Advertisement
MIRROR FOCUS

ಯುಗಾದಿ ಹಾಗೂ ವಿಷು | ಶಾರ್ವರಿಯಿಂದ ಪ್ಲವ ಸಂವತ್ಸರ | ವಿಪ್ಲವಗಳು ದೂರವಾಗಲಿ- ಸರ್ವರಿಗೂ ನೆಮ್ಮದಿಯಾಗಲಿ |

Share

ಜೊತೆ ಜೊತೆಗೇ ಬಂದ ಹೊಸವರ್ಷದ ಹಬ್ಬಗಳಿಗೆ ಶುಭಾಶಯ.

ಯುಗಾದಿಯ ಬೇವು ಬೆಲ್ಲದ ಸವಿ, ವಿಷುವಿನ  ಕಣಿ ವೈಭವ ಎರಡು ಒಂದು ದಿನ ವ್ಯತ್ಯಾಸದಲ್ಲಿ  ಬಂದಿವೆ. ಯುಗಾದಿ, ವಿಷು  ಎರಡೂ  ನಮಗೆ ಹೊಸವರುಷದ ಸಂಭ್ರಮವೇ. ಕೆಲವೆಡೆ ಚಾಂದ್ರಮಾನ ಯುಗಾದಿಯ ಆಚರಣೆಯಾದರೆ ಉಳಿದೆಡೆಯಲ್ಲಿ ಸೌರಮಾನ ಯುಗಾದಿ ( ಬಿಸು)ವಿಗೆ  ಪ್ರಾಮುಖ್ಯತೆ.

ಯುಗಾದಿ   ಹಬ್ಬ ಬಂತೆಂದರೆ ಎಲ್ಲೆಲ್ಲೂ ಸಂತೋಷ, ಸಡಗರ ಅದರ ತಯಾರಿಯೇ ಬಲು ಜೋರು.  ಆದರೆ ಬೇರೆಲ್ಲ ಏನೇ ಗೌಜಿ ಗದ್ದಲಗಳಿದ್ದರೂ ಮುಖ್ಯ  ಪಾತ್ರ ವಹಿಸುವುದು ಬೇವು , ಬೆಲ್ಲ. ಬದುಕಿನಲ್ಲಿ  ಬೇವಿನ ಕಹಿ, ಬೆಲ್ಲದ ಸಿಹಿ ಎರಡನ್ನೂ  ಸಮಾನವಾಗಿ ಸ್ವೀಕರಿಸುವ ಮನೋಧರ್ಮವನ್ನು ಪ್ರತಿನಿಧಿಸುತ್ತವೆ.  ಬೆಲ್ಲದ ಸಿಹಿಯನ್ನು  ಸುಲಭವಾಗಿ, ಸಹಜವಾಗಿ ಸ್ವೀಕರಿಸಿದ ಮನಸು ಬೇವಿನ ಕಹಿಯನ್ನು  ಇಷ್ಟಪಡದು. ಆದರೆ ಬದುಕೆಂದರೆ  ಕಷ್ಟ , ಸುಖಗಳೆರಡೂ ಇರುತ್ತವೆ, ಒಂದೇ  ನಾಣ್ಯದ ಎರಡು ಮುಖಗಳಿದ್ದಂತೆ.  ಹೇಗೆ  ಯುಗಾದಿ ಬಂದಾಗ ಮರಗಳೆಲ್ಲ ಎಲೆಗಳನ್ನು ಉದುರಿಸಿ ಹೊಸ ಚಿಗುರುಗಳಿಂದ ಕಂಗೊಳಿಸುತ್ತವೆಯೋ  ಹಾಗೇ ಮನುಜರೂ ಕೂಡ. ಬಂದ ಕಷ್ಟಗಳನ್ನು  ಎದುರಿಸಿ ಮುನ್ನಡೆಯಲು  ಬರುವ ಹೊಸ ಸಂವತ್ಸರ ನಾಂದಿಯಾಗಲಿ.

‘ಶಾರ್ವರಿಯ ಶಬ್ದಾರ್ಥ ಕತ್ತಲು ,ಬರುವ  ಸಂವತ್ಸರ  ‘ಪ್ಲವ’ ದ ಅರ್ಥ ತೆಪ್ಪ, ದೋಣಿ .
ಶಾರ್ವರಿ ಸಂವತ್ಸರದಲ್ಲಿದ್ದ ಕೊರೊನಾ ದ  ಕಪಿಮುಷ್ಠಿಯಿಂದ ಪ್ಲವ ಸಂವತ್ಸರದಲ್ಲಿ ಬಿಡುಗಡೆ ದೊರೆಯ ಬಹುದೆಂಬ ನಿರೀಕ್ಷೆಯೊಂದಿಗೆ.
ವಿಷು ಅಥವಾ ಬಿಸುವಿನ ಪ್ರಮುಖ ಆಕರ್ಷಣೆಯೇ ವಿಷು ಕಣಿ.‌  ತರಕಾರಿ , ಹಣ್ಣುಗಳು, ತೆಂಗಿನಕಾಯಿ, ಅಕ್ಕಿ,  ಕನ್ನಡಿ, ಬೆಳ್ಳಿ ಬಂಗಾರ, ನಾಣ್ಯ, ವೀಳ್ಯದೆಲೆ, ಅಡಿಕೆ ಮೊದಲಾದ ಸಾಮಗ್ರಿಗಳನ್ನು ಹಿಂದಿನ ದಿನವೇ ದೇವರ ಕೋಣೆಯಲ್ಲಿ ಸರಿ ಮಾಡಿ ಇಡಲಾಗುತ್ತೆ.  ಇದಕ್ಕೇ ವಿಷುಕಣಿಯೆಂದು ಹೆಸರು. ನಮ್ಮ ಸಮೃದ್ಧಿಯ  ಸಂಕೇತ ಈ ವಿಷುಕಣಿ.  ಬೆಳಗ್ಗೆ ಎದ್ದ ಕೂಡಲೇ  ಮೊದಲು  ಕಣ್ತೆರೆಯುವುದು ವಿಷುಕಣಿಯ ಮುಂದೆಯೇ. ಮುಂಜಾನೆಯೇ  ಎದ್ದು ಸೀದಾ ದೇವರ ಕೋಣೆಗೆ  ಬಂದು ವಿಷು ಕಣಿಯನ್ನು ಕಣ್ತುಂಬಿಸಿಕೊಂಡು ನಮಸ್ಕರಿಸಿ ಮುಂದಿನ ಕಾರ್ಯಕ್ಕೆ ಸಜ್ಜಾಗುವುದು ನಮ್ಮ ದಕ್ಷಿಣಕನ್ನಡ, ಉಡುಪಿ ಕಾಸರಗೋಡು ಮೊದಲಾದ ಜಿಲ್ಲೆಗಳ ಜನರು ಪಾಲಿಸಿಕೊಂಡು ಬಂದ ಪದ್ಧತಿ.

ಈ ಪ್ಲವ ಸಂವತ್ಸರವು  ವಿಶ್ವಕ್ಕೇ ಹಬ್ಬಿದ ವೈರಸ್ ನ ಕತ್ತಲೆಯನ್ನು ಹೊಡೆದೋಡಿಸಿ ಜಗತ್ತಿಗೆ ಹೊಸ ಅಧ್ಯಾಯದ ನಾಂದಿಗೆ ಎಂಬ ಆಶಯದೊಂದಿಗೆ ಶುಭಹಾರೈಕೆ.

ಯುಗಾದಿ ಹಾಗೂ ವಿಷುವಿನ ಶುಭಾಶಯಗಳು.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 3-10-2026 | ಬಂಗಾಳಕೊಲ್ಲಿಯಿಂದ ತೇವಾಂಶದ ಗಾಳಿ – ಕರ್ನಾಟಕದಲ್ಲಿ ಮತ್ತೆ ಮಳೆ?

ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…

15 hours ago

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

20 hours ago

ಗೋಡಂಬಿ ಬೇರೆ ದೇಶಗಳಿಂದ… ಜಾಗತಿಕ ಮಾರುಕಟ್ಟೆ ವಿಯೆಟ್ನಾಂನ ಕೈಯಲ್ಲಿ..!

ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…

20 hours ago

ರೇಷನ್ ಕಾರ್ಡ್‌ ಇ-ಕೆವೈಸಿಗೆ ಇನ್ನು ಕ್ಯೂ ಬೇಕಿಲ್ಲ – ಮನೆಯಲ್ಲೇ ಇ-ಕೆವೈಸಿಗೆ ‘ಅನ್ನಸೇವೆ’ ಆ್ಯಪ್‌

ಪಡಿತರ ಚೀಟಿಗೆ ಆಧಾರ್‌ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…

20 hours ago

ಅಡಿಕೆ ವಹಿವಾಟಿನ ಹಿಂದೆ ಮತ್ತೊಂದು ದೊಡ್ಡ ತನಿಖೆ..? ₹1.3 ಕೋಟಿ ನಗದು ವಶ

ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…

21 hours ago

ಇಂಧನ ಮಾತ್ರವಲ್ಲ, ಕೃಷಿಗೂ ಹೊಸ ಮಾರುಕಟ್ಟೆ: ಎಥೆನಾಲ್‌ ಮಿಶ್ರಣ ಕೃಷಿ ವೈವಿಧ್ಯೀಕರಣಕ್ಕೆ ಹೆಜ್ಜೆ ಎಂದ ಗಡ್ಕರಿ

ಎಥೆನಾಲ್‌ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…

21 hours ago