Advertisement
ಸುದ್ದಿಗಳು

#ZeroShadowDay | ಆ.18 ರಂದು ಶೂನ್ಯ ನೆರಳು ದಿನ | ಖಗೋಳದ ಅಪರೂಪದ ವಿದ್ಯಮಾನ |

Share

ಖಗೋಳದ ಅಪರೂಪ ವಿದ್ಯಮಾನ ಶೂನ್ಯ ನೆರಳು ದಿನ. ಆ.18 ರಂದು ಈ ಅಪರೂಪದ ವಿದ್ಯಮಾನವನ್ನು ವೀಕ್ಷಿಸಬಹುದಾಗಿದೆ. ಈ ವಿಶೇಷ ವಿದ್ಯಮಾನ ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಕೆಲವು ಪ್ರಾತ್ಯಕ್ಷಿಕೆಗಳನ್ನು ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದೆ. ಆಸಕ್ತರು ವಿದ್ಯಮಾನದ ವಿವರಣೆಗಳನ್ನು ತಿಳಿಯಲು ಹಾಗೂ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಲು ಅವಕಾಶವಿದೆ.ಬೆಂಗಳೂರಿನಲ್ಲಿ ಏಪ್ರಿಲ್ 25 ರಂದು ಈ ವಿದ್ಯಮಾನ ನಡೆದಿತ್ತು. ಈ ವರ್ಷ ಎರಡನೇ ಬಾರಿಗೆ ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ ವೀಕ್ಷಣೆಗೆ ಸಿದ್ಧತೆ ನಡೆದಿದೆ.

ಬೆಂಗಳೂರು ನಗರವು 2023 ರಲ್ಲಿ ಎರಡನೇ ಬಾರಿಗೆ ಶೂನ್ಯ ನೆರಳು ದಿನ ಎಂದು ಕರೆಯಲ್ಪಡುವ ಖಗೋಳ ವಿದ್ಯಮಾನವನ್ನು ವೀಕ್ಷಿಸಲು ಸಜ್ಜಾಗಿದೆ. ಈ ವಿಶಿಷ್ಟ ಘಟನೆಯು ಆಗಸ್ಟ್ 18 ರಂದು ನಡೆಯಲಿದೆ. ಸಾಮಾನ್ಯವಾಗಿ ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ ಇರುವ ಪ್ರದೇಶಗಳ ನಡುವೆ ಸಂಭವಿಸುತ್ತದೆ.ಅಕ್ಷಾಂಶದ ಮೇಲೆ ಹೊಂದಿಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಸಂಭವಿಸುತ್ತದೆ.

ಶೂನ್ಯ ನೆರಳು ದಿನವು +23.5 ಮತ್ತು -23.5 ಡಿಗ್ರಿ ಅಕ್ಷಾಂಶದ ನಡುವಿನ ಸ್ಥಳಗಳಲ್ಲಿ ವರ್ಷಕ್ಕೆ ಎರಡು ಬಾರಿ ಸಂಭವಿಸುವ ಖಗೋಳ ವಿದ್ಯಮಾನವಾಗಿದೆ. ಅಂದರೆ ನಿಖರವಾಗಿ 12:24  ಕ್ಕೆ, ಸೂರ್ಯನನ್ನು ನೇರವಾಗಿ ತಲೆಯ ಮೇಲೆ ಬರುತ್ತಾನೆ. ಈ ಸಮಯದಲ್ಲಿ ಯಾವುದೇ ಸ್ಥಾಯಿ ವಸ್ತು, ಒಬ್ಬ ವ್ಯಕ್ತಿ ಅಥವಾ ಯಾವುದೇ ವಸ್ತುವಿನ ನೆರಳು ನೆಲದ ಮೇಲೆ ಬೀಳುವುದಿಲ್ಲ.

ಈ ಬಾರಿ ಈಗಾಗಲೇ ಏಪ್ರಿಲ್‌ ತಿಂಗಳಲ್ಲಿ ಈ ವಿದ್ಯಮಾನಕ್ಕೆ ಬೆಂಗಳೂರಿನ ಜನರು ಸಾಕ್ಷಿಯಾಗಿದ್ದರು. ಈ ವರ್ಷದ ಎರಡನೇ ಬಾರಿಯ ಈ ವಿದ್ಯಮಾನ ಆಗಸ್ಟ್‌ 18ರಂದು ಸಂಭವಿಸಲಿದೆ. ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ ಇರುವ ವ್ಯತ್ಯಾಸದಲ್ಲಿ ಈ ಬೆಳವಣಿಗೆ ನಡೆಯುತ್ತದೆ. ದಕ್ಷಿಣಾಯನ ಹಾಗೂ ಉತ್ತರಾಯಣದಲ್ಲಿ ತಲಾ 1 ಬಾರಿ ಶೂನ್ಯ ನೆರಳಿನ ದಿನ ಬರುತ್ತದೆ  ಎಂದು ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾ ಹೇಳುತ್ತದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಶಬರಿಮಲೆ ಯಾತ್ರೆ – ಆನ್‌ಲೈನ್ ಕೊಠಡಿ ಬುಕ್ಕಿಂಗ್ ಮಿತಿ 400ಕ್ಕೆ ಹೆಚ್ಚಳ – ಅ. 7ರಿಂದ ನೋಂದಣಿ ಆರಂಭ

ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…

1 day ago

ಬೇವು ಲೇಪಿತ ಯೂರಿಯಾ ಬಳಕೆಯಿಂದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ

ಕೇಂದ್ರ ಸರ್ಕಾರ 2015ರಲ್ಲಿ ದೇಶೀಯ ಹಾಗೂ ಆಮದು ಯೂರಿಯಾಗೆ ಬೇವು ಲೇಪನ ಕಡ್ಡಾಯಗೊಳಿಸುವ…

1 day ago

ಮನೆ ಎಂದರೆ ಗೋಡೆಗಳಲ್ಲ , ನೆಮ್ಮದಿಯನ್ನು ಕಟ್ಟುವ ಜೀವನಕಲೆ

ಮನೆತನವನ್ನು ಕಟ್ಟುವುದು ಕೇವಲ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದಲ್ಲ; ಕುಟುಂಬದ ಸದಸ್ಯರ ನಡುವೆ ಪ್ರೀತಿ,…

1 day ago

ಮಿಜೋರಾಂ ಮೂಲಕ 3,103 ಮೆಟ್ರಿಕ್ ಟನ್ ಅಡಿಕೆ ಕಳ್ಳಸಾಗಣೆ ಆರೋಪ – ಮ್ಯಾನ್ಮಾರ್‌ ಜಾಲ ಪತ್ತೆ

ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಸುಮಾರು ₹1,022 ಕೋಟಿ ಮೌಲ್ಯದ 3,103 ಮೆಟ್ರಿಕ್ ಟನ್…

1 day ago

ಹವಾಮಾನ ವರದಿ | 08-10-2026 | ಅ.11ರಿಂದ ಮಳೆ ಇಳಿಕೆ; ಅ.15ರಿಂದ ಹಿಂಗಾರು ಮಳೆ ಆರಂಭದ ಸೂಚನೆ

ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…

2 days ago

ಮನಸ್ಸಿನಲ್ಲಿರುವ ಮಾತು ಹೇಳಿಬಿಡಿ… ಬದುಕಿಗೊಂದು ತಿರುವು ಸಿಗಬಹುದು..!

ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…

2 days ago