ಅ.22 ರಿಂದ ನ.8 ಸುಳ್ಯದಲ್ಲಿ ತೂಕ, ಅಳತೆ ಸಾಧನಗಳಿಗೆ ಮುದ್ರೆ ಶಿಬಿರ

October 19, 2019
10:00 AM

ಸುಳ್ಯ: ಕಾನೂನು ಮಾಪನಶಾಸ್ತ್ರ ನಿರೀಕ್ಷಕರು ಪುತ್ತೂರು ಕಚೇರಿಯಿಂದ ತೂಕ, ಅಳತೆ ಮತ್ತು ತೂಕದ ಸಾಧನಗಳ 2019 ನೇ ಸಾಲಿನ ವಾರ್ಷಿಕ ಸತ್ಯಾಪನೆ ಮುದ್ರೆ ಶಿಬಿರವು ಸುಳ್ಯದಲ್ಲಿ ಅಕ್ಟೋಬರ್ 22 ರಿಂದ ನವೆಂಬರ್ 8 ರವರಗೆ ನಡೆಯಲಿದೆ.

ಸುಳ್ಯ ಗಾಂಧಿನಗರದ ಸರಕಾರಿ ಪ್ರೌಢಶಾಲೆ ಮೈದಾನದ ಎದುರುಗಡೆ ಇರುವ ಎಸ್.ಜಿ ಸ್ಟೋರ್ ಬಿಲ್ಡಿಂಗ್‍ನ ಮೊದಲನೇ ಮಹಡಿಯಲ್ಲಿ  ಅಕ್ಟೋಬರ್ 22 ರಿಂದ ನವೆಂಬರ್ 8 ರವರಗೆ ಶಿಬಿರ ನಡೆಯಲಿದೆ. (ಪ್ರತಿ ಸೋಮವಾರ ಮತ್ತು ಸರಕಾರಿ ರಜೆ ದಿನ ಹೊರತುಪಡಿಸಿ)  ಸುಳ್ಯ ಶಿಬಿರ ವ್ಯಾಪ್ತಿಯಲ್ಲಿನ ಜಾಲ್ಸೂರು, ಸುಳ್ಯ, ಅಜ್ಜಾವರ, ಕಲ್ಲುಗುಂಡಿ, ಕುಕ್ಕುಜಡ್ಕ, ದೊಡ್ಡತೋಟ, ಎಲಿಮಲೆ, ಮಂಡೆಕೋಲು, ಸಂಪಾಜೆ, ಉಬರಡ್ಕ, ಉಬರಡ್ಕ ಮಿತ್ತೂರು, ಕನಕಮಜಲು, ಮರ್ಕಂಜ, ತೋಡಿಕಾನ, ಅರಂತೋಡು, ಕೋಡಿಯಾಳ,ಆಲೆಟ್ಟಿ ವ್ಯಾಪ್ತಿಯ ವ್ಯಾಪಾರಸ್ಥರು ಮತ್ತು ತೂಕ ಮತ್ತು ಅಳತೆ ಸಾಧನಗಳ ಬಳಕೆದಾರರು ತಾವು ಬಳಸುವ ತೂಕ , ಅಳತೆ ಮತ್ತು ತೂಕದ ಸಾಧನಗಳನ್ನು ಶಿಬಿರಕ್ಕೆ ಹಾಜರುಪಡಿಸಿ ಸತ್ಯಾಪನೆ ಮುದ್ರೆ ಹಾಕಿಸಬೇಕು ಎಂದು ಕಾನೂನು ಮಾಪನಶಾಸ್ತ್ರ ನಿರೀಕ್ಷಕರು ಪುತ್ತೂರು ಉಪವಿಭಾಗ ಪುತ್ತೂರು ಇವರ ಪ್ರಕಟಣೆ ತಿಳಿಸಿದೆ.

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗಗನಯಾನಿ ಸುನಿತಾ ವಿಲಿಯಮ್ಸ್‌ಗೆ 9 ತಿಂಗಳ ಬಾಹ್ಯಾಕಾಶ ವಾಸ | ಭೂಮಿಗೆ ಕರೆತರುವ ಪ್ರಯತ್ನಕ್ಕೆ ಚಾಲನೆ | ನಾಸಾ ಹೇಳಿಕೆ |
March 17, 2025
8:07 AM
by: The Rural Mirror ಸುದ್ದಿಜಾಲ
ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಪೋಷಕರನ್ನು ಬಿಟ್ಟು ಮಕ್ಕಳು ನಾಪತ್ತೆ…!
March 17, 2025
7:02 AM
by: The Rural Mirror ಸುದ್ದಿಜಾಲ
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್
March 17, 2025
6:42 AM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ಶೀಘ್ರ 5 ಸಾವಿರ ಶಿಕ್ಷಕರ ನೇಮಕ
March 17, 2025
6:36 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror