ಸುಬ್ರಹ್ಮಣ್ಯದಲ್ಲಿ ಅಂಬುಲೆನ್ಸ್‌ ಸೇವೆ ಲೋಕಾರ್ಪಣೆ | ಒಂದು ತಿಂಗಳಲ್ಲಿ ಯೋಜನೆ ಪೂರೈಸಿದ “ಯುವತೇಜಸ್ಸು” | ಸಾಬೀತಾದ ಯುವಶಕ್ತಿಯ “ತೇಜಸ್ಸು” |

December 9, 2021
9:48 PM

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ಸಡಗರ. ಈ ನಡುವೆ ಯುವಶಕ್ತಿಯ ತೇಜಸ್ಸು ಎಲ್ಲೆಡೆಯೂ ಕಂಡಿತು. ಅದು ಆರೋಗ್ಯದ ಸೇವೆಯ ಮೂಲಕ…!. ಸುಬ್ರಹ್ಮಣ್ಯದಲ್ಲಿ ಯುವ ತೇಜಸ್ಸು ಟ್ರಸ್ಟ್ ವತಿಯಿಂದ ಅಂಬ್ಯುಲೆನ್ಸ್ ಲೋಕಾರ್ಪಣೆಯ ಕಾರ್ಯಕ್ರಮ ಅದು. ಆಧ್ಯಾತ್ಮ ಗುರು ವಿನಯ ಗುರೂಜಿ ಅವರು ಅಂಬುಲೆನ್ಸ್‌ ಸೇವೆ ಲೋಕಾರ್ಪಣೆ ಮಾಡಿದರು.ಯುವತೇಜಸ್ಸಿನಿಂದ ಇದು ಎರಡನೇ ಅಂಬುಲೆನ್ಸ್‌ ಸೇವೆ.

Advertisement
Advertisement
Advertisement

Advertisement

ಸಮಾಜ ಸೇವೆಯ ಉದ್ದೇಶವಿಟ್ಟುಕೊಂಡು ಹುಟ್ಟಿಕೊಂಡ ಯುವ ತೇಜಸ್ಸು ಒಂದಿಷ್ಟು ಸಮಾಜಕ್ಕಾಗಿ ಎಂಬ ಧ್ಯೇಯೋದ್ದೇಶದೊಂದಿಗೆ ಕೆಲಸ ಮಾಡುತ್ತಿದೆ. ಇದೀಗ ಯುವತೇಜಸ್ಸು  ವತಿಯಿಂದ ಸುಬ್ರಹ್ಮಣ್ಯದಲ್ಲಿ ಅಂಬ್ಯುಲೆನ್ಸ್ ಸೇವೆಯು ಪವಿತ್ರ ಷಷ್ಠಿಯ ದಿನದಂದು  ಲೋಕಾರ್ಪಣೆಗೊಂಡಿತು. ಯುವ ತೇಜಸ್ಸು ಬಳಗ ಇದುವರೆಗೆ ನೂರಾರು ಜನರ ನೋವಿಗೆ ಸ್ಪಂದಿಸಿ ನೆರವಾಗುವ ಮೂಲಕ ಸಮಾಜ ಸೇವೆ ಮಾಡುತ್ತಾ ಬಂದಿದೆ.ಇದೀಗ ಅಂಬುಲೆನ್ಸ್‌ ಸೇವೆಯ ಮೂಲಕ ಸಮಾಜಕ್ಕೆ ಬೆಳಕಾಗಿದೆ.

Advertisement

ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೊಂದು ಅಂಬ್ಯುಲೆನ್ಸ್ ಯೋಜನೆಯಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಅಂಬ್ಯುಲೆನ್ಸ್ ಖರೀದಿಗೆ ಬೇಕಾದ ಧನ ಸಹಾಯ ಸಂಗ್ರಹವಾಗಲು ಯುವ ತೇಜಸ್ಸಿನ ಎಲ್ಲಾ ಸದಸ್ಯರು ಒಂದಾಗಿ ಕೆಲಸ ಮಾಡಿದರು. ಅನೇಕ ದಾನಿಗಳು ಯುವ ತೇಜಸ್ಸಿನ ಪರವಾಗಿ ನಿಂತರು. ಹೀಗಾಗಿ ಅತಿ ಶೀಘ್ರದಲ್ಲಿ ಸಮಾಜಮುಖಿ ಕೆಲಸ ಮಾಡಲು ಸಾಧ್ಯವಾಯಿತು.ತುರ್ತು ಸಂದರ್ಭಗಳಲ್ಲಿ ಅಂಬ್ಯುಲೆನ್ಸ್ ನ ಸೇವೆ ಪಡೆಯಬಹುದಾಗಿದೆ.

ನೂತನ ಸೇವೆಯನ್ನು ಆಧ್ಯಾತ್ಮ ಗುರು  ವಿನಯ್ ಗುರೂಜಿ ಅವರು ಆಂಬ್ಯುಲೆನ್ಸ್ ಚಲಾಯಿಸಿ ಶುಭಾರ್ಶೀವಾದ ಮಾಡಿದರು.

Advertisement

ಈ ಸಂದರ್ಭ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಳದ ಕಾರ್ಯನಿರವಹಣಾಧಿಕಾರಿ ನಿಂಗಯ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ. ರಂಗಯ್ಯ ಶೆಟ್ಟಿಗಾರ್ , ಉದ್ಯಮಿ ರವಿ ಕಕ್ಕೆಪದವು ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರಿನ ಎಸ್‌ಆರ್‌ಕೆ ಲಾಡರ್ಸ ಮಾಲಕರು  ಕೇಶವ ಎ., ಶಿವಕುಮಾರ್ ಹೊಸೊಳಿಕೆ, ಅಶೋಕ್ ನೆಕ್ರಾಜೆ ಮೊದಲಾದವರು, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀವತ್ಸ ಬೆಂಗಳೂರು ಇದ್ದರು.

ಗ್ರಾಮ ಪಂಚಾಯತು ಸದಸ್ಯರುಗಳಾದ ಎಚ್‌.ಎಲ್. ವೆಂಕಟೇಶ್ ಹಾಗೂ  ಭಾರತಿ ದಿನೇಶ್, ವಿಮಲಾ ರಂಗಯ್ಯ, ಪುಷ್ಷಾ ಡಿ ಕಾನತ್ತೂರು,  ಶ್ಯಾಮಲ ಕಲ್ಲಾಜೆ ಉಪಸ್ಥಿತರಿದ್ದರು.

Advertisement

ಅಶ್ವಮೇಧ,ಯುವ ಬ್ರಿಗೇಡ್,ಗಾಂಗೇಯ ಕ್ರಿಕೆಟರ್ಸ್,ಜೆಸಿಐ ಕುಕ್ಕೆ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ, ಶ್ರೀರಾಮ್ ಕ್ರಿಕೆಟರ್ಸ್ ದೇವರಹಳ್ಳಿ, ಕುಕ್ಕೆಶ್ರೀ ಟ್ಯಾಕ್ಸಿ ಚಾಲಕ ಮಾಲ್ಹಕರು, ವರ್ತಕರ ಸಂಘದ ಪದಾಧಿಕಾರಿಗಳು,
ಕುಕ್ಕೆಶ್ರೀ ಅಟೋ ಚಾಲಕ ಮಾಲಕರು, ತುಳುವಪ್ಪೆ ಜೋಕುಲು ವಾಟ್ಸಾಪ್ ಗ್ರೂಪ್, ಬಿ.ಎಮ್.ಎಸ್ ಅಟೋ ಚಾಲಕ ಮಾಲಕರು ಇದರ ಪದಾಧಿಕಾರಿಗಳು,ಯುವ ತೇಜಸ್ಸಿನ ಸದಸ್ಯರು ಹಾಗೂ ದಾನಿಗಳು ಮತ್ತು ಹಿತೈಷಿಗಳು  ಜೊತೆಯಲ್ಲಿದ್ದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 28-03-2024 | ಕೆಲವು ಕಡೆ ತುಂತುರು ಮಳೆ | ಮಾ.31 ನಂತರ ಕೆಲವು ಕಡೆ ಸಾಮಾನ್ಯ ಮಳೆ ನಿರೀಕ್ಷೆ |
March 28, 2024
1:19 PM
by: ಸಾಯಿಶೇಖರ್ ಕರಿಕಳ
ಬರ ಹಿನ್ನೆಲೆ | ಮೈಸೂರು ಜಿಲ್ಲೆಯಲ್ಲಿ ಪಂಪ್‌ಸೆಟ್ ಬಳಸಿ ಕೃಷಿಗೆ ನದಿ ನೀರು ಬಳಕೆ ನಿಷೇಧ |
March 27, 2024
10:01 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಪ್ರಕರಣಗಳಲ್ಲಿ ದೂರು ದಾಖಲಾಗುತ್ತಿಲ್ಲವೇಕೆ…? | ಆರೋಪಿಗಳು ಪತ್ತೆಯಾಗುತ್ತಿಲ್ಲವೇಕೆ…? |
March 27, 2024
9:32 PM
by: ದ ರೂರಲ್ ಮಿರರ್.ಕಾಂ
Karnataka Weather | 27-03-2024 | ರಾಜ್ಯದಲ್ಲಿ ಒಣ ಹವೆ | ಕೆಲವು ಕಡೆ ತುಂತುರು ಮಳೆ ಸಾಧ್ಯತೆ |
March 27, 2024
12:49 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror