ಗಾಂಧಿಜಯಂತಿ ಪ್ರಯುಕ್ತ ಸ್ವಚ್ಛತಾ ಅಭಿಯಾನ ಹಾಗೂ ಜಾಗೃತಿ ಅಭಿಯಾನ ಗುತ್ತಿಗಾರಿನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭ ಕಮಿಲದಿಂದ ಗುತ್ತಿಗಾರುವರೆಗೆ ಸ್ವಚ್ಛತಾ ಅಭಿಯಾನದಲ್ಲಿ ಕಮಿಲದ ಬಾಂಧವ್ಯ ಗೆಳೆಯರ ಬಳಗ ಹಾಗೂ ಸ್ಥಳೀಯ ಗ್ರಾಪಂ ಸದಸ್ಯರು ಹಾಗೂ ಸಾರ್ವಜನಿಕರು ಜೊತೆಯಾಗಿದ್ದರು.
ಈ ವೇಳೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಗುತ್ತಿಗಾರು-ಕಮಿಲ-ಬಳ್ಪ ರಸ್ತೆಯ ದೇವಸ್ಯ ಎಂಬಲ್ಲಿ ರಸ್ತೆ ಕುಸಿಯುವ ಭೀತಿಯ ಪ್ರದೇಶ ಎಂದು ಯುವಕರ ತಂಡ ಎಚ್ಚರಿಕೆಗಾಗಿ ರಿಬ್ಬನ್ ಅಳವಡಿಸಿದರು. ಇದು ಲೋಕೋಪಯೋಗಿ ಇಲಾಖೆಯ ಅಧೀನದ ರಸ್ತೆಯಾಗಿದ್ದು, ಈಗ ರಸ್ತೆ ಬದಿ ಕುಸಿಯುವ ಭೀತಿ ಇದ್ದು ಈಗಾಗಲೇ ಕೆಲವು ವಾಹನಗಳು ಸೈಡ್ ಕೊಡುವ ವೇಳೆ ಚರಂಡಿ ಬಿದ್ದ ಘಟನೆ ನಡೆದಿದೆ. ಇಲ್ಲಿ ವಾಹನಗಳು ಸೈಡ್ ಕೊಡಲೂ ಪರದಾಟ ನಡೆಸಬೇಕಾದ ಸ್ಥಿತಿ ಇತ್ತು. ಇದಕ್ಕಾಗಿ ಚರಂಡಿಗೆ ತಡೆಗೋಡೆ ಇಲ್ಲಿ ಅಗತ್ಯ ಇದೆ. ಲೋಕೋಪಯೋಗಿ ಇಲಾಖೆ ಸೇರಿದಂತೆ ಸಂಬಂಧಿತರು ಈ ಕಡೆ ಗಮನಹರಿಸಬೇಕಿದೆ. ಸದ್ಯ ಯುವಕರು ಎಚ್ಚರಿಕೆಗಾಗಿ ರಿಬ್ಬನ್ ಅಳವಡಿಕೆ ಕೆಲಸ ಮಾಡಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel