಗೊತ್ತಾ ? |

Share

ಈ ಯುವ ಜನಪ್ರತಿನಿಧಿಯ ಸಾಹಸ ಇಡೀ ಜಿಲ್ಲೆಗೆ ಮಾದರಿ. ಜನಪ್ರತಿನಿಧಿ ಮಾತ್ರವಲ್ಲ, ಕಾಲೇಜು ವಿದ್ಯಾರ್ಥಿಯೂ ಹೌದು, ಪಕ್ಷದ ಜವಾಬ್ದಾರಿಯೂ ಇದೆ…!. ಈ ಯುವಕನ ವಯಸ್ಸು ಕೇವಲ 23…!. ಒಬ್ಬ ಗ್ರಾಮ ಪಂಚಾಯತ್‌ ಸದಸ್ಯ ಏನು ಮಾಡಬಹುದು ಹಾಗೂ ಏನು ಮಾಡಬೇಕು ಎನ್ನುವುದಕ್ಕೂ ಈ ಯುವಕ ಮಾದರಿ. ಅಂದ ಹಾಗೆ ಅತೀ ಕಡಿಮೆ ವಯಸ್ಸಿನ ಈ ಯುವನಾಯಕನ ಹೆಸರು ಚಂದ್ರಹಾಸ ಈಶ್ವರಮಂಗಲ.

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್‌ ಸದಸ್ಯ ಚಂದ್ರಹಾಸ ಈಶ್ವರಮಂಗಲ. ಅತೀ ಕಡಿಮೆ ವಯಸ್ಸಿನ ಉತ್ಸಾಹಿ ಜನಪ್ರತಿನಿಧಿ. ಕಾನೂನು ಪದವಿ ವ್ಯಾಸಾಂಗ ಮಾಡುತ್ತಿರುವ ಇವರು ಈಗ ಬಿಜೆಪಿ ಯುವಮೋರ್ಚಾ ಗ್ರಾಮಾಂತರ ಮಂಡಲ ಕಾರ್ಯದರ್ಶಿಯೂ ಹೌದು. ಅಷ್ಟೇ ಅಲ್ಲ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ತರುಣ. ಕೊರೋನಾ ಲಾಕ್ಡೌನ್‌ ಸಮಯದಲ್ಲಿ ಸಹೋದರನ ಜೊತೆ ತಾವೇ ಅಂಗಡಿ ತೆರೆದು ಹಸಿ ಮೀನು ವ್ಯಾಪಾರನ್ನೂ ಆರಂಭಿಸಿದ ಉದ್ಯಮಿಯೂ ಹೌದು. ಕಳೆದ ಬಾರಿಯ ಗ್ರಾ ಪಂ ಚುನಾವಣೆಯ ಸಮಯದಲ್ಲಿ ಅವರ ವಾರ್ಡ್‌ನಲ್ಲಿ ಗ್ರಾಪಂ ಚುನಾವಣೆಗೆ ಸ್ಫರ್ಧಿಸಿ ಒಟ್ಟು 434 ಮತಗಳಲ್ಲಿ  410  ಮತಗಳನ್ನು ಪಡೆದು ವಿಜೇತರಾದ ಯುವ ಮುಂದಾಳು. ಸುಮಾರು ಶೇ.94 ರಷ್ಟು ಮತ ಪಡೆದಿದ್ದರು. ಇಷ್ಟಕ್ಕೂ ಈಗ ಇವರು ಗುರುತಿಸಿಕೊಂಡದ್ದು ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲಪಿಸುವ ಕಾರಣದಿಂದ.

 

ಕೇಂದ್ರ ಸರಕಾರದ, ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳನ್ನು, ಕನಸುಗಳನ್ನು ಗ್ರಾಮಮಟ್ಟದಲ್ಲಿ, ಅವರ ವಾರ್ಡ್‌ ಚಿಮಿಣಿಗುಡ್ಡೆಯಲ್ಲಿ  ಜಾರಿ ಮಾಡುತ್ತಿರುವ ಕಾರಣಕ್ಕೆ ಈಗ ಸುದ್ದಿಯಾಗಿದ್ದಾರೆ. ಚುನಾವಣೆಗೆ ಸ್ಫರ್ಧೆಗೂ ಮುನ್ನವೇ ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದ ಚಂದ್ರಹಾಸ್‌ ಕೇಂದ್ರ ಸರಕಾರದ, ರಾಜ್ಯದ ಸರಕಾರದ ಯೋಜನೆಗಳಾದ ಕಿಸಾನ್‌ ಸಮ್ಮಾನ್‌, ವೃದ್ಧಾಪ್ಯ ವೇತನಗಳು , ಸಂಧ್ಯಾಸುರಕ್ಷಾ, ವಿಧವಾ ವೇತನಾ, ಮನಸ್ವಿನಿ ಯೋಜನೆ, ಗ್ಯಾಸ್‌ ಸಂಪರ್ಕ, ಉದ್ಯೋಗ ಖಾತ್ರಿ ಯೋಜನೆ …ಇತ್ಯಾದಿ ಯೋಜನೆಗಳನ್ನು  ತಮ್ಮ ವಾರ್ಡ್‌ ನಲ್ಲಿ ನ ಮನೆಗಳನ್ನು  ಹುಡುಕಿ ಈ ಯೋಜನೆ ಲಭ್ಯವಾಗದ ಕುಟುಂಬಗಳಿಗೆ ತಲುಪಿಸುತ್ತಿದ್ದರು. ಜಾತಿ, ಧರ್ಮ ಯಾವುದನ್ನೂ ನೋಡದೆ ಮಾನವೀಯ ನೆಲೆಯಲ್ಲಿ  ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಯೋಜನೆಗಳಿಗೆ ಅರ್ಹವಾದ ಕುಟುಂಬ ಹುಡುಕಿ ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಸಿ, ದಾಖಲೆ ತಯಾರು ಮಾಡಿಸಿ, ಅಧಿಕಾರಿಗಳನ್ನು  ಮಾತನಾಡಿಸಿ ಸರಕಾರದ ಯೋಜನೆ ಬರುವಂತೆ ಮಾಡಿದ್ದರು.

 

ಚುನಾವಣೆಗಾಗಿ ಈ ಸಾಮಾಜಿಕ ಕೆಲಸ ಮಾಡುತ್ತಿರಲಿಲ್ಲ, ಕಾಲೇಜು ಜೊತೆಗೆ ಈ ಕೆಲಸವನ್ನು ಸಾಮಾಜಿಕ ಕಳಕಳಿಯಿಂದ ಮಾಡುತ್ತಲೇ ಇದ್ದರು. ಅನಿವಾರ್ಯವಾಗಿ ಚುನಾವಣೆಗೆ ಸ್ಫರ್ಧೆ ಮಾಡಿದರು. ಆಗ ಅಧಿಕ ಮತಗಳಿಂದ ಹಾಗೂ ಅತೀ ಕಿರಿಯ ಸದಸ್ಯನಾಗಿ ವಿಜೇತನಾದರು.ಬಳಿಕ ಸಮಾಜ ಸೇವೆಯೆ ಹುಮ್ಮಸ್ಸು ಹೆಚ್ಚಾಯಿತು.  ಪ್ರತೀ ಮನೆ ಮನೆಗೂ ಸರಕಾರದ ಯೋಜನೆಗಳನ್ನು ತಲುಪಿಸಬೇಕು ಎಂದು ಈಗ ಕೆಲಸ ಮಾಡುತ್ತಿದ್ದಾರೆ. ಅದರ ಜೊತೆಗೆ ಕಾಲೇಜಿಗೂ ಹೋಗುತ್ತಾರೆ. ಈಗಾಗಲೇ ತಮ್ಮ ವಾರ್ಡ್‌ ಹಾಗೂ ಆಸುಪಾಸಿನ  ಸುಮಾರು 100 ಕ್ಕಿಂತಲೂ ಜನರಿಗೆ ಸಂಧ್ಯಾ ಸುರಕ್ಷಾ ಯೋಜನೆ ತಲುಪಿಸಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ಅನುದಾನಕ್ಕೆ ಒದಗಿಸಿಕೊಡಲು ಪ್ರಯತ್ನ ಮಾಡಿದ್ದಾರೆ.ಈಚೆಗೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಚಿಮಿಣಿಗುಡ್ಡೆ ಎಂಬಲ್ಲಿ ತೀವ್ರ ಅನಾರೋಗ್ಯದಿಂದ ಅಂಗವೈಕಲ್ಯ ಹೊಂದಿದ್ದ ಉದಯ ಎಂಬವರಿಗೆ ವಿಕಲಚೇತನ‌ ಕಾರ್ಡು ಮಾಡಿಸಿ ಮಾಸಿಕ ವೇತನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಕಂದಾಯ ಇಲಾಖೆಯ ವತಿಯಿಂದ ನಡೆಯುವ ಬೆಳೆ ಸಮೀಕ್ಷೆ ಕಾರ್ಯದಲ್ಲೂ ಚಂದ್ರಹಾಸ ತೊಡಗಿಸಿಕೊಂಡಿದ್ದ ಕಾರಣ ಅವರ ವಾರ್ಡ್‌ ಪ್ರತೀ ಮನೆ ಸಂಪರ್ಕ ಹಾಗೂ ಅಲ್ಲಿನ ಸಮಸ್ಯೆಗಳ ಬಗ್ಗೆ ಅರಿವು ಇತ್ತು. ಹೀಗಾಗಿ ಇದನ್ನೇ ಬಳಸಿಕೊಂಡು ಸಾಮಾಜಿಕ ಕೆಲಸಗಳಲ್ಲಿ  ತೊಡಗಿಸಿಕೊಂಡರು.

ಒಬ್ಬ ಗ್ರಾಮ ಪಂಚಾಯತ್‌ ಸದಸ್ಯ ತಮ್ಮ ವಾರ್ಡ್‌ ನಲ್ಲಿ  ಹೇಗೆ ಕೆಲಸ ಮಾಡಬಹುದು  ಹಾಗೂ ಸಿಕ್ಕಿದ ಅವಕಾಶಗಳನ್ನು ವಾರ್ಡ್‌ ನ ಅಭಿವೃದ್ಧಿ ಕಾರ್ಯ, ಜನರಿಗೆ ಸಹಾಯ ಮಾಡಲು ಹೇಗೆ ಬಳಕೆ ಮಾಡಬಹುದು ಎನ್ನುವುದಕ್ಕೂ ಈ ಯುವ ಜನಪ್ರತಿನಿಧಿ ಮಾದರಿಯಾಗಿದ್ದಾರೆ.ಎಲ್ಲೆಡೆಯೂ ಇಂತಹ ಜನಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು ಬೆಳೆದರೆ ಗ್ರಾಮೀಣ ಭಾರತವೂ ಬಹುಬೇಗನೆ ಬೆಳಗಲಿದೆ.

ಸರಕಾರದಿಂದ ಲಭ್ಯವಾಗುವ ಯೋಜನೆಯಿಂದ ತನ್ನ ವಾರ್ಡ್‌ನ ಒಂದೇ ಒಂದು ಕುಟುಂಬವೂ ವಂಚಿತರಾಗಬಾರದು ಎಂದು ಮನೆ‌ ಮನೆಗೆ ಭೇಟಿ ನೀಡಿ ಸಹಾಯ ಮಾಡುತ್ತಿದ್ದೇನೆ ಎನ್ನುತ್ತಾರೆ ಚಂದ್ರಹಾಸ ಈಶ್ವರಮಂಗಲ
ಚಂದ್ರಹಾಸ ಈಶ್ವರಮಂಗಲ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

13 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

14 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

14 hours ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

17 hours ago

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

1 day ago