ಖಗೋಳದ ಅಪರೂಪ ವಿದ್ಯಮಾನ ಶೂನ್ಯ ನೆರಳು ದಿನ. ಆ.18 ರಂದು ಈ ಅಪರೂಪದ ವಿದ್ಯಮಾನವನ್ನು ವೀಕ್ಷಿಸಬಹುದಾಗಿದೆ. ಈ ವಿಶೇಷ ವಿದ್ಯಮಾನ ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಕೆಲವು ಪ್ರಾತ್ಯಕ್ಷಿಕೆಗಳನ್ನು ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದೆ. ಆಸಕ್ತರು ವಿದ್ಯಮಾನದ ವಿವರಣೆಗಳನ್ನು ತಿಳಿಯಲು ಹಾಗೂ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಲು ಅವಕಾಶವಿದೆ.ಬೆಂಗಳೂರಿನಲ್ಲಿ ಏಪ್ರಿಲ್ 25 ರಂದು ಈ ವಿದ್ಯಮಾನ ನಡೆದಿತ್ತು. ಈ ವರ್ಷ ಎರಡನೇ ಬಾರಿಗೆ ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ ವೀಕ್ಷಣೆಗೆ ಸಿದ್ಧತೆ ನಡೆದಿದೆ.
ಬೆಂಗಳೂರು ನಗರವು 2023 ರಲ್ಲಿ ಎರಡನೇ ಬಾರಿಗೆ ಶೂನ್ಯ ನೆರಳು ದಿನ ಎಂದು ಕರೆಯಲ್ಪಡುವ ಖಗೋಳ ವಿದ್ಯಮಾನವನ್ನು ವೀಕ್ಷಿಸಲು ಸಜ್ಜಾಗಿದೆ. ಈ ವಿಶಿಷ್ಟ ಘಟನೆಯು ಆಗಸ್ಟ್ 18 ರಂದು ನಡೆಯಲಿದೆ. ಸಾಮಾನ್ಯವಾಗಿ ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ ಇರುವ ಪ್ರದೇಶಗಳ ನಡುವೆ ಸಂಭವಿಸುತ್ತದೆ.ಅಕ್ಷಾಂಶದ ಮೇಲೆ ಹೊಂದಿಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಸಂಭವಿಸುತ್ತದೆ.
ಶೂನ್ಯ ನೆರಳು ದಿನವು +23.5 ಮತ್ತು -23.5 ಡಿಗ್ರಿ ಅಕ್ಷಾಂಶದ ನಡುವಿನ ಸ್ಥಳಗಳಲ್ಲಿ ವರ್ಷಕ್ಕೆ ಎರಡು ಬಾರಿ ಸಂಭವಿಸುವ ಖಗೋಳ ವಿದ್ಯಮಾನವಾಗಿದೆ. ಅಂದರೆ ನಿಖರವಾಗಿ 12:24 ಕ್ಕೆ, ಸೂರ್ಯನನ್ನು ನೇರವಾಗಿ ತಲೆಯ ಮೇಲೆ ಬರುತ್ತಾನೆ. ಈ ಸಮಯದಲ್ಲಿ ಯಾವುದೇ ಸ್ಥಾಯಿ ವಸ್ತು, ಒಬ್ಬ ವ್ಯಕ್ತಿ ಅಥವಾ ಯಾವುದೇ ವಸ್ತುವಿನ ನೆರಳು ನೆಲದ ಮೇಲೆ ಬೀಳುವುದಿಲ್ಲ.
ಈ ಬಾರಿ ಈಗಾಗಲೇ ಏಪ್ರಿಲ್ ತಿಂಗಳಲ್ಲಿ ಈ ವಿದ್ಯಮಾನಕ್ಕೆ ಬೆಂಗಳೂರಿನ ಜನರು ಸಾಕ್ಷಿಯಾಗಿದ್ದರು. ಈ ವರ್ಷದ ಎರಡನೇ ಬಾರಿಯ ಈ ವಿದ್ಯಮಾನ ಆಗಸ್ಟ್ 18ರಂದು ಸಂಭವಿಸಲಿದೆ. ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ ಇರುವ ವ್ಯತ್ಯಾಸದಲ್ಲಿ ಈ ಬೆಳವಣಿಗೆ ನಡೆಯುತ್ತದೆ. ದಕ್ಷಿಣಾಯನ ಹಾಗೂ ಉತ್ತರಾಯಣದಲ್ಲಿ ತಲಾ 1 ಬಾರಿ ಶೂನ್ಯ ನೆರಳಿನ ದಿನ ಬರುತ್ತದೆ ಎಂದು ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾ ಹೇಳುತ್ತದೆ.